News Karnataka Kannada
Thursday, May 09 2024
ಉದ್ಯೋಗ

ಜಿಲ್ಲಾವಾರು ಪಿಡಿಓ, ಪಂಚಾಯ್ತಿ ಕಾರ್ಯದರ್ಶಿ ಹುದ್ದೆ ನೇಮಕ

ರಾಜ್ಯ ಸರ್ಕಾರದಿಂದ ಪಿಡಿಓ, ಪಂಚಾಯ್ತಿ ಕಾರ್ಯದರ್ಶಿ ಹುದ್ದೆ ನೇಮಕಾತಿಯಲ್ಲಿ ಬದಲಾವಣೆ ತರಲಾಗುತ್ತಿದೆ. ಇನ್ಮುಂದೆ ಜಿಲ್ಲಾವಾರು ನೇಮಕಾತಿ ನಡೆಯಲಿದ್ದು, ಒಬ್ಬರಿಗೆ ಒಂದು ಜಿಲ್ಲೆಗೆ ಮಾತ್ರ ಅರ್ಜಿ ಸಲ್ಲಿಸೋದಕ್ಕೆ ಅವಕಾಶ ನೀಡಲಾಗುತ್ತಿದೆ.
Photo Credit : News Kannada

ಬೆಂಗಳೂರು: ರಾಜ್ಯ ಸರ್ಕಾರದಿಂದ ಪಿಡಿಓ, ಪಂಚಾಯ್ತಿ ಕಾರ್ಯದರ್ಶಿ ಹುದ್ದೆ ನೇಮಕಾತಿಯಲ್ಲಿ ಬದಲಾವಣೆ ತರಲಾಗುತ್ತಿದೆ. ಇನ್ಮುಂದೆ ಜಿಲ್ಲಾವಾರು ನೇಮಕಾತಿ ನಡೆಯಲಿದ್ದು, ಒಬ್ಬರಿಗೆ ಒಂದು ಜಿಲ್ಲೆಗೆ ಮಾತ್ರ ಅರ್ಜಿ ಸಲ್ಲಿಸೋದಕ್ಕೆ ಅವಕಾಶ ನೀಡಲಾಗುತ್ತಿದೆ.

ಬೆಂಗಳೂರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ ಪಂಚಾ ಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ), ಪಂಚಾ ಯಿತಿ ಕಾರ್ಯದರ್ಶಿ ಗ್ರೇಡ್ -1 ಮತ್ತು ಗ್ರೇಡ್-2 ಹಾಗೂ ಎಸ್‌ಡಿಎ ಹುದ್ದೆಗಳಿಗೆ ‘ಜಿಲ್ಲಾವಾರು ನೇಮಕಾತಿ’ ನಡೆಯಲಿದ್ದು, ಒಬ್ಬ ಅಭ್ಯರ್ಥಿ ಒಂದು ಜಿಲ್ಲೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕಾರ್ಯದರ್ಶಿ ಮತ್ತು ಪಿಡಿಒ ಹುದ್ದೆ ಸೇರಿ 1 ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಇದರಲ್ಲಿ ಸುಮಾರು 733 ಹುದ್ದೆಗಳಿಗೆ ನೇಮಕಾತಿ ನಡೆಸಲು ಕೆಪಿಎಸ್‌ಸಿಗೆ ಪಂಚಾಯತ್‌ ರಾಜ್ ಇಲಾಖೆ ಯಿಂದ ಕೆಲವು ದಿನಗಳ ಹಿಂದೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಪ್ರಸ್ತಾವನೆಯನ್ನು ಪರಿಶೀಲಿಸಿ ರುವ ಕೆಪಿಎಸ್‌ಸಿ, ಈ ಹುದ್ದೆಗಳಿಗೆ ಸಂಬಂಧಿಸಿ ದಂತವೃಂದಮತ್ತು ನೇಮಕಾತಿನಿಯಮಗಳಲ್ಲಿ ಕೆಲವು ಅಗತ್ಯ ಮಾರ್ಪಾಡುಗಳನ್ನು ಮಾಡಿ ಹೊಸದಾಗಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದೆ ಎಂದು ತಿಳಿದು ಬಂದಿದೆ.

ಅಧಿಸೂಚನೆ ಹೊರಡಿಸಿದ ನಂತರದ ಯಾವುದೇ ಹಂತದಲ್ಲೂ ಅಡೆತಡೆಗಳು ಎದುರಾಗದಂತೆ ಸುಸೂತ್ರವಾಗಿ ಕಾಲಮಿತಿಯಲ್ಲಿ ಪ್ರಕ್ರಿಯೆ ಪೂರ್ಣಗೊಳಿಸುವ ಉದ್ದೇಶವಿದೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಕೆ.ಎಸ್‌. ಲತಾಕುಮಾರಿ ತಿಳಿಸಿದ್ದಾರೆ.

ಇನ್ನು ಅಭ್ಯರ್ಥಿಗಳು ಅರ್ಜಿಸಲ್ಲಿಸುವಾಗಲೇ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನೇಮಕದ ಬಳಿಕ ಅದೇ ಜಿಲ್ಲೆಯಲ್ಲಿ ಕೆಲಸ ಮಾಡಬೇಕು. ಬದಲಾವಣೆಗೆ ಅವಕಾಶ ಇರುವುದಿಲ್ಲ ಎಂದು ಕೆಪಿಎಸ್‌ಸಿ ಮೂಲಗಳು ತಿಳಿಸಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು