News Karnataka Kannada
Thursday, May 02 2024
ಕಲಬುರಗಿ

RCB ಸ್ಟಾರ್‌ ಆಟಗಾರ್ತಿ ಶ್ರೇಯಾಂಕ ಪಾಟೀಲ್​ಗೆ ತವರಿನಲ್ಲಿ ಅದ್ಧೂರಿ ಸ್ವಾಗತ

ಕರ್ನಾಟಕ ಕ್ರಶ್, ಟಗರು ಪುಟ್ಟಿ ಎಂದೆಲ್ಲಾ ಖ್ಯಾತಿ ಪಡೆದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ಸ್ಟಾರ್‌ ಆಟಗಾರ್ತಿ ಶ್ರೇಯಾಂಕ ಪಾಟೀಲ್‌ ಅವರಿಗೆ ತವರೂರಾದ ಕಲಬುರಗಿಯಲ್ಲಿ ಭರ್ಜರಿಯಾಗಿ ಸ್ವಾಗತ ಮಾಡಲಾಯಿತು.
Photo Credit : NewsKarnataka

ಕಲಬುರಗಿ:  ಕರ್ನಾಟಕ ಕ್ರಶ್, ಟಗರು ಪುಟ್ಟಿ ಎಂದೆಲ್ಲಾ ಖ್ಯಾತಿ ಪಡೆದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ಸ್ಟಾರ್‌ ಆಟಗಾರ್ತಿ ಶ್ರೇಯಾಂಕ ಪಾಟೀಲ್‌ ಅವರಿಗೆ ತವರೂರಾದ ಕಲಬುರಗಿಯಲ್ಲಿ ಭರ್ಜರಿಯಾಗಿ ಸ್ವಾಗತ ಮಾಡಲಾಯಿತು.

RCB ತಂಡದ ಆಟಗಾರ್ತಿ ಶ್ರೇಯಾಂಕಾ ಪಾಟೀಲ್​ ಅವರು ಸ್ವಂತ ಊರು ಜೇವರ್ಗಿ ತಾಲ್ಲೂಕಿನ ಕೋಳಕೂರು ಗ್ರಾಮಕ್ಕೆ ಹೋಗಿದ್ದಾರೆ. ಈ ವೇಳೆ ಹುಟ್ಟೂರಿಗೆ ಬಂದ ಶ್ರೇಯಾಂಕಾ ಪಾಟೀಲ್​ಗೆ ಹೆಮ್ಮೆಯಿಂದ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.

ಶ್ರೇಯಾಂಕಾ ಅವರ ಮೇಲೆ ಹೂ ಮಳೆ ಗೈದ ಗ್ರಾಮಸ್ಥರು ಶ್ರೀ ಸಿದ್ಧಬಸವೇಶ್ವರ ದೇವಸ್ಥಾನದವರೆಗೂ ಅದ್ಧೂರಿಯಾಗಿ ಮೆರವಣಿಗೆ ಮಾಡಿ ಸ್ವಾಗತಿಸಿದ್ದಾರೆ. ಬಳಿಕ ಸಿದ್ದಬಸವೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಶ್ರೇಯಾಂಕಾ ಪಾಟೀಲ್​ಗೆ ಹಾಗೂ ಕುಟುಂಬಸ್ಥರಿಗೆ ಗ್ರಾಮಸ್ಥರು ಸನ್ಮಾನ ಮಾಡಿದ್ದಾರೆ. ಈ ವೇಳೆ ಮತ್ತಷ್ಟು ಉನ್ನತ ಮಟ್ಟಕ್ಕೆ ಶ್ರೇಯಾಂಕಾ ಪಾಟೀಲ್ ಬೆಳೆಯಲೆಂದು ಹಾರೈಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು