Bengaluru 25°C
Ad

ಕಟೀಲು ಶ್ರೀದುರ್ಗಾ ಪರಮೇಶ್ವರಿ ಕ್ಷೇತ್ರಕ್ಕೆ ಸ್ವರ್ಣಪಾದುಕೆ ಸಮರ್ಪಣೆ

ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ 36ನೆಯ ಅಧಿಪತಿಗಳಾದ ಜಗದ್ಗುರು ಶ್ರೀಭಾರತೀ ತೀರ್ಥ ಮಹಾಸ್ವಾಮಿಗಳವರ ಸನ್ಯಾಸ ಸ್ವೀಕಾರ ಸುವರ್ಣಮಹೋತ್ಸವದ ಸ್ಮರಣಾರ್ಥ ಕಟೀಲು ಶ್ರೀದುರ್ಗಾ ಪರಮೇಶ್ವರಿ ಕ್ಷೇತ್ರಕ್ಕೆ ಶೃಂಗೇರಿ ಶಾರದಾಪೀಠದ ವತಿಯಿಂದ 40 ಲಕ್ಷ ರೂಪಾಯಿ ಮೌಲ್ಯದ ಸ್ವರ್ಣಪಾದುಕೆ ಹಾಗೂ ಒಡ್ಯಾಣವನ್ನು ಸಮರ್ಪಿಸಲಾಗಿದೆ.

ಮಂಗಳೂರು: ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ 36ನೆಯ ಅಧಿಪತಿಗಳಾದ ಜಗದ್ಗುರು ಶ್ರೀಭಾರತೀ ತೀರ್ಥ ಮಹಾಸ್ವಾಮಿಗಳವರ ಸನ್ಯಾಸ ಸ್ವೀಕಾರ ಸುವರ್ಣಮಹೋತ್ಸವದ ಸ್ಮರಣಾರ್ಥ ಕಟೀಲು ಶ್ರೀದುರ್ಗಾ ಪರಮೇಶ್ವರಿ ಕ್ಷೇತ್ರಕ್ಕೆ ಶೃಂಗೇರಿ ಶಾರದಾಪೀಠದ ವತಿಯಿಂದ 40 ಲಕ್ಷ ರೂಪಾಯಿ ಮೌಲ್ಯದ ಸ್ವರ್ಣಪಾದುಕೆ ಹಾಗೂ ಒಡ್ಯಾಣವನ್ನು ಸಮರ್ಪಿಸಲಾಗಿದೆ.

ಶ್ರೀಭಾರತೀ ತೀರ್ಥ ಮಹಾಸ್ವಾಮಿಗಳವರು 1974 ರಲ್ಲಿ ಸನ್ಯಾಸ ಸ್ವೀಕರಿಸಿದ್ದು, 2024 ಕ್ಕೆ 50 ವರ್ಷಗಳಾಗುತ್ತಿವೆ. ಶೃಂಗೇರಿಯಲ್ಲಿ ಉಭಯ ಜಗದ್ಗುರುಗಳು ಈ ಪಾದುಕೆ ಹಾಗೂ ಒಡ್ಯಾಣವನ್ನು ಕಟೀಲು ದೇವಳದ ಆನುವಂಶಿಕ ಅರ್ಚಕ ಶ್ರೀಹರಿನಾರಾಯಣದಾಸ ಅಸ್ರಣ್ಣ ಅವರಿಗೆ ಹಸ್ತಾಂತರಿಸಿದರು. ಇದನ್ನು ಜೂ.19 ರಂದು ಶ್ರೀದೇವಿಗೆ ತೊಡಿಸಿ ಅಲಂಕಾರ ಮಾಡಲಾಯಿತು. ಈ ಸೇವೆಯನ್ನು ಶೃಂಗೇರಿ ಶ್ರೀಮಠದ ಶಿಷ್ಯರಾದ ಆಂಧ್ರಪ್ರದೇಶದ ಶ್ರೀಪೋಲಿಸೆಟ್ಟಿ ಶ್ಯಾಮ್ ಸುಂದರ್ ಅವರು ನೀಡಿರುತ್ತಾರೆ.

Ad
Ad
Nk Channel Final 21 09 2023
Ad