News Karnataka Kannada
Friday, May 03 2024
ಉಡುಪಿ

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯನ್ನು ರಕ್ಷಿಸಿದ ತಂದೆ-ಮಗ

Father-son duo rescues national bird after falling into well in Udyavara
Photo Credit : News Kannada

ಉದ್ಯಾವರ: ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿ ನವಿಲನ್ನು ತಂದೆ ಹಾಗೂ‌ ಮಗ ರಕ್ಷಣೆ ಮಾಡಿದ ಘಟನೆ ಉದ್ಯಾವರ ಕಲಾಯಿಬೈಲ್ ಎಂಬಲ್ಲಿ ನಡೆದಿದೆ.

ನವಿಲೊಂದು ಆಕಸ್ಮಿಕವಾಗಿ ಬಾವಿಗೆ ಬಿದ್ದು‌ ಹೊರಗೆ ಬರಲು ಆಗದೆ ಒದ್ದಾಡುತ್ತಿತ್ತು. ಇದನ್ನು ಕಂಡ ವಿಜಯಕುಮಾರ್ ಹಾಗೂ ಅವರ ಮಗ ವಿಶಾಲ್ ಅವರು ನವಿಲಿನ ರಕ್ಷಣೆಗೆ ಮುಂದಾದರು. ವಿಶಾಲ್ ಹಗ್ಗದ ಸಹಾಯದಿಂದ ಬಾವಿಗೆ ಇಳಿದು, ಕಾಲಿನ ಮೂಲಕ ನವಿಲನ್ನು ಮೇಲೆತ್ತಿದರು. ಬಳಿಕ ವಿಜಯಕುಮಾರ್ ನವಿಲನ್ನು‌ ಹಿಡಿದು ಬಾವಿಯ ಹೊರಗೆ ತಂದರು. ತಂದೆ ಮತ್ತು ಮಗನ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ವುಗೆ ವ್ಯಕ್ತವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು