ಕಾರವಾರ: ಮುಂಡಗೋಡದಲ್ಲಿ ದಾಖಲಾಗಿದ್ದ ಫೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರದ ವಿಶೇಷ ತ್ವರಿತ ನ್ಯಾಯಾಲಯ ಅಪರಾಧಿಗೆ 1.20 ಲಕ್ಷ ರೂ. ದಂಡ ಮತ್ತು 20 ವರ್ಷ ಶಿಕ್ಷೆ ವಿಧಿಸಿ ಆದೇಶ ಮಾಡಿದೆ. ಮುಂಡಗೋಡ ತಾಲೂಕಿನ ಓರಲಗಿಯ ಶಿವಾನಂದ ಗೌಳೇರ ಶಿಕ್ಷೆಗೆ ಗುರಿಯಾದ ವ್ಯಕ್ತಿ.
ಈತನ ವಿರುದ್ಧ ಫೋಕ್ಸೋ ಕಾಯ್ದೆಯಡಿ ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶಿವಾಜಿ ನಲವಾಡೆ ಅವರು ಆದೇಶ ಪ್ರಕಟಿಸಿದ್ದಾರೆ. ಸಂತ್ರಸ್ತರ ಪರ ಸರಕಾರದ ವಿಶೇಷ ವಕೀಲೆ ಶುಭಾ ಗಾಂವಕರ ಅವರು ವಾದ ಮಂಡಿಸಿದ್ದರು