Bengaluru 22°C
Ad

ಬೈಕ್ ಸವಾರರ ಪಟ್ಲಬೆಟ್ಟದಲ್ಲಿ ಸ್ಥಳೀಯರಿಂದ ಹಲ್ಲೆ; ವಿಡಿಯೋ ವೈರಲ್

Patla

ಸುಬ್ರಹ್ಮಣ್ಯ: ಸುಬ್ರಹ್ಮಣ್ಯದ ಬಿಸ್ಲೇ ಘಾಟ್ ಸಮೀಪದ ಸಕಲೇಶಪುರ ತಾಲೂಕು ವ್ಯಾಪ್ತಿಯ ಪ್ರವಾಸಿ ತಾಣ ಪಟ್ಲಬೆಟ್ಟಕ್ಕೆ ತೆರಳಿದ್ದ ಮಂಗಳೂರಿನ ಬೈಕ್‌ ರೈಡರ್ಸ್ ತಂಡದ ಮೇಲೆ ಅಲ್ಲಿನ ವ್ಯಕ್ತಿಗಳು ಹಲ್ಲೆ ನಡೆಸಿದ ಆರೋಪ ವ್ಯಕ್ತವಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹಲ್ಲೆಗೊಳಗಾದವರಲ್ಲಿ ಮಂಗಳೂರಿನ ಕೊಟ್ಟಾರದ ಯುವಕ ಈ ಬಗ್ಗೆ ಸಕಲೇಶಪುರ ತಾಲೂಕಿನ ಯಸಲೂರು ಠಾಣೆಗೆ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಯಾವ ಕಾರಣಕ್ಕೆ ನಡೆದಿದೆ ಎಂದು ನಿಖರ ಕಾರಣ ತಿಳಿದುಬಂದಿಲ್ಲ. ಬೈಕ್ ನಲ್ಲಿ ಬಂದಿರುವ ತಂಡದ ಜೊತೆ ಅಲ್ಲಿದ್ದ ವ್ಯಕ್ತಿಗಳು ಬೈಕ್ ನಲ್ಲಿ ಹೋಗಬೇಡಿ ಎಂಬಿತ್ಯಾದಿ ಮಾತನಾಡಿ ವಾಗ್ವಾದ ನಡೆಸಿ ಹಲ್ಲೆ ನಡೆಸುತ್ತಿರುವುದು ವಿಡಿಯೋದಲ್ಲಿದೆ.

Ad
Ad
Nk Channel Final 21 09 2023
Ad