News Karnataka Kannada
Monday, May 06 2024
ಉತ್ತರಕನ್ನಡ

ಅಪರೂಪದ ಕಡಲಾಮೆ ಕಳೇಬರ ಪತ್ತೆ

New Project (100)
Photo Credit :
ಕಾರವಾರ : ತಾಲೂಕಿನ ಮಾಜಾಳಿ ಕಡಲತೀರದಲ್ಲಿ ಅತೀ ಅಪರೂಪ ಹಾಗೂ ವಿನಾಶದ ಹಂತದಲ್ಲಿರುವ ಕಡಲಾಮೆ ಕಳೇಬರ ಪತ್ತೆಯಾಗಿದೆ.
ಆಮೆಗೆ ಗಿಡುಗನ ಕೊಕ್ಕಿನ ರೀತಿಯ ಅಪರೂಪದ ರಚನೆ ಇರುವ ಹಿನ್ನೆಲೆಯಲ್ಲಿ ಈ ಕಡಲಾಮೆಯ ಪ್ರಬೇಧವನ್ನು ಹ್ವಾಕ್ಸ್ ಬಿಲ್ ಟರ್ಟಲ್ ಎಂದು ಕರೆಯಲಾಗುತ್ತದೆ.
ಈ ಪ್ರಭೇದ ಸಾಗರ ಜೀವಿಶಾಸ್ತ್ರ ವಿಜ್ಞಾನಿಗಳ ಅಚ್ಚರಿಗೆ ಕಾರಣವಾಗಿದೆ. ಇವುಗಳ ಜೀವಿತಾವಧಿ 50 ರಿಂದ 60 ವರ್ಷವಾಗಿದ್ದು ಹವಳದ ದ್ವೀಪ ಇವುಗಳ ವಾಸ ಸ್ಥಳವಾಗಿದೆ. ಅಂಡಮಾನ ನಿಕೋಬಾರ್, ಲಕ್ಷ ದ್ವೀಪದಲ್ಲಿ ಇವು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತುವೆ. ವನ್ಯ ಜೀವಿ ಕಾಯಿದೆ ಅಡಿ ಈ ಅಪರೂಪದ ಆಮೆಗಳು ಸಂರಕ್ಷಿತ ಪ್ರಭೇದವಾಗಿದೆ ಎಂದು ಸಾಗರ ವಿಜ್ಞಾನಿ ಶಿವಕುಮಾರ್ ಹರಗಿ ಮಾಹಿತಿ ನೀಡಿದ್ದಾರೆ. ಕಡಲಾಮೆಯ ಕಳೇಬರವನ್ನು ಮರಣೋತ್ತರ ಪರೀಕ್ಷೆ ಮಾಡಿದ  ಬಳಿಕ ಕೋಸ್ಟಲ್ ಮರೈನ್ ಮತ್ತು ಇಕೋ ಸಿಸ್ಟಂ ವಿಭಾಗದ ವಲಯ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಹೂಳಲಾಯಿತು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು