News Karnataka Kannada
Wednesday, May 08 2024
ಉತ್ತರಕನ್ನಡ

ಶಿರಸಿ: ಸುಂಡಳ್ಳಿ ಅರಣ್ಯ ಪ್ರದೇಶದಲ್ಲಿ ಕರಡಿ ದಾಳಿಗೆ ರೈತ ಬಲಿ

Sirsi: Farmer killed in bear attack
Photo Credit : By Author

ಶಿರಸಿ: ತಾಲೂಕಿನ ಸುಂಡಳ್ಳಿ ಅರಣ್ಯ ಪ್ರದೇಶದಲ್ಲಿ ಬುಧವಾರ ಕರಡಿ ದಾಳಿಗೆ ತುತ್ತಾಗಿ ರೈತರೊಬ್ಬರು ಮೃತಪಟ್ಟಿದ್ದಾರೆ.

ದೇವನಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುಂಡಳ್ಳಿ ಗ್ರಾಮದ ಓಂಕಾರ ಪದ್ಮನಾಭ ಜೈನ್ (52) ಮೃತ ರೈತ. ಮನೆಯ ಸಮೀಪದ ಕಾಡಿನಿಂದ ಉಪ್ಪಾಗೆ ಹಣ್ಣು ಸಂಗ್ರಹಕ್ಕೆ ತೆರಳಿದ್ದ ವೇಳೆ ಘಟನೆ ನಡೆದಿದೆ. ಕರಡಿಯಿಂದ ಪಾರಾಗಲು ರೈತ ಸಾಕಷ್ಟು ದೂರ ಓಡಿ ಬಂದಿರುವ ಸಾಧ್ಯತೆ ಇದ್ದು, ರಕ್ಷಣೆಗೆ ಮರ ಏರುವಾಗ ದಾಳಿ ಮಾಡಿದೆ.

ಮರದ ಬುಡದಲ್ಲೇ ದೇಹಕ್ಕೆ ಗಂಭೀರ ಗಾಯಗೊಂಡಿದ್ದ ಓಂಕಾರ ಮೃತ ದೇಹ ಇದ್ದು, ಅವರ ದೇಹದ ಮೇಲಾದ ಗಾಯ ಗಮನಿಸಿದಾಗ ಇದು ಕರಡಿ ದಾಳಿ ಎಂಬುದು ಸ್ಪಷ್ಟವಾಗಿದೆ. ಮೃತ ವ್ಯಕ್ತಿಯ ಚೀರಾಟ ಕೇಳಿ ಕಾಡಿನತ್ತ ಸ್ಥಳೀಯರು ಓಡಿದ್ದಾರೆ. ನಂತರ ಘಟನೆ ಬೆಳಕಿಗೆ ಬಂದಿದೆ. ಅರಣ್ಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು