News Karnataka Kannada
Monday, May 06 2024
ಉಡುಪಿ

ಕೋಳಿ ಅಂಕಕ್ಕೆ ಪೊಲೀಸರ ದಾಳಿ: ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯ ಸಹಿತ 11 ಮಂದಿ ವಶ

ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಕೃತ್ಯವನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ  ಹರಿಬಿಟ್ಟ ಘಟನೆ ಏಪ್ರಿಲ್ 21 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
Photo Credit : News Kannada

ಉಡುಪಿ: ಕೋಳಿ ಅಂಕ ಅಡ್ಡೆಗೆ ದಾಳಿ ನಡೆಸಿದ ಮಣಿಪಾಲ ಪೊಲೀಸರು 11 ಮಂದಿಯನ್ನು ವಶಕ್ಕೆ ಪಡೆದುಕೊಂಡ ಘಟನೆ ಹಿರೇಬೆಟ್ಟು ಗ್ರಾಮದ ಕಬ್ಯಾಡಿ ಕಂಬಳ ಗದ್ದೆಯಲ್ಲಿ ಎಂಬಲ್ಲಿ ನಡೆದಿದೆ.

80 ಬಡಗಬೆಟ್ಟು ಗ್ರಾಪಂನ ಬಿಜೆಪಿ ಬೆಂಬಲಿತ ಸದಸ್ಯ ಶುಭಕ‌ರ್ ಶೆಟ್ಟಿ ನೇತೃತ್ವದಲ್ಲಿ ಈ ಕೋಳಿ ಅಂಕ‌ ನಡೆಯುತ್ತಿತ್ತು ಎನ್ನಲಾಗಿದೆ‌.

ಖಚಿತ ಮಾಹಿತಿ ಮೇರೆಗೆ ಮಣಿಪಾಲ ಎಸ್‌ಐ ರಾಘವೇಂದ್ರ ಸಿ. ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು, ಗ್ರಾಪಂ ಸದಸ್ಯ ಶುಭಕ‌ರ್ ಶೆಟ್ಟಿ ಆತ್ರಾಡಿ, ರಾಕೇಶ್ ಶೆಟ್ಟಿ ಕುಕ್ಕುದಕಟ್ಟೆ, ಉಮೇಶ್ ಕಬ್ಯಾಡಿ, ವಿಶ್ಲೇಶ್ ಕಬ್ಯಾಡಿ, ವಿವೇಕ್, ದಿನೇಶ ನಾಯ್ಕ್, ರತ್ನಾಕರ್ ಪೂಜಾರಿ ಪೆರ್ಡೂರು, ವಿಠಲ್ ನಾಯ್ಕ್ ಕಾಜಾರಗುತ್ತು, ರಾಜೇಶ್ ನಾಯ್ಕ್ ನೆಲ್ಲಿಕಟ್ಟೆ, ಜಯ ಶೆಟ್ಟಿ ಹಿರೇಬೆಟ್ಟು ಹಾಗೂ ಸುಂದರ ಬಡಗಬೆಟ್ಟು ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ವೇಳೆ 5450 ರೂ.ಮೌಲ್ಯದ ಹತ್ತು ಹುಂಜ, 2800 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು