News Karnataka Kannada
Sunday, April 28 2024
ಚಿಕಮಗಳೂರು

ಅತಿ ಹೆಚ್ಚು ಸರ್ಕಾರಿ ಭೂಮಿ ಮಂಜೂರಾತಿ: 15 ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ಆರಂಭ

Highest allotment of government land: 15 officials to probe
Photo Credit : News Kannada

ಚಿಕ್ಕಮಗಳೂರು: ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಖಾತೆ ಮಾಡಿರುವ ಗಂಭೀರವಾದಂತಹ ಆರೋಪ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೇಳಿಬಂದಿದೆ. ಜಿಲ್ಲೆಯ ಕಡೂರು ಮತ್ತು ಮೂಡಿಗೆರೆ ತಾಲೂಕಿನಲ್ಲಿ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಖಾತೆ ಮಾಡಲಾಗಿದೆ. ಈ ಕುರಿತು ತನಿಖೆ ನಡೆಸಲು ಸರ್ಕಾರ 15 ಅಧಿಕಾರಿಗಳ ನೇತೃತ್ವದಲ್ಲಿ ತಂಡ ನಿಯೋಜನೆ ಮಾಡಿ ತನಿಖೆ ನಡೆಸುತ್ತಿದೆ.

ಕಡೂರು, ಮೂಡಿಗೆರೆಯಲ್ಲಿ ಅಕ್ರಮ ಭೂ ಮಂಜೂರಾತಿ ಪ್ರಕರಣ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮತ್ತು ಕಡೂರಿನಲ್ಲಿ ಸರ್ಕಾರಿ ಭೂಮಿಯನ್ನು ಅಧಿಕಾರಿಗಳು ಜನರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಆರೋಪ ಕೇಳಿ ಬಂದಿದೆ. ಮೂಡಿಗೆರೆಯಲ್ಲಿ 1400. ಕಡೂರಲ್ಲಿ 2500. ಈ ಎರಡು ತಾಲೂಕಿನಲ್ಲೇ ಸುಮಾರು 5 ಸಾವಿರ ಎಕರೆಗೂ ಅಧಿಕ ಸರ್ಕಾರಿ ಭೂಮಿಯನ್ನ ಅಕ್ರಮವಾಗಿ ಮಂಜೂರು ಮಾಡಿರುವ ಆರೋಪವಿದೆ.

ಗೋಮಾಳ ಸೇರಿದಂತೆ ಸರ್ಕಾರಿ ಭೂಮಿಯ ನಕಲಿ ದಾಖಲೆ ಸೃಷ್ಟಿಸಿ ಫಾರಂ 50, 52 ಹಾಗೂ 57ರಲ್ಲಿ ಅಕ್ರಮವಾಗಿ ಮಂಜೂರು ಮಾಡಿಸಿಕೊಂಡಿದ್ದಾರೆ. ನಕಲಿ ದಾಖಲೆ ಸೃಷ್ಠಿಸಿದವರು, ಕಡತಗಳಿಗೆ ಸಹಿ ಹಾಕಿದವರಿಗೆ ಈಗ ಬಂಧನದ ಭೀತಿ ಎದುರಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳ ಸಹಯೋಗದಲ್ಲಿ ಸರ್ಕಾರಿ ಭೂಮಿಗೆ ನಕಲಿ ಅಪ್ಪ-ಅಮ್ಮನನ್ನ ಸೃಷ್ಠಿಸಿ ಭೂಮಿಯನ್ನ ಕಬಳಿಸಿರುವ ಅಂಶ ಬೆಳಕಿಗೆ ಬಂದಿದೆ.

ರಾಜ್ಯದಲ್ಲೇ ಅತೀ ದೊಡ್ಡ ಭೂ ಹಗರಣ?: ಇದು ರಾಜ್ಯದಲ್ಲೇ ಅತಿ ದೊಡ್ಡ ಲ್ಯಾಂಡ್ ಸ್ಕ್ಯಾಂ ಆಗಿದೆ. ಇದೀಗ ಈ ನಕಲಿ ಬಗ್ಗೆ ಅಸಲಿ ತನಿಖೆ ಆರಂಭವಾಗಿದ್ದು, ಫಸ್ಟ್ ಸ್ಟೇಜ್ ನಲ್ಲಿ ಕಡೂರು ಹಾಗೂ ಮೂಡಿಗೆರೆ ತಾಲೂಕಿನಲ್ಲಿ ತನಿಖೆ ಆರಂಭವಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಸಾವಿರಾರು ಎಕರೆ ಸರ್ಕಾರಿ ಭೂಮಿಯನ್ನ ಖಾತೆ ಮಾಡಿರುವ ಅಂಶವೂ ಬೆಳಕಿಗೆ ಬಂದಿದ್ದು ತನಿಖೆ ಆರಂಭವಾಗಿದೆ. ಎಂದು ಜಿಲ್ಲಾ ಧಿಕಾರಿ ಮೀನಾ ನಾಗರಾಜ್ ತಿಳಿಸಿದ್ದಾರೆ.

ಅರ್ಜಿಯನ್ನೇ ಹಾಕದೇ ಇರುವ ವ್ಯಕ್ತಿಗೂ ಭೂಮಿ ಮಂಜೂರು: ಅಕ್ರಮವಾಗಿ ಭೂಮಿ ಮಂಜೂರು ಮಾಡಿಸಿಕೊಂಡವರ ಪೈಕಿ ನೂರಾರು ಸಂಖ್ಯೆಯಲ್ಲಿ ರಾಜಕೀಯ ಪಕ್ಷಗಳ ಸೆಕೆಂಡ್ ಸ್ಟೇಜ್ ನಾಯಕರು ಇದ್ದಾರಂತೆ. ಸತ್ತವರ ಹೆಸರಲ್ಲಿ. ಆ ಊರಲ್ಲಿ ವಾಸವೇ ಇಲ್ಲದವರ ಹೆಸರಲ್ಲೂ ಜಾಗ ಮಂಜೂರಾಗಿದೆಯಂತೆ. ಹಾಗಾಗಿ, ನಿರಂತರ ದೂರುಗಳು ಬಂದ ಹಿನ್ನೆಲೆ, ಅದರಲ್ಲೂ ಪ್ರಮುಖವಾಗಿ ಕಡೂರಿನಲ್ಲಿ ಸರ್ಕಾರಿ ಜಾಗವನ್ನ ಬೇಕಾಬಿಟ್ಟಿಯಾಗಿ ಅಕ್ರಮವಾಗಿ ಖಾತೆ ಮಾಡಿಕೊಡಿಲಾಗಿದೆ.

ಈ ಹಿನ್ನೆಲೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಸರ್ಕಾರಕ್ಕೂ ವರದಿ ನೀಡಿದೆ. ತನಿಖೆಯನ್ನೂ ಕೈಗೊಂಡಿದೆ. ಸರ್ಕಾರಿ ಭೂಮಿ, ಗೋಮಾಳವನ್ನ ಅಕ್ರಮವಾಗಿ ನಕಲಿ ದಾಖಲೆ ಸೃಷ್ಟಿಸಿ ಹಗರಣ ಎಸಗಿರುವ ಬಗ್ಗೆ ಸರ್ಕಾರಕ್ಕೆ ವರದಿ ಕೂಡ ನೀಡಲಾಗಿದೆ.

ಹಾಗಾಗಿ, ಸರ್ಕಾರ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಿದ್ದು, ತನಿಖೆಗಾಗಿ 15 ತಹಶೀಲ್ದಾರರನ್ನ ನೇಮಕ ಮಾಡಿ ತನಿಖೆಗೆ ಸೂಚನೆ ನೀಡಲಾಗಿದೆ.

ಸಂಪೂರ್ಣ ವರದಿ ಬಂದ ಬಳಿಕ ಯಾರ್ಯಾರ ನೆತ್ತಿ ಮೇಲೆ ಯಾವ್ಯಾವ ಕತ್ತಿ ನೇತಾಡುತ್ತೋ ಗೊತ್ತಿಲ್ಲ. ಒಟ್ಟಾರೆ, ಮಂಜೂರಾಗಿರೋ ಭೂಮಿಯಲ್ಲಾ ಅಕ್ರಮ ಅಂತಲ್ಲ. ಸಕ್ರಮವೂ ಇರಬಹುದು. ಆದರೆ, ಅಕ್ರಮದ ಪ್ರಮಾಣವೇ ಹೆಚ್ಚು. ಹಗರಣದ ಸಮಗ್ರ ತನಿಖೆ ಸರಿಯಾದ ಮಾರ್ಗದಲ್ಲಿ ತನಿಖೆಯಾಗಿದ್ದೇ ಆದಲ್ಲಿ ಭೂನುಂಗಣ್ಣರು ಕಂಬಿ ಏಣಿಸೋದು ಗ್ಯಾರಂಟಿ ಅನ್ಸತ್ತೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು