News Karnataka Kannada
Friday, May 03 2024
ಶಿವಮೊಗ್ಗ

ಶಿವಮೊಗ್ಗ: ಭಗತ್ ಸಿಂಗ್ ಜನ್ಮದಿನಾಚರಣೆಯಂದು ಪಿಎಫ್ಐ ಬ್ಯಾನ್ ಮಾಡಿರುವುದು ಖುಷಿತಂದಿದೆ

Indiscipline in BJP due to hand migrants: Eshwarappa
Photo Credit : By Author

ಶಿವಮೊಗ್ಗ:  ಭಗತ್ ಸಿಂಗ್ ಜನ್ಮದಿನಾಚರಣೆಯ ದಿನದಂದು ಪಿಎಫ್ಐ ಬ್ಯಾನ್ ಮಾಡಿರುವುದು ದೇಶ ಭಕ್ತರಿಗೆ ಖುಷಿತಂದಿದೆ. ಸಿಂಹ ಅಮಿತ್ ಶಾರಿಂದ ಈ ಕೆಲಸ ಆಗಿದೆ ಸ್ವಾಗತಿಸುವೆ ಎಂದು ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯುವಕರಿಗೆ ದಾರಿ ತಪ್ಪಿಸುವ, ವಿದೇಶಿ ಹಣ, ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿರುವ ಪಿಎಫ್ಐ ಸಂಘಟನೆಯನ್ನ ನಿಷೇಧಿಸಿರುವುದು, ಎಲ್ಲಾ ವರ್ಗದ, ಧರ್ಮದ ರಾಷ್ಟ್ರಭಕ್ತರು ಸ್ವಾಗತಿಸಬೇಕೆಂದರು.

ಹಸ್ಕರ್ ಲಿಯೇ ಪಾಕಿಸ್ತಾನ್ ಲಡ್ತೆ ಹುವೇ ಲೇಂಗೆ ಹಿಂದೂ ಸ್ಥಾನ್ ಎಂಬ ಘೋಷಣೆ ಮಾಡಿಕೊಂಡು ಓಡಾಡುತ್ತಿದ್ದರು. ಸಂಘಟನೆಯ ನ್ನ ನಿಷೇಧಿಸಿರುವುದನ್ನ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಂಬ ಪ್ರಶ್ನೆ ಉದ್ಭವಿಸಬಾರದು ಎಂದರು.

ಬ್ಯಾನ್ ಮಾಡಲು ರಾಜ್ಯಗಳಿಂದ ಎಲ್ಲಾ ಸುದ್ದಿಗಳನ್ನ ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆಕಳುಹಿಸಲಾಗಿದೆ. ಈ ಪ್ರಕ್ರಿಯೆನಡೆಯಬೇಕಿತ್ತು. ಈ ಹಿಂದೆಯೇ ಪರಿಷತ್ ನಲ್ಲಿ ಸಿಎಂ ಸಿದ್ದರಾಮಯ್ಯರನ್ನ ಪ್ರಶ್ನಿಸಿದ್ದೆ ಅವರು ಕೇಂದ್ರದಲ್ಲಿ ನಿಮ್ದೇ ಸರ್ಕಾರ ಇದೆ. ಬ್ಯಾನ್ ಮಾಡಿ ಎಂದಿದ್ದರು. ಆದರೆ ಪ್ರಕ್ರಿಯೆ ನಡೆಸದೆ ಬ್ಯಾನ್ ಮಾಡಲು ಸಾಧ್ಯನಾ ಎಂದು ಪ್ರಶ್ನಿಸಿದರು.

ಪಿಎಫ್ಐ ಚಟುವಟಿಕೆ ಕುರಿತು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಾಗಿತ್ತು. ಹರ್ಷನ ಕೊಲೆಯಾದಾಗ ಕೋಮುಗಲಭೆ ನಡೆಯಿತು. ಪ್ರೇಮ್ ಸಿಂಗ್ ಅಮಾಯಕನನ್ನ ಕೊಲೆಗೆ ಯತ್ನಿಸಲಾಯಿತು. ಆತನ ಕೊಲೆ ಸಂಚುಕೊರರು ಅಂತರಾಷ್ಟ್ರೀಯ ಉಗ್ರರ ಜೊತೆಯ ಲಿಂಕ್ ಹೊಂದಿದ್ದನು. ಇಂತಹ ಚಟುವಟಿಕೆಯಲ್ಲಿ ಭಾಗಿಯಾದನ ವಿರುದ್ಧ ಯುಪಿಎ ಆಕ್ಟ್ ಹಾಕಲಾಗಿದೆ ಎಂದರು.

ಮುಸ್ಲೀಂ ಕೆಲ ಯುವಕರು ಮತ್ತು ಹಿರಿಯರಿಗೆ ಪಾಕ್ ಬಗ್ಗೆ ಇನ್ಬೂ ಒಲವಿದೆ ಈ ಮನಸ್ಥಿತಿ ಬದಲಾಗಬೇಕು. ಕೆಲವರ ಬಾಯಿಯಲ್ಲಿ ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟ ಎನ್ನುತ್ತಾರೆ ಆದರೆ ಹಿಂದೂ ಯುವಕರ ಕೊಲೆ ಮಾಡ್ತಾ ಶಾಂತಿ ನೆಲೆಸುತ್ತದಾ ಎಂದರು. ಮನಸ್ಥಿತಿ ಸರಿ ಮಾಡಿಕೊಳ್ಳದಿದ್ದರೆ ದೇಶದ್ರೋಹ ವಿಚಾರದಲ್ಲಿ ಸಂಕಷ್ಟ ಅನುಭವಿಸುತ್ತೀರಿ ಎಂದು ಎಚ್ಚರಿಸಿದ್ದರು.

ಮುಸ್ಲೀಂ ಮತಬ್ಯಾಂಕ್ ಗಾಗಿ ಕಾಂಗ್ರೆಸ್ ಪಿಎಫ್ಐ ನ್ನ ಪೋಷಿಸಿಕೊಂಡು ಬಂದಿತ್ತು. ರಾಷ್ಟ್ರಭಕ್ತಿ ಬೆಳೆಸುವ ಕೆಲಸವನ್ನ ಎಲ್ಲಾ ಪಕ್ಷಗಳು ಒತ್ತುನೀಡಬೇಕು. ಪರಪ್ಪನ ಅಗ್ರಹಾರಕ್ಕೆ ಹೋಗಿ ಬಂದ ನಲ್ಪಾಡ್ ಯುವಕರಿಗೆ ಉದ್ಯೋಗದ ಕೊರತೆಯಿಂದ ದೇಶದ್ರೋಹ ಚಟುವಟಿಕೆಯಲ್ಲಿ ತೊಡಗುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ ಅದು ಖಂಡನೀಯ. ಎಚ್ಚರಿಕೆಯಿಂದ ಮಾತುಗಳಾಡಬೇಕೆಂದರು.

ಪಿಎಫ್ಐ ನ್ನ ಕೇವಲ ಐದು ವರ್ಷ ಬ್ಯಾನ್ ಏಕೆ ಎಂಬ ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ ಕೆಲ ಯುವಕರು ಅಮಾಯಕರು ಗೊತ್ತಿಲ್ಲದೆ ಪಿಎಫ್ಐಗೆ ಹೋಗಿರಬಹುದು ಅಂತಹವರಿಗೆ ತಿದ್ದುಕೊಳ್ಳಲು ಅವಕಾಶನೀಡಿ ಕೇಂದ್ರ ಸರ್ಕಾರ ಐದು ವರ್ಷ ನಿಷೇಧಿಸಿದೆ ಎಂದರು.

ಎಸ್ ಡಿ ಪಿಐ ರಾಜಕೀಯ ಪಕ್ಷವಾಗಿರುವುದರಿಂದ ನಿಷೇಧಕ್ಕೆ ಚುನಾವಣೆ ಆಯೋಗದ ಅನುಮತಿ ಬೇಕು. ಕೇಂದ್ರ ಸರದಕಾರ ಏನು ಮಾಡುತ್ತೆ ಕಾದು ನೋಡಬೇಕು ಎಂದ ಅವರು. ರಾಷ್ಟ್ರಭಕ್ತ ಯುವಕರಿಗೆ ಮುಟ್ಟಬೇಡಿ ಎಂದಿದ್ದೆವು ಇನ್ನು ಮುಂದೆ ಮುಟ್ಟಲಿ ಯಾರು ಮುಡ್ತಾರೆ ನೋಡೋಣ ಎಂದು ಗುಡುಗಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು