News Karnataka Kannada
Monday, April 29 2024
ಶಿವಮೊಗ್ಗ

ಶಿವಮೊಗ್ಗ: ಫಿಶ್ ಹೋಟೆಲ್ ಗಳ ಮೇಲೆ ಅಬಕಾರಿ ಇಲಾಖೆ ದಾಳಿ

Excise department raids fish hotels
Photo Credit : News Kannada

ಶಿವಮೊಗ್ಗ: ಗಾಜನೂರಿನಲ್ಲಿರುವ ಫಿಶ್ ಹೋಟೆಲ್ ಗಳ ಮೇಲೆ ಅಬಕಾರಿ ಇಲಾಖೆ ದಾಳಿ ನಡೆಸಿದೆ. ಯಾವುದೇ ಪರವಾನಗಿ ಇಲ್ಲದೆ ಫಿಶ್ ಹೋಟೆಲ್ ಗಳು ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟ ಹಿನ್ನಲೆಯಲ್ಲಿ ದಾಳಿ ನಡೆದಿದೆ.

ಮಂಗಳವಾರ ಅಬಕಾರಿ ಉಪ ಆಯುಕ್ತರು ಕ್ಯಾಪ್ಟನ್ ಅಜೀತ್ ಕುಮಾರ್ ಮಾರ್ಗದರ್ಶನ ಹಾಗೂ ನಿರ್ದೇಶನದಲ್ಲಿ ಶಿವಮೊಗ್ಗ ತಾಲ್ಲೂಕಿನ ಗಾಜನೂರು ವ್ಯಾಪ್ತಿಯಲ್ಲಿನ ರೆಸ್ಟೋರೆಂಟ್ ಗಳು ಯಾವುದೇ ಅಬಕಾರಿ ಲೈಸೆನ್ಸ್ ಹೊಂದಿಲ್ಲದೆ ಸಾರ್ವಜನಿಕರಿಗೆ ಹೋಟೆಲ್ ನಲ್ಲಿ ಮದ್ಯ ಸರಬರಾಜು ಮಾಡಿ‌ ಸೇವಿಸಲು ಸ್ಥಳಾವಕಾಶ ಮಾಡಿಕೊಟ್ಟಿರುವ 7 ಹೋಟೆಲ್ ಗಳ ಮೇಲೆ ದಾಳಿ ನಡೆಸಿವೆ. ದಾಳಿಯಲ್ಲಿ ಅಪಾರ ಪ್ರಮಾಣದಲ್ಲಿ ಮದ್ಯ ಪತ್ತೆಯಾಗಿವೆ.

ಕಿನಾರಾ ಹೋಟೆಲ್, ಸರೋವರ ಹೋಟೆಲ್ , ಭೂಮಿಕ‌ ಹೋಟೆಲ್, ಗ್ರೀನ್ ಫಿಶ್ ಲ್ಯಾಂಡ್ ಹೋಟೆಲ್, ವನಶ್ರೀ‌ಹೋಟೆಲ್ ಗಳ ಮೇಲೆ ಒಟ್ಟು 07 ಅಬಕಾರಿ ಪ್ರಕರಣಗಳನ್ನು‌ ದಾಖಲಿಸಲಾಯಿತು. ಸದರಿ ದಾಳಿಯಲ್ಲಿ‌ ನಿರೀಕ್ಷಕರಾದ ಶೀಲಾ ಧಾರಜ್ಕರ್, ಹಾಲಾನಾಯ್ಕ‌್.ಎನ್, ಮಂಜುನಾಥ ಜಿ.ಬಿ ಹಾಗೂ‌ ಸಿಬ್ಬಂದಿಗಳು ಪಾಲ್ಗೋಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು