ಸೈಂಟ್ ಮೇರಿಸ್ ದ್ವೀಪ: ಉಡುಪಿ ಜಿಲ್ಲೆಯ ರಜತ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ಮಲ್ಪೆ ಬೀಚ್ ಉತ್ಸವದಲ್ಲಿ ಅಡ್ವೆಂಚರ್ಸ್ ವಾಟರ್ ಸ್ಪೋರ್ಟ್ಸ್ ಗಳನ್ನು ಪರಿಚಯಿಸಲಾಗಿದೆ.
ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಆರಂಭಿಸಿರುವ ಕ್ಲಿಫ್ ಡೈವಿಂಗ್, ಸ್ಲಾಕ್ ಲೈನ್ ಹಾಗೂ ಸ್ಕೂಬಾ ಡೈವಿಂಗ್ ವಾಟರ್ ಸ್ಪೋರ್ಟ್ಸ್ ಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಕ್ಲಿಫ್ ಡೈವಿಂಗ್ ಗೆ ಶಾಸಕ ಕೆ.ರಘುಪತಿ ಭಟ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ದೇಶದ ಎರಡನೇ ಅತಿ ಎತ್ತರದ ಕ್ಲಿಫ್ ಡೈವಿಂಗ್ ಇದಾಗಿದೆ. ಇದನ್ನು ನಿರಂತರವಾಗಿ ಮುಂದುವರೆಸುವ ನಿಟ್ಟಿನಲ್ಲಿ ಈ ಬಗ್ಗೆ ಸ್ಥಳೀಯರಿಗೆ ತರಬೇತಿ ನೀಡಿ ತೊಡಗಿಸಿಕೊಳ್ಳುವಂತೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಲ್ಪೆ ಬೀಚ್ ಉಸ್ತುವಾರಿ ಸುದೇಶ್ ಶೆಟ್ಟಿ, ಮಂಜುನಾಥ ಕೊಳ, ಕ್ಲಿಪ್ ಡೈವಿಂಗ್ ತರಬೇತುದಾರ ಯಾದವ್ ಮೊದಲಾದವರು ಉಪಸ್ಥಿತರಿದ್ದರು.