News Karnataka Kannada
Thursday, May 02 2024
ಉತ್ತರಕನ್ನಡ

ಕಾರವಾರ: ಸತೀಶ ಜಾರಕಿಹೊಳಿ ವಿರುದ್ಧ ಎಸ್ಪಿ ಕಚೇರಿ ಬಳಿಕ ಬಿಜೆಪಿಗರಿಂದ ಪ್ರತಿಭಟನೆ

BJP workers stage protest against Satish Jarkiholi after SP office
Photo Credit : By Author

ಕಾರವಾರ: ಹಿಂದೂ ಎಂಬುದು ಪರ್ಷಿಯನ್ ಭಾಷೆಯಲ್ಲಿ ಅಶ್ಲೀಲ ಪದ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಯಮಕಾನ್ಮರಡಿ ಶಾಸಕ ಸತೀಶ ಜಾರಕಿಹೊಳಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸುವಂತೆ ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಬುಧವಾರ ಮನವಿ ಸಲ್ಲಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಸತೀಸ್  ಜಾರಕಿಹೊಳಿ ವಿರುದ್ಧ ಘೋಷಣೆ ಕೂಗಿದರು. ಕಾಂಗ್ರೆಸ್ ಪಕ್ಷವು ಭಾರತದ ಜೊತೆ ಸಂಪರ್ಕತಪ್ಪಿಸಿಕೊಂಡಿದೆದೇಶ- ಧರ್ಮದ ಬಗ್ಗೆ ಅರಿವಿಲ್ಲದೆ ಅಜ್ಞಾನದ ಮನಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಮಾತನಾಡುತ್ತಿದ್ದಾರೆ.

ಹಿಂದೂ ಎಂದರೆ ಒಂದು ಜೀವನ ಪದ್ಧತಿ. ಇದನ್ನು ಒಡೆದು ಆಳಲು ಬ್ರಿಟಿಷರು ಆರ್ಯ- ದ್ರಾವಿಡ ಎಂಬ ಸಂಸ್ಕೃತಿಯನ್ನು ಬಿಂಬಿಸಿದರು. ಕಾಂಗ್ರೆಸ್ ಪಕ್ಷವು ಮತ್ತೆ ಮತ್ತೆ ಅದನ್ನು ಪುನರುಚ್ಚಾರ ಮಾಡುತ್ತಿದೆ ಎಂದುಆರೋಪಿಸಿದರು.ದೇಶದ ಮೂಲ ಸಂಸ್ಕೃತಿ ಹಿಂದೂ ಹೆಸರಿನಲ್ಲೇ ಬಂದಿದೆ. ಆದರೆ, ಪ್ರಸ್ತುತ ನಾವು ಈ  ದೇಶದ ಹಿಂದೂ ಧರ್ಮ ಸನಾತನ ಧರ್ಮ, ಶ್ರೇಷ್ಠ, ಅತ್ಯಂತ ಪುರಾತನ, ಗೌರವಯುತವಾದುದು ಎಂದೇ ತಿಳಿದಿದ್ದೇವೆ.ಸಮಗ್ರ ಮಾನವ ಜೀವನಕ್ಕೆ ಬೇಕಾದ ಒಂದು ಜೀವನ ಪದ್ಧತಿಯ ಅಡಕವು ಆ ಶಬ್ದದ  ಒಳಗೆ ಅಡಗಿದೆ.ಯಾರೋ ಒಬ್ಬರು ಅದನ್ನು ಅರ್ಥ ಮಾಡಿಕೊಳ್ಳದೆ ಹೇಗ್ಹೇಗೋ ವರ್ಣನೆ ಮಾಡಿದರೆ  ಹಿಂದೂಧರ್ಮದ ಮೌಲ್ಯ ಕಡಿಮೆ ಆಗದು. ಕಾಂಗ್ರೆಸನ ಕನೆಕ್ಟಿವಿಟಿ ಈ ದೇಶದಿಂದ ತಪ್ಪಿ ಹೋಗಿರುವುದನ್ನುಈ ಹೇಳಿಕೆ ಮೂಲಕ ಅರ್ಥ ಮಾಡಿಕೊಳ್ಳಬಹುದು ಎಂದು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಶಾಸಕ ಸತೀಶ ಜಾರಕಿಹೊಳಿಯವರು ಬಹುಸಂಖ್ಯಾತ ಹಿಂದುಗಳನಿಂದಿಸಿದ್ದಲ್ಲದೆ ನಮ್ಮ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ್ದಾರೆ. ಕೂಡಲೇ ಇಂತಹ ಸಮಾಜ ಘಾತುಕ ಕೃತ್ಯವೆಸಗಿದವರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಈ ವೇಳೆ ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ, ಶಾಸಕಿ ರೂಪಾಲಿ ನಾಯ್ಕ, ಎಂಎಲ್ಸಿ ಗಣಪತಿ ಉಳ್ವೇಕರ್,  ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯಕ, ಜಿಲ್ಲಾ ಮಾಧ್ಯಮ ವಕ್ತಾರ ನಾಗರಾಜನಾಯಕ, ನಯನಾ ಲೀಲಾವರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು