Bengaluru 23°C
Ad

ಆರಾಧ್ಯ ದೈವ ಕೊರಗಜ್ಜನ ಹೆಸರಲ್ಲಿ ವಂಚನೆ : ನಕಲಿ‌ ಖಾತೆ ಸೃಷ್ಟಿಸಿ ದೇಣಿಗೆ ಸಂಗ್ರಹ

ಕರಾವಳಿಯ ಜನರು ದೈವ ಭಕ್ತರು. ದೈವಗಳ ಆರಾಧನೆ ಅವರ ಮೂಲ ಕರ್ಮ. ಹೆಚ್ಚು ಆರಾಧನೆಗೆ ಒಳಪಡುವ ದೈವವೆಂದರೆ ಅದು ಕೊರಗಜ್ಜ. ಕರಾವಳಿಯಲ್ಲಿ ಕೊರಗಜ್ಜ ಕಾರ್ಣಿಕ ದೈವ.

ಮಂಗಳೂರು: ಕರಾವಳಿಯ ಜನರು ದೈವ ಭಕ್ತರು. ದೈವಗಳ ಆರಾಧನೆ ಅವರ ಮೂಲ ಕರ್ಮ. ಹೆಚ್ಚು ಆರಾಧನೆಗೆ ಒಳಪಡುವ ದೈವವೆಂದರೆ ಅದು ಕೊರಗಜ್ಜ. ಕರಾವಳಿಯಲ್ಲಿ ಕೊರಗಜ್ಜ ಕಾರ್ಣಿಕ ದೈವ.ಕೊರಗಜ್ಜನನ್ನು ನನದೆ ತಮ್ಮ ಕೆಲಸ ಶುರುಮಾಡುವವರೆ ಹೆಚ್ಚು. ಕೊರಗಜ್ಜ ಅವರ ನಂಬಿಕೆಯ ದೈವ. ತಮಗೆ ಯಾವುದೇ ಒಳ್ಳೆಯದಾದರೆ ಕೊರಗಜ್ಜನ ಆಶಿರ್ವಾದ ಎನ್ನುತ್ತಾರೆ. ಕೆಟ್ಟದಾದಲ್ಲಿ ಸಹಾಯ ಕೋರಿ ಮೊರೆ ಹೋಗುತ್ತಾರೆ. ಆದರೆ ಈ ಭಕ್ತಿ ಮತ್ತು ಜನರ ಮುಗ್ಧತೆಯನ್ನೇ ಕೆಲವರು ಲಾಭವಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ.

ಅತೀ ಹೆಚ್ಚು ಭಕ್ತರು ಬರುವ ಸ್ಥಳ ಇದೇ ಮಂಗಳೂರು ತಾಲೂಕಿನ ಆದಿಸ್ಥಳ ಕುತ್ತಾರು ಕೊರಗಜ್ಜ ಸನ್ನಿಧಾನ. ಇಲ್ಲಿನ ಫೋಟೋ ಮತ್ತು ಹೆಸರನ್ನು ಬಳಸಿಕೊಂಡು ದೈವಸ್ಥಾನದ ವೆಬ್ ಸೈಟ್ ಎಂದು ಬಿಂಬಿಸುವಂತೆ ಈ ನಕಲಿ‌ ಖಾತೆ ತೆರೆಯಲಾಗಿದೆ. . ಕೊರಗಜ್ಜನ ಫೋಟೋ ಹಾಕಿ ನಾವು‌ ಕಷ್ಟದಲ್ಲಿದ್ದೇವೆ ಕೊರಗಜ್ಜನ ಭಕ್ತರು ಸಹಾಯ ಮಾಡುವಂತೆ ಕೇಳಿಕೊಳ್ಳಲಾಗಿದೆ. ಇದನ್ನು ನಂಬಿ‌ ಅನೇಕ ಭಕ್ತರು ದೇಣಿಗೆ ನೀಡಿದ್ದಾರೆ. ಈ ವಿಚಾರ ದೈವಸ್ಥಾನದ ಆಡಳಿತ ಮಂಡಳಿಯ ಗಮನಕ್ಕೆ ಬರುತ್ತಿದ್ದಂತೆ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ

ಇದರ ಜೊತೆ ದೈವಸ್ಥಾನದ ಆಡಳಿತ ಮಂಡಳಿಯು ಯಾವುದೇ ಉದ್ದೇಶಕ್ಕಾಗಿ ಆನ್‌ಲೈನ್ ಮುಖಾಂತರ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ರೀತಿ ಆಡಳಿತ ಮಂಡಳಿಯ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ರೀತಿಯ ಪ್ರಕಟಣೆ ಬಂದಲ್ಲಿ ಅದಕ್ಕೆ ಭಕ್ತರು ಪ್ರತಿಕ್ರಿಯಿಸಬಾರದು ಎಂದು ಕ್ಷೇತ್ರದ ಆಡಳಿತ ಮಂಡಳಿಯವರು ವಿನಂತಿಸಿದ್ದಾರೆ.

Ad
Ad
Nk Channel Final 21 09 2023
Ad