News Karnataka Kannada
Monday, May 06 2024
ಮಂಗಳೂರು

ರಂಗಭೂಮಿ ಕಲಾವಿದೆ, ಹಿರಿಯ ನಟಿ ಮಮತಾ ಗೂಡೂರ ವಿಧಿವಶ

mamatha guduru
Photo Credit : News Kannada

ಬಾಗಲಕೋಟೆ: ರಂಗಭೂಮಿ ಕಲಾವಿದೆ ಹಾಗೂ ನಟಿ ಮಮತಾ ಗೂಡೂರ ಅವರು ಇಂದು (ಆ.3) ವಿಧಿವಶರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಮಮತಾ ಅವರ ಅದ್ಭುತ ನಟನೆಗೆ ರಾಜ್ಯೋತ್ಸವ ಪ್ರಶಸ್ತಿ ಕೂಡ ಒಲಿದಿತ್ತು. ಬಾಗಲಕೋಟೆಯ ಇಳಕಲ್ ತಾಲ್ಲೂಕಿನ ಗುಡೂರ ಗ್ರಾಮದಲ್ಲಿ ಅವರು ವಾಸವಿದ್ದರು.

ಮಮತಾ ಅವರಿಗೆ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿತ್ತು. ಇದಕ್ಕಾಗಿ ಅವರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಇಹಲೋಕ ತ್ಯಜಿಸಿದರು. ಅವರ ಸಾವಿಗೆ ಅನೇಕರು ಕಂಬನಿ ಮಿಡಿದಿದ್ದಾರೆ. ಇಂದು ಮದ್ಯಾಹ್ನ 3 ಗಂಟೆಗೆ ಗೂಡೂರು ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. ಮಮತಾ ಅವರು 5 ಸಾವಿರಕ್ಕೂ ಅಧಿಕ ನಾಟಕಗಳಲ್ಲಿ ನಟಿಸಿದ್ದರು. 25 ಸಿನಿಮಾಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದರು. ಕನ್ನಡ ಚಿತ್ರರಂಗದ ಮೇರು ನಟರುಗಳಾದ ಅಂಬರೀಷ್, ವಜ್ರಮುನಿ ಸೇರಿ ಅನೇಕರ ಜೊತೆ ಮಮತಾ ತೆರೆಹಂಚಿಕೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು