ಅಂಡಮಾನ್ ನಿಕೋಬಾರ್: ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ಎರಡು ದಿನಗಳಲ್ಲಿ ಎರಡನೇ ಬಾರಿಗೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲಾಗಿದೆ. ಇನ್ನೂ ಈ ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣ ಹಾನಿ, ಆಸ್ತಿ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಇನ್ನು ಬುಧವಾರ ಮುಂಜಾನೆ 5:40 ರ ಸುಮಾರಿಗೆ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳಲ್ಲಿ ಸಂಭವಿಸಿದ 5.0 ತೀವ್ರತೆಯ ಭೂಕಂಪವು ನಿಕೋಬಾರ್ ದ್ವೀಪಗಳನ್ನು ತಲ್ಲಣಗೊಳಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ವರದಿ ಮಾಡಿತ್ತು.
ಇದು 10. ಕಿ.ಮೀ ಆಳದಲ್ಲಿ ಸಂಭವಿಸಿದೆ.ಭೂಕಂಪದ ಕೇಂದ್ರಬಿಂದುವು ನಿಕೋಬಾರ್ ದ್ವೀಪಗಳಲ್ಲಿ ಅಕ್ಷಾಂಶ 9.32 ಮತ್ತು ರೇಖಾಂಶ 94.03 ರಲ್ಲಿದೆ. ಎನ್ಸಿಎಸ್ ಟ್ವೀಟ್ನಲ್ಲಿ ಉಲ್ಲೇಖಿಸಿದಂತೆ 10 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿತ್ತು.