News Karnataka Kannada
Tuesday, May 07 2024
ಮಂಗಳೂರು

ಪಜಿರಡ್ಕ ಸದಾಶಿವೇಶ್ವರ ದೇವಸ್ಥಾನದಲ್ಲಿ ವನಮಹೋತ್ಸವ ಕಾರ್ಯಕ್ರಮ

Vanamahotsava programme at Pajiradka Sadashivaswara Temple premises
Photo Credit : News Kannada

ಪಜಿರಡ್ಕ: ಮುಂಡಾಜೆ-ಕಲ್ಮಂಜದ ಹಸಿರು ತಪಸ್ಸು ಸಂಘಟನೆ ಆಶ್ರಯದಲ್ಲಿ, ಬೆಳ್ತಂಗಡಿ ಅರಣ್ಯ ಇಲಾಖೆ, ಗ್ರಾಮ ಪಂಚಾಯಿತಿ ಕಲ್ಮಂಜ ಹಾಗೂ ಇತರ ಸಂಘ ಸಂಸ್ಥೆಗಳ ಸಹಕಾರದಲ್ಲಿ ಕಲ್ಮಂಜ ಗ್ರಾಮದ ಸಂಗಮ ಕ್ಷೇತ್ರ ಶ್ರೀ ಸದಾಶಿವೇಶ್ವರ ದೇವಸ್ಥಾನದ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು.

ಬೆಳ್ತಂಗಡಿ ಅರಣ್ಯ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ “ಧಾರ್ಮಿಕ ಕೇಂದ್ರಗಳಲ್ಲಿ ಗಿಡಗಳನ್ನು ನೆಡುವುದರಿಂದ ದೈವಿಕ ಭಾವನೆಗಳು ಉಂಟಾಗುತ್ತವೆ. ಅರಣ್ಯ ಬೆಳೆಸಲು ಹಾಗೂ ರಕ್ಷಿಸಲು ಇದು ಪ್ರೇರಣೆ ನೀಡುತ್ತದೆ. ಮುಂಡಾಜೆ, ಕಲ್ಮಂಜ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ವಿಶಿಷ್ಟ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಅರಣ್ಯ ಹಾಗೂ ವನ್ಯಜೀವಿಗಳ ಬಗ್ಗೆ ಹೆಚ್ಚಿನ ಕಾಳಜಿ  ವಹಿಸುತ್ತಿರುವುದು ಶ್ಲಾಘನೀಯ”ಎಂದು ಹೇಳಿದರು.

ಹಸಿರು ತಪಸ್ಸು ಸಂಘಟನೆಯ ಸಂಚಾಲಕ ಸತೀಶ್ ತಂಟ್ಯ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ, ಉಜಿರೆ ಎಸ್ ಡಿಎಂ ಕಾಲೇಜಿನ ಎನ್ ಸಿಸಿ ಘಟಕದ ಸೃಜನ್, ಮುಂಡಾಜೆ ಪದವಿ ಪೂರ್ವ ಕಾಲೇಜಿನ ಎನ್ನೆಸ್ಸೆಸ್ ವಿಭಾಗದ ಯೋಜನಾಧಿಕಾರಿ ನಮಿತಾ ಕೆ.ಆರ್, ವಿವೇಕಾನಂದ ಗ್ರಾಮ ಸಮಿತಿಯ ಸುಭಾಶ್ಚಂದ್ರ ಜೈನ್ ಉಪಸ್ಥಿತರಿದ್ದರು.

ಡಿ ಆರ್ ಎಫ್ ಒಗಳಾದ ಹರಿಪ್ರಸಾದ್, ರವೀಂದ್ರ ಅಂಕಲಗಿ, ಶರತ್ ಶೆಟ್ಟಿ, ಸಿ ಎ ಬ್ಯಾಂಕ್ ನಿರ್ದೇಶಕ ರಾಘವ ಕಲ್ಮಂಜ, ವ್ಯವಸ್ಥಾಪಕ ಪ್ರಸನ್ನ ಪರಾಂಜಪೆ, ಕಾರ್ಗಿಲ್ ವನದ ರೂವಾರಿ ಸಚಿನ್ ಭಿಡೆ, ರೋಟರಿ ಸಮುದಾಯದಳದ ವೆಂಕಟೇಶ್ವರ ಭಟ್, ಕಲ್ಮಂಜ ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಮೂರ್ತಿ ಹೆಬ್ಬಾರ್, ಜಗದೀಶ್ ನಾಯ್ಕ್, ಉಪನ್ಯಾಸಕ ಗಣೇಶ ಶೆಂಡ್ಯೆ, ಪಾಂಡುರಂಗ ಕಾಕತ್ಕರ್, ಶ್ರೀನಿವಾಸರಾವ್, ಜಯಂತ ರಾವ್, ಗೋವಿಂದ ದಾಮಲೆ, ಪ್ರಕಾಶ್ ಭಟ್, ಶಶಿಧರ ಖಾಡಿಲ್ಕಾರ್,ಸುರೇಶ ಗೋಖಲೆ, ಅರ್ಚಕ ರಾಜೇಶ್ ಹೊಳ್ಳ ಮತ್ತಿತರರು ಉಪಸ್ಥಿತರಿದ್ದರು.

ಮುಂಡಾಜೆ ಕಾಲೇಜಿನ ಎನ್ನೆಸ್ಸೆಸ್ ಹಾಗೂ ಉಜಿರೆ ಕಾಲೇಜಿನ ಎನ್‌ ಸಿಸಿ ಘಟಕದ ವಿದ್ಯಾರ್ಥಿಗಳು ಸಹಕರಿಸಿದರು. ಪವನ್ ಕಾಕತ್ಕರ್ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಫಡಕೆ ಸ್ವಾಗತಿಸಿದರು. ಚಿತ್ರಾ ಭಿಡೆ ವಂದಿಸಿದರು.

ತೆಂಗು, ಬಿಲ್ವಪತ್ರೆ, ಸಂಪಿಗೆ ಸಂಹಿತೆಗಳ ಸಹಿತ ಒಟ್ಟು 150 ಗಿಡಗಳನ್ನು ನಾಟಿ ಮಾಡಲಾಯಿತು.ಕಳೆದ ವರ್ಷ ನೇತ್ರಾವತಿ ಮತ್ತು ಮೃತ್ಯುಂಜಯ ನದಿಗಳ ತಟದಲ್ಲಿ ಮಣ್ಣಿನ ಸವಕಳಿ ಉಂಟಾಗದಂತೆ ಬಿದಿರನ್ನು ನಾಟಿ ಮಾಡಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು