News Karnataka Kannada
Monday, May 06 2024
ಉತ್ತರಕನ್ನಡ

ಗೋಕರ್ಣ: ಗುರು, ಗುರುಕುಲ ಮರೆಯಬೇಡಿ- ರಾಘವೇಶ್ವರ ಶ್ರೀ

Gokarna: Guru, don't forget gurukul- Raghaveswara Sri
Photo Credit : News Kannada

ಗೋಕರ್ಣ: ಬಾಳಿಗೆ ಬೆಳಕು ನೀಡುವ ಗುರು ಹಾಗೂ ಗುರುಕುಲವನ್ನು ವಿದ್ಯಾರ್ಥಿಗಳು ಎಂದಿಗೂ ಮರೆಯಬಾರದು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.

ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಾರ್ವಭೌಮ ಗುರುಕುಲದಲ್ಲಿ ಎರಡು ದಿನಗಳ ಕಾಲ ನಡೆದ ಪ್ರಥಮ ‘ವಿದ್ಯಾಪರ್ವ’ ವಾರ್ಷಿಕೋತ್ಸವ ಸಮಾರಂಭದಲ್ಲಿ ಪರಮಪೂಜ್ಯರು ಆಶೀರ್ವಚನ ನೀಡಿದರು.

ವಿದ್ಯಾರ್ಥಿ ಜೀವನದಲ್ಲಿ ಹಾಗೂ ವಿಸ್ತøತವಾಗಿ ಇಡೀ ಜೀವನದಲ್ಲಿ ಶಿಸ್ತು ಮುಖ್ಯ. ಶಿಸ್ತು ಅಳವಡಿಸಿಕೊಂಡ ವ್ಯಕ್ತಿ ಸಹಜವಾಗಿಯೇ ಉನ್ನತ ಸ್ಥಾನಕ್ಕೆ ಏರುತ್ತಾನೆ. ಆದ್ದರಿಂದ ಎಳವೆಯಲ್ಲೇ ಮಕ್ಕಳು ಶಿಸ್ತು ರೂಢಿಸಿಕೊಂಡು ಜೀವನದಲ್ಲಿ ಉನ್ನತಿ ತಲುಪುವ ಪ್ರಯತ್ನ ಮಾಡಬೇಕು ಎಂದು ಸಲಹೆ ಮಾಡಿದರು.

ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಸ್ಪೆಕ್ಟ್ರಮ್ ಗ್ರೂಪ್ ಆಫ್ ಕಂಪನೀಸ್ ಸಂಸ್ಥಾಪಕ ವಿ.ಸುದರ್ಶನ್ ಆಗಮಿಸಿದ್ದರು. ರಘುನಂದನ ಬೇರ್ಕಡವು ಅವರು ಸ್ವಾಗತಿಸಿದರು. ಕಾರ್ಯಕ್ರಮವು ಶಂಖನಾದ, ಗುರುವಂದನೆ, ವೇದಘೋಷದೊಂದಿಗೆ ಆರಂಭವಾಯಿತು.

ವಿವಿವಿ ಆಡಳಿತ ಮಂಡಳಿ ಸರ್ವಾಧ್ಯಕ್ಷ ಡಿ.ಡಿ.ಶರ್ಮಾ ದೀಪಜ್ವಲನವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಯಕ್ಷಗಾನಲೋಕದ ಹಾಸ್ಯ ದಿಗ್ಗಜ ಶ್ರೀಪರಮಾನಂದ ಹಾಸ್ಯಗಾರ, ವಿದ್ಯಾಪರಿಷತ್ತಿನ ಅಧ್ಯಕ್ಷರಾದ ಪ್ರೊ.ಎಮ್.ಆರ್.ಹೆಗಡೆ, ನವಯುಗ ವರಿಷ್ಠಾಚಾರ್ಯರಾದ ಎಸ್.ಜಿ.ಭಟ್ಟ, ಪಾರಂಪರಿಕ ವರಿಷ್ಠಾಚಾರ್ಯರಾದ ಸತ್ಯನಾರಾಯಣ ಶರ್ಮಾ, ಪರಂಪರಾ ಗುರುಕುಲದ ಪ್ರಾಚಾರ್ಯರಾದ ನರಸಿಂಹ ಭಟ್ಟ, ವ್ಯವಸ್ಥಾ ಪರಿಷತ್ತಿನ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ವಿವಿವಿಯ ನಿರ್ದೇಶಕ ಶ್ರೀಪಾದ ಭಟ್ಟ , ಪ್ರಸಿದ್ಧ ಚೆಸ್ ಪಟು ಸದಾನಂದ ಹೆಬ್ಬಾರ್, ಪ್ರಭಾರ ಪ್ರಾಂಶುಪಾಲರಾದ ಶ್ವೇತಾ ಭಟ್ಟ, ಮುಖ್ಯೋಪಾಧ್ಯಾಯಿನಿ ಸೌಭಾಗ್ಯ ಭಟ್ಟ ಮತ್ತಿತರರು ಉಪಸ್ಥಿತರಿದ್ದರು.

ತೇಜಸ್ವಿನಿ ಭಟ್ಟ ನಿರೂಪಿಸಿ ಶಶಿಕಲಾ ಕೂರ್ಸೆ ವಂದಿಸಿದರು. ಕ್ರೀಡೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಗಣ್ಯರಿಂದ ಪ್ರಶಸ್ತಿಯನ್ನು ನೀಡಲಾಯಿತು. ಬಳಿಕ ಮಕ್ಕಳಿಂದ ಆಕರ್ಷಕ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ಕನ್ನಡ, ಆಂಗ್ಲಭಾಷೆ ಮತ್ತು ಸಂಸ್ಕøತಭಾಷೆಯಲ್ಲಿ ನಿರೂಪಣೆಯನ್ನೂ ಕಾರ್ಯಕ್ರಮದ ನಿರ್ವಹಣೆಯನ್ನೂ ವಿದ್ಯಾರ್ಥಿಗಳೇ ನೆರವೇರಿಸಿದರು. ಸಂಗೀತ, ನೃತ್ಯ, ವಾದ್ಯ, ನಾಟಕ, ಚಿತ್ರ, ಮೂಕಾಭಿನಯಗಳ ಮೂಲಕ ವಿದ್ಯಾರ್ಥಿಗಳು ಪ್ರತಿಭಾಪ್ರದರ್ಶನವನ್ನು ಮಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು