ರಾಜಸ್ಥಾನ: ಕಳೆದ ವಾರವಸಷ್ಟೆ ಮದುವೆ ನಿಶ್ಚಯಿಸಿಕೊಂಡಿದ್ದ ತಾಪ್ಸಿ ಪನ್ನು ಗುಟ್ಟಾಗಿ ವಿವಾಹವಾಗಿದ್ದಾರೆ ಎಂದು ಚರ್ಚೆ ನಡೆದಿತ್ತು ಇದೀಗ ಗುಟ್ಟು ರಟ್ಟಾಗಿದ್ದು ಅವರ ಮದುವೆ ವಿಡಿಯೋ ಸಖತ್ ವೈರಲ್ ಆಗಿದೆ.
ಬಹುಭಾಷಾ ನಟಿ ತಾಪ್ಸಿ ಪನ್ನು ಬಹುಕಾಲದ ಗೆಳೆಯ, ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋ ಜತೆ ಮಾರ್ಚ್ 23 ರಂದು ವಿವಾಹವಾಗಿದ್ದಾರೆ. ನಟಿ ವಧುವಿನ ಬಟ್ಟೆಯಲ್ಲಿ ತಾಪ್ಸಿ ಪನ್ನು ರೆಡ್ ಕಲರ್ ಹೆವಿ ವರ್ಕ್ ಡ್ರೆಸ್ ಧರಿಸಿಕೊಂಡು ಮಸ್ತ್ ಡ್ಯಾನ್ಸ್ ಡ್ಯಾನ್ಸ್ ಮಾಡುತ್ತಾ ವೇದಿಕೆ ಏರುತ್ತಿದ್ದಾರೆ.
ಹತ್ತಿರದ ಸ್ನೇಹಿತರು ಮತ್ತು ಕುಟುಂಬದವರನ್ನು ಮಾತ್ರ ಮದುವೆಗೆ ಆಹ್ವಾನಿಸಗಾಗಿತ್ತು ಎಂದು ತಿಳಿದು ಬಂದಿದೆ. ಸದ್ಯ ನಟಿ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.