ಬೈಂದೂರು: ಗಂಗೊಳ್ಳಿ ಬಂದರಿನಲ್ಲಿ ಜೆಟ್ಟಿಯ ಸ್ಲ್ಯಾಬ್ ಮತ್ತು ಡಯಾಪ್ರಾಮ್ ವಾಲ್ ಕುಸಿದು ಬಿದ್ದ ಪರಿಣಾಮ ಜೆಟ್ಟಿ ಪುನರ್ ನಿರ್ಮಾಣ ಕಾರ್ಯಕ್ಕೆ ಹಾನಿಯಾಗಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
12 ಕೋಟಿ ರೂ. ವೆಚ್ಚದಲ್ಲಿ ಗಂಗೊಳ್ಳಿ ಮೀನುಗಾರಿಕಾ ಬಂದರಿನ ಜೆಟ್ಟಿಯ ಪುನರ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಬುಧವಾರ ರಾತ್ರಿ ಕಾಮಗಾರಿ ನಡೆಯುತ್ತಿದ್ದ ಸಂದರ್ಭ ಹಳೆ ಜೆಟ್ಟಿಯ ಕಾಂಕ್ರೀಟ್ ಸ್ಲ್ಯಾಬ್ ಹಾಗೂ ಡಯಾಪ್ರಾಮ್ ವಾಲ್ ಏಕಾಏಕಿ ಕುಸಿದು ಬಿದ್ದಿದೆ.
ಕಾಂಕ್ರೀಟ್ ಸ್ಲ್ಯಾಬ್ ಮತ್ತು ಡಯಾಪ್ರಾಮ್ ವಾಲ್ ಕುಸಿದು ಬಿದ್ದ ಪರಿಣಾಮ ಜೆಟ್ಟಿ ಪುನರ್ ನಿರ್ಮಾಣ ಕಾರ್ಯಕ್ಕೆ ಅಳವಡಿಸಲಾಗಿದ್ದ 8 ಪಿಲ್ಲರ್ ಹಾಗೂ ಇನ್ನಿತರ ಕಾಂಕ್ರೀಟ್ ಕಾಮಗಾರಿಗೆ ಹಾನಿಯಾಗಿದೆ.
ಪಿಲ್ಲರ್ ಡಯಾಪ್ರಾಮ್ ವಾಲ್ ಕುಸಿದು ಬಿದ್ದಿದ್ದು ಹೊಸದಾಗಿ ಹಾಕಿದ ಪಿಲ್ಲರ್ಗಳು ವಾಲಿಕೊಂಡಿದೆ ಲಕ್ಷಾಂತರ ರೂ. ನಷ್ಟ ಸಂಭವಿಸಿದ್ದು ಜೆಟ್ಟಿ ನಿರ್ಮಾಣದ ಕಾರ್ಯಕ್ಕೆ ಮತ್ತೆ ಹಿನ್ನಡೆ ಆಗಿದೆ, ಹೊಸ ಮೀನುಗಾರಿಕಾ ಪ್ರಾಂಗಣ ಅಪಾಯದ ಅಂಚಿನಲ್ಲಿದೆ ಘಟನೆಯ ಸ್ಥಳಕ್ಕೆ ಉಡುಪಿಯ ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉದಯಕುಮಾರ್ ಮತ್ತು ಸಹಾಯಕ ಇಂಜಿನಿಯರ್ ಜಯರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.