ಮಡಿಕೇರಿ : ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುತ್ವ ಮತ್ತು ರಾಷ್ಟ್ರೀಯವಾದವನ್ನು ಪ್ರಬಲವಾಗಿ ಪ್ರತಿಪಾದನೆ ಮಾಡಿದವರಿಗೆ ಬಿಜೆಪಿಯಲ್ಲಿ ಟಿಕೆಟ್ ತಪ್ಪುತ್ತಿದೆ ಎಂಬ ಭಾವನೆ ಬಲವಾಗುತ್ತಿದೆ. 3 ಬಾರಿ ಉಡುಪಿ ಕ್ಷೇತ್ರದ ಶಾಸಕರಾಗಿ, ಒಂದು ಬಾರಿ ನಗರಸಭೆ ಸದಸ್ಯನಾಗಿ ಸೇವೆ ಸಲ್ಲಿಸಿದ್ದ ತಾವು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ವಂಚಿತನಾದೆ ಈ ಸಂದರ್ಭ ನೈರುತ್ಯ ಕ್ಷೇತ್ರದ ಉಪಚುನಾವಣೆಯಲ್ಲಿ ಟಿಕೆಟ್ ನೀಡುವ ಭರವಸೆ ನೀಡಿಲಾಗಿತ್ತು.
ಈ ಚುನಾವಣೆಯಲ್ಲೂ ಕೊನೆ ಕ್ಷಣದಲ್ಲಿ ಬಿಜೆಪಿ ಟಿಕೆಟ್ ವಂಚಿತನಾದೆ. ಇದು ಕೆಲವು ವ್ಯಕ್ತಿಗಳು ಮಾಡಿದ ನಿರ್ಧಾರ ಅನ್ನಿಸುತ್ತಿದೆ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ರಘುಪತಿ ಭಟ್ ಅಭಿಪ್ರಾಯ ಪಟ್ಟರು. ಹಿಜಾಬ್ ವಿಷಯವನ್ನು ನಾನು ಸೃಷ್ಟಿ ಮಾಡಿದ್ದಲ್ಲ. ಕೆಲವೊಂದು ವಿದ್ಯಾರ್ಥಿನಿಯರನ್ನು ಕೆಲವೊಂದು ಸಂಘಟನೆಗಳು ದಾರಿ ತಪ್ಪ ಸಿದರು. ನಾನು ಹಿಂದೂತ್ವದ ವಾದಿ. ಆದರೆ ಮುಸ್ಲಿಮರು, ಕ್ರೈಸ್ತರ ವಿರೋಧಿ ಅಲ್ಲ-ಮಾಜಿ ಶಾಸಕ ಕೆ.ರಘುಪತಿ ಭಟ್ ಹೇಳಿಕೆ
ಕನ್ನಡ ಮಾಧ್ಯಮ ಶಾಲೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿರುವ ಶಾಲೆಯ ಶಿಕ್ಷಕರಿಗೆ ಸಾಧಕ ಶಿಕ್ಷಕರ ಪ್ರಶಸ್ತಿ ನೀಡುವುದರ ಜತೆಗೆ ಯಕ್ಷ ಶಿಕ್ಷಣ ಟ್ರಸ್ಟ್ ಮೂಲಕ 2006 ರಲ್ಲಿ ಎಲ್ಲ ಶಾಲೆಗಳ ಮಕ್ಕಳಿಗೆ ಯಕ್ಷಗಾನ ಕಲಿಸಲಾಗುತ್ತಿದೆ.
ಶಾಸಕನಾಗಿ ಸಕ್ರಿಯವಾಗಿ ಕೆಲಸ ಮಾಡಿದ್ದೇನೆ. ಇನ್ನಷ್ಟು ಕೆಲಸ ಮಾಡುವ ಇಚ್ಛೆಯಿಂದ ಸ್ಪರ್ಧಿಸಿದ್ದು, ತಮಗೆ ಮೊದಲ ಪ್ರಾಶಸ್ತತ್ಯದ ಮತ ನೀಡುವಂತೆ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ರಘುಪತಿ ಭಟ್ ಮನವಿ