Bengaluru 22°C
Ad

ಮಾರಕಾಸ್ತ್ರಗಳನ್ನು ಹಿಡಿದು ದರೋಡೆಗೆ ಯತ್ನ: ಬೆಚ್ಚಿಬಿದ್ದ ದಕ್ಷಿಣಕಾಶಿ

ಇಬ್ಬರು ಮುಸುಕುಧಾರಿಗಳು ಮಾರಕಾಸ್ತ್ರಗಳನ್ನು ಹಿಡಿದು ದರೋಡೆಗೆ ಯತ್ನಿಸಿರುವ ಭಯಾನಕ ಘಟನೆ ನಂಜನಗೂಡು ಪಟ್ಟಣದ ವಿದ್ಯಾನಗರ ಮತ್ತು ಗೌತಮ ಬಡಾವಣೆಗಳಲ್ಲಿ ನಿನ್ನೆ ತಡರಾತ್ರಿ ಕಂಡುಬಂದಿದೆ. 

ನಂಜನಗೂಡು: ಇಬ್ಬರು ಮುಸುಕುಧಾರಿಗಳು ಮಾರಕಾಸ್ತ್ರಗಳನ್ನು ಹಿಡಿದು ದರೋಡೆಗೆ ಯತ್ನಿಸಿರುವ ಭಯಾನಕ ಘಟನೆ ನಂಜನಗೂಡು ಪಟ್ಟಣದ ವಿದ್ಯಾನಗರ ಮತ್ತು ಗೌತಮ ಬಡಾವಣೆಗಳಲ್ಲಿ ನಿನ್ನೆ ತಡರಾತ್ರಿ ಕಂಡುಬಂದಿದೆ.

ಪೊಲೀಸರು ಅಲರ್ಟ್ ಆಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಭಾರಿ ಅನಾಹುತ ಸೃಷ್ಟಿಯಾಗಲಿದೆ. ರಾತ್ರಿ ಗಸ್ತು ಟೈಟ್ ಮಾಡದಿದ್ದಲ್ಲಿ ದರೋಡೆಕೋರರು ಪೊಲೀಸರ ನಿದ್ದೆ ಕೆಡಿಸಲಿದ್ದಾರೆ. ಇಬ್ಬರು ಮುಸುಕುಧಾರಿಗಳ ಚಲನವಲನಗಳನ್ನು ಗಮನಿಸಿದರೆ ನಂಜನಗೂಡಿನ ಜನತೆ ಕಂಗಾಲಾಗುವುದು ಗ್ಯಾರಂಟಿ.

ಇವತ್ತು ದರೋಡೆಕೋರರ ಸಂಚು ವಿಫಲವಾಗಿದೆ. ಹೀಗೆ ನಿರ್ಲಕ್ಷ್ಯ ಮುಂದುವರೆದಲ್ಲಿ ಭಾರಿ ದಂಡ ಕಟ್ಟಬೇಕಾಗುತ್ತದೆ ಜಿಲ್ಲಾ ಪೊಲೀಸರಿಗೆ ಇದು ಎಚ್ಚರಿಕೆಯ ಗಂಟೆಯಾಗಿದೆ. ಇಬ್ಬರು ಮುಸುಕು ದಾರಿಗಳು ಕೈಯಲ್ಲಿ ಮಾರಕಸ್ತ್ರಗಳನ್ನು ಹಿಡಿದು ಮತ್ತೊಂದು ಕೈಯಲ್ಲಿ ಟಾರ್ಚ್ ಹಿಡಿದು ರಾಜಾರೋಷವಾಗಿ ಮನೆಗಳ ಮುಂದೆ ಓಡಾಡಿದ್ದಾರೆ. ಒಂದು ಮನೆಗೆ ನುಗ್ಗಿದ ಖದೀಮರು ಕೆಲಕಾಲ ಅಡ್ಡಾಡಿ ಬರಿಗೈಲಿ ಹಿಂದಿರುಗಿದ್ದಾರೆ.

ಮ (3)

ಮನೆಗಳಲ್ಲಿ ಅಳವಡಿಸಲಾದ ಸಿಸಿ ಕ್ಯಾಮರಾದಲ್ಲಿ ದುಷ್ಕರ್ಮಿಗಳ ಚಲನವಲನ ಸೆರೆಯಾಗಿದೆ. ಅದೃಷ್ಟವಶಾತ್ ನಿನ್ನೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ದರೊಡೆಕೋರರ ಸ್ಕೆಚ್ ವಿಫಲವಾಗಿದೆ. ಇತ್ತೀಚೆಗಂತೂ ನಂಜನಗೂಡು ವ್ಯಾಪ್ತಿಯಲ್ಲಿ ಸಾಕಷ್ಟು ಕ್ರೈಂ ಪ್ರಕರಣಗಳು ದಾಖಲಾಗಿವೆ. ರಾತ್ರಿ ಪಾಳಿಯ ಪೊಲೀಸರ ಗಸ್ತು ಸ್ಥಗಿತವಾಗಿರುವುದೇ ಇಂತಹ ಪ್ರಕರಣಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ.

ನಂಜನಗೂಡಿನಲ್ಲಿ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಪೊಲೀಸರ ಬೇಜವಾಬ್ದಾರಿತನದಿಂದ ಈಗಾಗಲೇ ನಂಜನಗೂಡು ಪಟ್ಟಣದ ಆರ್ ಪಿ ರಸ್ತೆ ಮತ್ತು ಎಂ ಜಿ ರಸ್ತೆಗಳಲ್ಲಿ ಹಾಡು ಹಗಲೇ ಮಹಿಳೆಯರ ಕುತ್ತಿಗೆಯಲ್ಲಿರುವ ಮಾಂಗಲ್ಯ ಸರಗಳನ್ನು ಖದೀಮರು ಕಿತ್ತೊಯ್ಯುತ್ತಿದ್ದಾರೆ.

ಬ್ಯಾಂಕುಗಳಲ್ಲಿ ಹಣ ಡ್ರಾ ಮಾಡಿಕೊಳ್ಳಲು ಬಂದ ಜನರ ಲಕ್ಷ ಲಕ್ಷ ಹಣವನ್ನು ಕಳ್ಳರ ಪಾಲಾಗುತ್ತಿದೆ. ವ್ಯಕ್ತಿಯೊಬ್ಬನ ತಲೆಯ ಮೇಲೆ ಕಲ್ಲು ಎತ್ತಿ ಕೊಲೆ ಮಾಡಿರುವ ಪ್ರಕರಣ ಇನ್ನೂ ಮಾಸದಿರುವಾಗಲೇ ದರೋಡೆಕೋರರ ಸಂಚು ಸಾರ್ವಜನಿಕರ ನಿದ್ದೆಗೆಡಿಸಿದೆ. ನಂಜನಗೂಡು ಪಟ್ಟಣದ ವಿದ್ಯಾನಗರ ಮತ್ತು ಗೌತಮ ಬಡಾವಣೆಗಳಲ್ಲಿ ಒಬ್ಬಂಟಿಯಾಗಿ ವಾಸಿಸುವ ಮನೆಗಳೇ ಹೆಚ್ಚು ಇವೆ.

ಇವುಗಳು ಖದೀಮರಿಗೆ ಟಾರ್ಗೆಟ್ ಆಗುತ್ತಿವೆ. ಇನ್ನಾದರೂ ಸ್ಥಳೀಯ ಶಾಸಕರಾದ ದರ್ಶನ್ ಧ್ರುವನಾರಾಯಣ್ ರವರು ಎಚ್ಚೆತ್ತುಕೊಂಡು ಪೊಲೀಸ್ ಇಲಾಖೆಗೆ ಸರ್ಜರಿ ಮಾಡಬೇಕಾಗಿದೆ.

Ad
Ad
Nk Channel Final 21 09 2023
Ad