News Karnataka Kannada
Friday, May 03 2024
ಚಿಕಮಗಳೂರು

ಹತ್ತೂರು ತಿರುಗಿದರೂ ದೊರೆಯದ ಶೌಚಾಲಯ: ರಾಷ್ಟ್ರಪತಿಗೆ ಮಹಿಳೆ ಬರೆದ ಪತ್ರ ವೈರಲ್‌

Woman's letter to President goes viral: Toilet not available even after 100 turns
Photo Credit : Pixabay

ಚಿಕ್ಕಮಗಳೂರು: ಪ್ರಕೃತಿ ಪ್ರೇಮಿಗಳ ಸ್ವರ್ಗ, ಪ್ರವಾಸಿಗರ ಮೆಚ್ಚಿನ ತಾಣವಾದ ಚಿಕ್ಕಮಗಳೂರಿನ ಬಾಬಾಬುಡನಗಿರಿ ದತ್ತ ಪೀಠ, ಮುಳ್ಳಯ್ಯನಗಿರಿ ಮತ್ತು ಸೀತಾಳಯ್ಯನಗಿರಿ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಅಲ್ಲಿ ಕನಿಷ್ಠ ಶೌಚಾಲಯದಂತಹ ಮೂಲಸೌಕರ್ಯವಿಲ್ಲದೆ ತಾನು ಅನುಭವಿಸಿದ ಭವಣೆ, ಯಾತನೆಯನ್ನು ಮಹಿಳೆಯೊಬ್ಬರು ರಾಷ್ಟ್ರಪತಿ ಮರ್ಮು ಅವರಿಗೆ ಪತ್ರ ಮುಖೇನ ವಿವರಿಸಿದ್ದಾರೆ. ಇದೀಗ ಆ ಪತ್ರ ವೈರಲ್‌ ಆಗಿದೆ.

ಕನ್ನಡದಲ್ಲಿ ಪತ್ರ ಬರೆದಿರುವ ಜಡೆಮ್ಮ ಎಂಬ ಮಹಿಳೆ ತನಗೆ ಎದುರಾದ ಸಂಕಷ್ಟವನ್ನು ಎಳೆಎಳೆಯಾಗಿ ವಿವರಿಸಿದ್ದಾರೆ. ಲಕ್ಷಾಂತರ ಜನರು ಭೇಟಿ ನೀಡುವ ಯಾತ್ರಾ ಕೇಂದ್ರಗಳಲ್ಲಿ ಕನಿಷ್ಠ ಶೌಚಾಲಯಗಳನ್ನಾದರೂ ನಿರ್ಮಿಸುವಂತೆ ಪತ್ರದಲ್ಲಿ ಮಹಿಳೆ ಒತ್ತಾಯಿಸಿದಾರೆ. ನೀವು ರಾಷ್ಟ್ರಪತಿಯಾದರೂ ಮಹಿಳೆಯಾಗಿರುವ ಕಾರಣ ನಿಮಗೆ ನನ್ನ ಯಾತನೆ ಹೆಚ್ಚು ಅರ್ಥವಾಗಬಹುದು ಎಂದು ವಿವರಿಸಿದ್ದಾರೆ. ಅಲ್ಲದೆ “ನನ್ನಂತಹ ಸಾಮಾನ್ಯ ಮಹಿಳೆಯರ ನೋವನ್ನು ತಿಳಿಸುವುದು ಪತ್ರದ ಮುಖ್ಯ ಉದ್ದೇಶ ಎಂದು ಹೇಳಿದ್ದಾರೆ.

ಪತ್ರದ ಸಾರಾಂಶ ಹೀಗಿದೆ: “ಕೆಲವು ದಿನಗಳ ಹಿಂದೆ ನಾನು ಬಾಬಾಬುಡನಗಿರಿ ದತ್ತ ಪೀಠ, ಮುಳ್ಳಯ್ಯನಗಿರಿ ಮತ್ತು ಸೀತಾಳಯ್ಯನಗಿರಿಗೆ ಭೇಟಿ ನೀಡಿದ್ದೆ, ಬಾಬಾಬುಡನ್‌ಗಿರಿಯಲ್ಲಿ ಈ ವೇಳೆ ನನಗೆ ನೈಸರ್ಗಿಕ ಕರೆ ಒತ್ತಡ ಆರಂಭವಾಯಿತು. ಈ ವೇಳೆ ಸಾರ್ವಜನಿಕ ಶೌಚಾಲಯಕ್ಕಾಗಿ ಹುಡುಕಾಡಿದರೂ ಪ್ರಯೋಜನವಾಗಲಿಲ್ಲ. “ನಂತರ ಸೀತಾಳಯ್ಯನಗಿರಿ ಹತ್ತಿ ಸಾರ್ವಜನಿಕ ಶೌಚಾಲಯಕ್ಕಾಗಿ ಅವರಿವರಲ್ಲಿ ಕೇಳಿದೆ. ಅಲ್ಲಿಯೂ ಶೌಚಾಲಯವಿರಲಿಲ್ಲ. ಈ ವೇಳೆ ಕ್ಷಣಕ್ಷಣಕ್ಕೂ ಯಮಯಾತನೆ ಅನುಭವಿಸಿದೆ. ಬಳಿಕ ಅದನ್ನು ಸಹಿಸಲಾಗದೆ ಮಾನ ಅವಮಾನ ಬದಿಗಿಟ್ಟು ಮೂತ್ರ ವಿಸರ್ಜನೆ ಮಾಡಿದೆ ಎಂದು ಹೇಳಿದ್ದಾರೆ. ಪ್ರತಿದಿನವೂ ಜನರು ತಮ್ಮ ಧರ್ಮ ಮತ್ತು ದೇವರಿಗಾಗಿ ಹೋರಾಡುತ್ತಾರೆ, ಆದರೆ ಶೌಚಾಲಯಗಳನ್ನು ನಿರ್ಮಿಸುವ ಬಗ್ಗೆ ಅವರ ನಿರ್ಲಕ್ಷ್ಯ ದುರದೃಷ್ಟಕರ.

ನಾವು ಯಾವ ಧರ್ಮಕ್ಕೆ ಸೇರಿದವರಾಗಿದ್ದರೂ ಶೌಚಕ್ರಿಯೆ ಸಾಮಾನ್ಯ. ಜಗತ್ತಿನಲ್ಲಿ ಯಾವುದೇ ಮತ, ಧರ್ಮ ಬೇಧವಿಲ್ಲದೆ ಶೌಚಾಲಯ ಬಳಸುತ್ತಾರೆ. ಇಂತಹ ಪ್ರಸಿದ್ಧ ಸ್ಥಳದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದಿರುವುದು ಸಂವಿಧಾನದ 19 ಮತ್ತು 21 ನೇ ವಿಧಿಯ ಉಲ್ಲಂಘನೆಯಾಗಿದೆ. ನಾವು ಮಂಗಳ ಗ್ರಹವನ್ನು ತಲುಪಿದ್ದೇವೆ ಆದರೆ ಭೂಮಿ ಮೇಲೆ ಅಗತ್ಯವಿದ್ದಲ್ಲಿ ಶೌಚಾಲಯ ನಿರ್ಮಿಸಲು ಸಾಧ್ಯವಾಗಿರುವುದು ಶೋಚನೀಯ ಎಂದು ವಿವರಿಸಿದ್ದಾರೆ.

“ಭಾರತವು ವಿಶ್ವದಲ್ಲಿ ಮಧುಮೇಹದ ರಾಜಧಾನಿಯಾಗಿದೆ. ಮಧುಮೇಹಿಗಳು ಅತಿಹೆಚ್ಚು ಬಾರಿ ಮೂತ್ರವಿಸರ್ಜನೆ ಮಾಡುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ನೀವು ಇಂತಹ ಸ್ಥಳಗಳಲ್ಲಿ ಶೌಚಾಲಯ ನಿರ್ಮಿಸಿದರೆ ಜನರು ನಿಮ್ಮನ್ನು ಶತಶತಮಾನಕ್ಕೂ ಮರೆಯುವುದಿಲ್ಲ ಎಂದು ವಿವರಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು