ಕಾರವಾರ: ಅನ್ಯರ ಆಧಾರ್ ಕಾರ್ಡ್ಗೆ ತನ್ನ ಭಾವಚಿತ್ರವನ್ನು ಎಡಿಟ್ ಮಾಡಿ ಸೇರಿಸಿಕೊಂಡಿದ್ದ ಹಾಗೂ ಬೇರೆಯವರ ಹೆಸರಿನಲ್ಲಿದ್ದ ಮೊಬೈಲ್ ಸಿಮ್ ಕಾರ್ಡ್ ಬಳಕೆ ಮಾಡುತ್ತಿದ್ದ ಜಮ್ಮು ಮತ್ತು ಕಾಶ್ಮೀರ ಶ್ರೀನಗರದ ಲಾಲ ಬಜಾರ ನ್ಯೂ ಕಾಲನಿ ನಿವಾಸಿ ಮುಬಾಶೀರ್ ಯೂಸೂಫ್ ಮೊಹಮ್ಮದ ಯೂಸೂಫ ಕೊಜ್ವಾಲ್ (38) ಎನ್ನುವಾತನನ್ನು ಕಾರವಾರ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಈತ ರಾಜಸ್ಥಾನದ ಬೋರಿ ಬನ್ಸವಾರಾದ ಕುರಿಯಾ ದಾಮೋರ ಎನ್ನುವವರ ಆಧಾರ ಕಾರ್ಡ್ ತನ್ನ ಭಾವಚಿತ್ರ ಎಡಿಟ್ ಮಾಡಿ ಅದರ ಸ್ಟೀನ್ ಶಾಟ್ ಮೊಬೈಲ್ ನಲ್ಲಿ ಇರಿಸಿಕೊಂಡಿದ್ದ. ಜೊತೆಗೆ ಬೇರೆಯವರ ಹೆಸರಿನಲ್ಲಿದ್ದ ಸಿಮ್ ಕಾರ್ಡ್ ಬಳಕೆಗೆ ಇಟ್ಟುಕೊಂಡಿದ್ದ. ಇತ ಕಳೆದ ಮಾರ್ಚ್ 16 ಕೇರಳ ಕಡೆಯಿಂದ ರೈಲ್ವೆಯಲ್ಲಿ ಕಾರವಾರಕ್ಕೆ ಆಗಮಿಸಿ, ಶಿರವಾಡ ಕೊಂಕಣ ರೈಲ್ವೆ ಆರ್.ಪಿ.ಎಫ್ ಅವರಿಗೆ ತನ್ನ ಮೊಬೈಲ್ ಕಾಣೆಯಾಗಿದೆ ಎಂದು ದೂರು ನೀಡಿದ್ದ. ಪೊಲೀಸರು ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಈತ ಸಿಕ್ಕಿ ಬಿದ್ದಿದ್ದಾನೆ. ಕಾರವಾರದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.