Bengaluru 23°C
Ad

ಹಿಂದು ಯುವಕನ ಮೇಲೆ ಅನ್ಯಕೋಮಿಗಳಿಂದ ಹಲ್ಲೆ : 11ಕ್ಕೂ ಹೆಚ್ಚು ಆರೋಪಿಗಳ ಮೇಲೆ ಪ್ರಕರಣ ದಾಖಲು

ಹಿಂದು ಯುವಕನ ಮೇಲೆ ಹಲ್ಲೆ ಪ್ರಕರಣ ಸಂಬಂಧ 11ಕ್ಕೂ ಹೆಚ್ಚು ಆರೋಪಿಗಳ ಮೇಲೆ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಡ್ಯ: ಹಿಂದು ಯುವಕನ ಮೇಲೆ ಹಲ್ಲೆ ಪ್ರಕರಣ ಸಂಬಂಧ 11ಕ್ಕೂ ಹೆಚ್ಚು ಆರೋಪಿಗಳ ಮೇಲೆ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೋಮವಾರ ರಾತ್ರಿ ಬೆಳ್ಳೂರಿನ ಅಭಿಲಾಷ್ ಎಂಬಾತನ ಮೇಲೆ ಹಲ್ಲೆ ಅನ್ಯಕೋಮಿನ ಯುವಕರು ಚೇರ್, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಅಭಿಲಾಷ್ ತಂದೆ ರಾಮು ನೀಡಿದ ದೂರಿನ ಅನ್ವಯ ಎಫ್‌ಐಆರ್‌ ದಾಖಲಾಗಿದೆ.

ನವೀದ್, ಸೂಫಿಯಾನ್, ಇಮ್ರಾನ್, ಸಮೀರ್, ಮುದಾಸೀರ್ ಸೇರಿ 11 ಕ್ಕೂ ಹೆಚ್ಚು ಮಂದಿ ಮೇಲೆ ಎಫ್.ಐ.ಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 341, 307, 504, 506 ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸೋಮವಾರ ಸಂಜೆ ಅಭಿಲಾಷ್​ ಎಂಬ ಯುವಕನ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ್ದರು. ಅತಿ ವೇಗದಲ್ಲಿ ಕಾರು ಚಾಲನೆ ಮಾಡಿದ್ದನ್ನು ಪ್ರಶ್ನಿಸಿದ್ದ ಅಭಿಲಾಷ್​ ಮೇಲೆ ಮುಸ್ಲಿಂ ಯುವಕರ ಗುಂಪೊಂದು ಹಲ್ಲೆ ಮಾಡಿತ್ತು.

ಘಟನೆ ಬಳಿಕ ಬೆಳ್ಳೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಗಂಭೀರವಾಗಿ ಪೆಟ್ಟು ತಿಂದಿರುವ ಅಭಿಲಾಷ್​ ಅವರನ್ನು ಬೆಳ್ಳೂರಿನ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕಳೆದ ಶುಕ್ರವಾರ ಮುಸ್ಲಿಂ ಯುವಕರ ಗುಂಪು ಬೆಳ್ಳೂರಿನ ಸಂತೆ ಬೀದಿಯಲ್ಲಿ ಅತಿ ವೇಗದಲ್ಲಿ ಪಟ್ಟಣದೊಳಗೆ ಕಾರು ಓಡಿಸಿಕೊಂಡು ಹೋಗಿದೆ. ಅಪಾಯಕಾರಿ ರೀತಿಯಲ್ಲಿ ವಾಹನ ಓಡಿಸಿದ್ದನ್ನು ಹಲ್ಲೆಗೆ ಒಳಗಾಗಿರುವ ಅಭಿಲಾಷ್ ಹಾಗೂ ಅವರ ಜತೆಗಾರ ನಾಗೇಶ್​ ಎಂಬುವರು ಪ್ರಶ್ನಿಸಿದ್ದರು.

ಮಿತಿ ಮೀರಿದ ವೇಗದಲ್ಲಿ ಕಾರು ಓಡಿಸದಂತೆ ಆ ಗುಂಪಿಗೆ ಬುದ್ಧಿವಾದ ಹೇಳಿದ್ದರು. ಈ ವೇಳೆ ಸಣ್ಣ ಮಟ್ಟಿನ ಮಾತಿನ ಚಕಮಕಿ ನಡೆದಿತ್ತು. ಅದೇ ದ್ವೇಷವನ್ನು ಇಟ್ಟುಕೊಂಡಿದ್ದ ಮುಸ್ಲಿಂ ಯುವಕರ ಗುಂಪಿ ಇನ್ನಷ್ಟು ದೊಡ್ಡ ಗುಂಪನ್ನು ಕಟ್ಟಿಕೊಂಡು ಬಂದು ಸೋಮವಾರ ಸಂಜೆ ಹಲ್ಲೆ ಮಾಡಿದ್ದರು.

ದೊಡ್ಡ ಗುಂಪು ಹಲ್ಲೆ ಮಾಡಿದ್ದ ಅಭಿಲಾಷ್​ ಅವರಿಗೆ ಗಂಭೀರ ಗಾಯಗಳಾಗಿವೆ ಎಂದು ಅವರ ಆಪ್ತರು ಹೇಳಿದ್ದಾರೆ. ತಕ್ಷಣ ಸ್ಥಳೀಯರು ಅವರನ್ನು ಏಮ್ಸ್​ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಸುದ್ದಿಯಾದ ಬಳಿಕ ಬೆಳ್ಳೂರು ಪಟ್ಟಣದಲ್ಲಿ ಆತಂಕ ಮನೆ ಮಾಡಿತ್ತು. ಗಲಾಟೆ ಸಂಭವಿಸುವ ಸಾಧ್ಯತೆಗಳನ್ನು ಮನಗಂಡಿರುವ ಪೊಲೀಸರು ಬೆಳ್ಳೂರು ಪಟ್ಟಣ ಹಾಗೂ ಬಿಜಿಎಸ್ ಆಸ್ಪತ್ರೆಗೆ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

Ad
Ad
Nk Channel Final 21 09 2023
Ad