ಉಡುಪಿ: ಶಿರ್ವ ಚರ್ಚ್ ಸಮೀಪದ ಕಾನ್ವೆಂಟ್ ರಸ್ತೆಯ ರಿಯಾನ್ನಾ ಜೀನ್ ಡಿ’ಸೋಜಾ (20) ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿದರು.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ರಿಯಾನ್ನಾ ಡಿಸೋಜಾ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದ ರಿಯಾನ್ನ ಕಳೆದ ವರ್ಷ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರು. ವಿದ್ಯಾಭ್ಯಾಸದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಕೂಡ ಮಂಚೂಣಿಯಲ್ಲಿದ್ದ ರಿಯಾನ್ನಾ ಅತ್ಯುತ್ತಮ ನೃತ್ಯಪಟುವಾಗಿದ್ದರು. ಹಲವಾರು ನೃತ್ಯಗಳಿಗೆ ಕೋರಿಯೊಗ್ರಾಫಿ ಮಾಡಿದ್ದರು. ಶಿರ್ವ ಸೈಂಟ್ ಮೇರಿಸ್ ವಿದ್ಯಾಸಂಸ್ಥೆ ಹಾಗೂ ನಿಟ್ಟೆಯಲ್ಲಿ ವಿದ್ಯಾಭ್ಯಾಸವನ್ನು ಪಡೆದಿದ್ದ ಇವರು, ಬಿಕಾಂ ಮುಗಿಸಿ ಮಣಿಪಾಲದಲ್ಲಿ ಎಂಕಾಂ ವಿದ್ಯಾಭ್ಯಾಸಕ್ಕಾಗಿ ಸಿದ್ದತೆ ನಡೆಸುತ್ತಿದ್ದರು. ಆದರೆ ಇದೇ ವೇಳೆ ಅವರು ಮಾರಕ ಕ್ಯಾನ್ಸರ್ ರೋಗಕ್ಕೆ ತುತ್ತಾದರು. ಮೃತ ವಿದ್ಯಾರ್ಥಿನಿ ತಾಯಿ, ಸಹೋದರ ಹಾಗೂ ಅಪಾರ ಸ್ನೇಹಿತರು ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ.