ಶಿರ್ವ, ಆ.2: ಬೈಕಿನಿಂದ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಪಳ್ಳಿ- ಸೂಡಾ ರಸ್ತೆಯ ಮಕ್ಕೇರಿಬೈಲು ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.
ಮೃತರನ್ನು ಕಣಂಜಾರು ಗುಂಡಳಿಕೆ ನಿವಾಸಿ ತುಕ್ರ ಪೂಜಾರಿ ಎಂಬವರ ಮಗಳು ಪುಷ್ಪ(49) ಎಂದು ಗುರುತಿಸಲಾಗಿದೆ. ತನ್ನ ತಮ್ಮ ರಾಜೇಶ್ ಜೊತೆ ನಾಗರಪಂಚಮಿ ಪ್ರಯುಕ್ತ ದೇವಸ್ಥಾನಕ್ಕೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಬೈಕ್ನಿಂದ ಆಯತಪ್ಪಿ ಬಿದ್ದ ಪುಷ್ಪಾ ಅವರ ತಲೆಗೆ ತೀವ್ರವಾಗಿ ಗಾಯಗೊಂಡು ಅವರು ಉಡುಪಿ ಅಜ್ಜರಕಾಡು ಸರಕಾರಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ದೂರಲಾಗಿದೆ.ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.