Ad

ಎಚ್‌ಡಿಕೆ ವಿರುದ್ಧ ಅವಹೇಳನ ಮಾತು : ದರ್ಶನ್ ಮಹಿಳಾ ಅಭಿಮಾನಿ ವಿರುದ್ಧ ದೂರು

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಸುದ್ದಿ ಹರಿದಾಡುತ್ತಿವೆ ಈ ನಡುವೆ ದರ್ಶನ್ ಪೊಲೀಸರ ಕಸ್ಟಡಿಯಲ್ಲಿದ್ದಾರೆ. ದರ್ಶನ್‌ ಅಭಿಮಾನಿಗಳು ತಮ್ಮ ನಾಲಿಗೆ ಹರಿಬಿಟ್ಟಿದ್ದು ಇನ್ನೊಬ್ಬರ ಆಕ್ರೋಶಕ್ಕೆ ಕಾರಣವಾಗುತ್ತಿದ್ದಾರೆ.

ಮಂಡ್ಯ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಸುದ್ದಿ ಹರಿದಾಡುತ್ತಿವೆ ಈ ನಡುವೆ ದರ್ಶನ್ ಪೊಲೀಸರ ಕಸ್ಟಡಿಯಲ್ಲಿದ್ದಾರೆ. ದರ್ಶನ್‌ ಅಭಿಮಾನಿಗಳು ತಮ್ಮ ನಾಲಿಗೆ ಹರಿಬಿಟ್ಟಿದ್ದು ಇನ್ನೊಬ್ಬರ ಆಕ್ರೋಶಕ್ಕೆ ಕಾರಣವಾಗುತ್ತಿದ್ದಾರೆ. ಇದೀಗ ದರ್ಶನ್ ಮಹಿಳಾ ಅಭಿಮಾನಿಯೊಬ್ಬರು ಎಚ್‌.ಡಿ ಕುಮಾರ್‌ಸ್ವಾಮಿ ವಿರುದ್ಧ ಅವಾಚ್ಯ ಶಬ್ದಗಳಿಂದು ನಿಂಧಿಸಿದ್ದು ಇದೀಗ ಜೆಡಿಎಸ್ ನಾಯಕರು ಇದೀಗ ದರ್ಶನ್ ಮಹಿಳಾ ಅಭಿಮಾನಿ ವಿರುದ್ಧ ಕಾನೂನು ಸಮರ ಸಾರಿದ್ದಾರೆ.

Ad
300x250 2

ಮಂಡ್ಯ ಜೆಡಿಎಸ್ ನಾಯಕರು ನಟ ದರ್ಶನ್ ಮಹಿಳಾ ಅಭಿಮಾನಿ ವಿರುದ್ಧ ಮತ್ತೊಂದು ದೂರು ದಾಖಲಿಸಿದ್ದಾರೆ.ಮಂಡ್ಯದ ಸೆಂಟ್ರಲ್ ಪೊಲೀಸ್ ಠಾಣೆಯಲ್ಲೂ ಮತ್ತೊಂದು ದೂರು ದಾಖಲಿಸಲಾಗಿದೆ.

ವಕೀಲ ಹಾಗೂ ಜೆಡಿಎಸ್ ವಕ್ತಾರ ರಘುನಂದನ್ ಅವರು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ವಿರುದ್ದ ಮಂಗಳ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದ ಮಂಗಳಾ ಅವರು ನಮ್ಮ ಡಿಬಾಸ್‌, ದರ್ಶನ್ ವಿರುದ್ಧ ಕೊಲೆ ಅಪರಾಧ ಬರುವಂತೆ ಹೆಚ್‌.ಡಿ ಕುಮಾರಸ್ವಾಮಿ ಅವರೇ ಮಾಡಿದ್ದಾರೆ. ದುಡ್ಡು ಕೊಟ್ಟು ಮಂಡ್ಯದಲ್ಲಿ ದರ್ಶನ್ ವಿರುದ್ದ ಧಿಕ್ಕಾರ ಕೂಗಿಸ್ತೀಯ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. ಅಷ್ಟೇ ಅಲ್ಲ ಸುಮಲತಾ ಮಂಡ್ಯದಲ್ಲಿ ನಿನಗೆ ಸ್ಪರ್ಧಿಸೋಕೆ ಚಾನ್ಸ್ ಕೊಟ್ಟಿರೋದಕ್ಕೆ ಡಿ ಬಾಸ್ ವಿರುದ್ದ ಸ್ಕೆಚ್ ಆಗ್ತೀಯಾ. ಸುಮಲತಾ‌ರಿಂದ ಭಿಕ್ಷೆ ಹಾಕಿಸಿಕೊ‌ಂಡವರು ನೀವು ಎಂದು ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದರು.

 

Ad
Ad
Nk Channel Final 21 09 2023
Ad