News Karnataka Kannada
Monday, May 06 2024
ಶಿವಮೊಗ್ಗ

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯಲ್ಲಿ ಕೇಂದ್ರಿಯ ಪ್ರಯೋಗಾಲಯ ಲೋಕಾರ್ಪಣೆ

Central Laboratory inaugurated at Meggan Hospital
Photo Credit : By Author

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡದಲ್ಲಿ ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕೇಂದ್ರಿಯ ಪ್ರಯೋಗಾಲಯವನ್ನ  ಲೋಕಾರ್ಪಣೆ ಮಾಡಲಾಗಿದೆ. ಸಿಮ್ಸ್ ನ ನಿರ್ದೇಶಕ ಡಾ.ವಿರೂಪಾಕ್ಷಪ್ಪನವರು ಲೋಕಾರ್ಪಣೆ ಮಾಡಿದ್ದಾರೆ.

ಬಡರೋಗಿಗಳ ರಕ್ತ ಹೀರುತ್ತಿದ್ದ ಇತರೆ ಖಾಸಗಿ ಪ್ರಯೋಗಾಲಯಗಳು ಮೆಗ್ಗಾನ್ ಆಸ್ಪತ್ರೆಯಲ್ಲಿ ಲಗ್ಗೆ ಇಟ್ಟು ವ್ಯಾಪಾರ ಮಾಡುತ್ತಿದ್ದರು ಮತ್ತು ಇಲ್ಲಿನ ಆಸ್ಪತ್ರೆಯ ಸಿಬ್ಬಂದಿಗಳೇ ಖಾಸಗಿ ಆಸ್ಪತ್ರೆಯವರೊಂದಿಗೆ ಕೈ ಜೋಡಿಸಿ ರಕ್ತ ಪರೀಕ್ಷೆಯನ್ನ ಖಾಸಗಿಗೆ ಕಮಿಷನ್ ಆಧಾರದ ಮೇರೆಗೆ ಬರೆದು ಕಳುಹಿಸುತ್ತಿದ್ದರು ಎಂಬ ಆರೋಪ ಕೇಳಿ ಬರುತ್ತಿತ್ತು. ಇವೆಲ್ಲದಕ್ಕೂ ಮುಕ್ತಿ ಸಿಗಲಿಂದೆ ಉನ್ನತೀಕರಣದ ಪ್ರಯೋಗಾಲಯ ಆರಂಭಿಸಲಾಗಿದೆ.

ಈ ಹಿಂದೆಯೂ ಈ ಪ್ರಯೋಗಾಲಯ ಇದ್ದರೂ ಸಣ್ಣ ಜಾಗದಲ್ಲಿ ಕೆಲಸ ನಿರ್ವಹಿಸಲಾಗುತ್ತಿತ್ತು. ಕೆಲ ವಸ್ತುಗಳು ಅಲಭ್ಯತೆಯಿಂದ ಬೆಂಗಳೂರಿನಿಂದ ಬರುವ ವರೆಗೂ ಪ್ರಯೋಗಾಲಯದ ಸೇವೆ ಬಂದ್ ಮಾಡಲಾಗುತ್ತಿತ್ತು. ಈ ಕಾರಣಕ್ಕಾಗಿ ಖಾಸಗಿ ಆಸ್ಪತ್ರೆಗೆ ರೆಫರ್ ಮಾಡಲಾಗುತ್ತಿತ್ತು ಎಂಬ ಸಬೂಬುಗಳು ಕೇಳಿ ಬರುತ್ತಿದ್ದವು.

ಆದರೆ ಈಗ ವಿಶಾಲವಾದ ಕಟ್ಟಡಕ್ಕೆ ಈ ಪ್ರಯೋಗಾಲಯ ಸ್ಥಳಾಂತರಗೊಂಡಿದೆ. ಉನ್ನತೀಕರಣದ ಯಂತ್ರೋಪಕರಣಗಳನ್ನ ಅಳವಡಿಸಲಾಗಿದೆ. ಹಾಳಾದರೆ ಇದಕ್ಕೆ ಬದಲೀ ವ್ಯವಸ್ಥೆಯ ಯಂತ್ರೋಪಕರಣಗಳ ವ್ಯವಸ್ಥೆ ಸಹ ಮಾಡಲಾಗಿದೆ ಎಂಬುದು ಅಡಳಿತ ಮಂಡಳಿಗಳವರ ಹೇಳಿಕೆಯಾಗಿದೆ. ಹಾಗಾಗಿ ಇನ್ನು ಮುಂದೆ ರಕ್ತ ಪರೀಕ್ಷೆಗೆ ಖಾಸಗಿಯವರ ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇಲ್ಲವೆಂಬುದು ಇಲ್ಲಿನವರ ಸ್ಪಷ್ಟೀಕರಣವಾಗಿದೆ.

ಮೆಗ್ಗಾನ್ ನಲ್ಲಿ ಕಿಡ್ನಿ, ಲಿವರ್ ಮತ್ತು ಶುಗರ್ ಗೆ ಸಂಬಂಧದ ಖಾಯಿಲೆಗೆ ರಕ್ತ ಪರೀಕ್ಷೆ ಬಹಳ ಮುಖ್ಯವಾಗಿತ್ತು. ಈ ರಕ್ತಪರೀಕ್ಷೆ ಮೆಗ್ಗಾನ್ ನಲ್ಲಿ ಸರಿಯಾದ ವ್ಯವಸ್ಥೆ ಇಲ್ಲವೆಂಬ ಆರೋಪ ಕೇಳಿಬಂದಿತ್ತು.‌ಆದರೆ ಈಗ ಈ ಆರೋಪಗಳನ್ನ ಅಲ್ಲಗೆಳೆಯಲು ರೀತಿ ಪ್ರಯೋಗಾಲಯವನ್ನ ಆರಂಭಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು