ಕುಂದಾಪುರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಡುಪಿ ಜಿಲ್ಲೆ, ಶಿಶು ಅಭಿವೃದ್ಧಿ ಯೋಜನೆ ಕುಂದಾಪುರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಮರವಂತೆ ಹಾಗೂ ಗುಜ್ಜಾಡಿ ಗ್ರಾಮ ಪಂಚಾಯತ್ ಸಹಭಾಗಿತ್ವದಲ್ಲಿ ಗ್ರಾಮ ಮಟ್ಟದ ಪೋಷಣ್
ಅಭಿಯಾನ ಕಾರ್ಯಕ್ರಮ ಗುಜ್ಜಾಡಿ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು.
ಗುಜ್ಜಾಡಿ ಗ್ರಾ.ಪಂ ಅಧ್ಯಕ್ಷೆ ಯಮುನಾ ಪೂಜಾರಿ ಮತ್ತು ಉಪಾಧ್ಯಕ್ಷ ರಾಜು ಪೂಜಾರಿ ಅವರು ಜಂಟಿಯಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಾ.ಪಂ ಸದಸ್ಯರಾದ ಹರೀಶ ಮೇಸ್ತ, ತಮ್ಮಯ್ಯ ದೇವಾಡಿಗ, ಲೋಲಾಕ್ಷಿ ಪಂಡಿತ್, ಭಾರತಿ, ಜಯಂತಿ, ಮಾಜಿ ತಾ.ಪಂ ಸದಸ್ಯ ನಾರಾಯಣ ಕೆ ಗುಜ್ಜಾಡಿ, ಪಂಚಾಯತ್ ಲೆಕ್ಕ ಪರಿಶೋಧಕ ಶೇಖರ ಜಿ, ಶಿಕ್ಷಕಿ ನಯನ ನಾಯಕ್, ವಿಶ್ವನಾಥ ಮೇಸ್ತ, ವಿಜಯ ಗಾಣಿಗ, ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಎಚ್ಓ ಪೂಜಾ ಹಾಗೂ ವಿಶ್ವನಾಥ್, ಅಂಗನವಾಡಿ, ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ವಲಯ ಮೇಲ್ವಿಚಾರಕಿ ರಾಜೇಶ್ವರಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಅಂಗನವಾಡಿ ಕಾರ್ಯಕರ್ತೆ ಸರಸ್ವತಿ ಸ್ವಾಗತಿಸಿದರು. ಆರೋಗ್ಯ ಕಾರ್ಯಕರ್ತೆ ನಾಗರತ್ನ ನಿರೂಪಿಸಿದರು. ಆಶಾ ವಂದಿಸಿದರು.