Bengaluru 27°C
Ad

ಬದಿಯಡ್ಕದಲ್ಲಿ ಸಾಹಿತ್ಯ ಅಕಾಡೆಮಿಯ ‘ಗ್ರಾಮಲೋಕ’ ಕಾರ್ಯಕ್ರಮ

Gramlok

ಮಂಗಳೂರು: ಸಾಹಿತ್ಯ ಅಕಾಡೆಮಿ, ನವದೆಹಲಿ ಹಾಗೂ ಕೊಂಕಣಿ ಬರಹಗಾರ ಹಾಗೂ ಕಲಾವಿದರ ಒಕ್ಕೂಟ ಮಂಗಳೂರು ಇವರ ಜಂಟಿ ಆಶ್ರದಲ್ಲಿ ಬದಿಯಡ್ಕ ಪಂಚಾಯತಿನ ಬೇಳ ಗ್ರಾಮದಲ್ಲಿ ’ಗ್ರಾಮಲೋಕ’ ವಿಭಿನ್ನ ಸಾಹಿತ್ಯ ಕಾರ್ಯಕ್ರಮ ನಡೆಯಿತು.
Gram

ಯುವ ಬರಹಗಾರರು ಹಾಗೂ, ನಾಟಕ, ಟಿವಿ ಧಾರವಾಹಿ ನಿರ್ದೇಶಕರಾದ ಸ್ಟ್ಯಾನಿ ಬೇಳ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಸಾಹಿತ್ಯ ಅಕಾಡೆಮಿ ಕೊಂಕಣಿ ವಿಭಾಗದ ಸಂಯೋಜಕರಾದ ಮೆಲ್ವಿನ್ ರೊಡ್ರಿಗಸ್ ಸಾಹಿತ್ಯ ಅಕಾಡೆಮಿಯ ಇತಿಹಾಸ ಹಾಗೂ ಕಾರ್ಯಕ್ರಮಗಳ ವಿವರಣೆಯನ್ನು ನೀಡಿದರು. ಯುವಸಾಹಿತಿಗಳಾದ ರಾಜು ಉಕ್ಕಿನಡ್ಕ, ರವಿ ಕುಮಾರ್ ಕ್ರಾಸ್ತ, ಪರಿಸರ ಹೋರಾಟಗಾರರಾದ ರಾಜು ಕಿದೂರು ಹಾಗೂ ವಾಣಿ ಕ್ರಾಸ್ತ ಸ್ವರಚಿತ ಕವನಗಳನ್ನು ವಾಚಿಸುವುದರೊಂದಿಗೆ ಪರಿಸರ, ಭಾಷೆ ಹಾಗೂ ಸಂಸ್ಕೃತಿಯ ಕುರಿತು ತಮ್ಮ ವಿಚಾರಗಳನ್ನು ಮಂಡಿಸಿದರು.
Gramlok (1)

ಕವಿತಾ ಟ್ರಸ್ಟ್ ಸದಸ್ಯರಾದ ವಿನ್ಸೆಂಟ್ ಪಿಂಟೊ ವಂದಿಸಿದರು.

Ad
Ad
Nk Channel Final 21 09 2023
Ad