ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗದ ಸಹ ಪ್ರಾಧ್ಯಾಪಕ ಭರತ್ರಾಜ್ ಕುಮಾರ್ ಅವರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ.ಟಿ.ಯು.) ಬೆಳಗಾವಿ, ಪಿ.ಎಚ್.ಡಿ ಪದವಿ ನೀಡಿದೆ.
ಇವರು ದಾವಣಗೆರೆ ಜಿಎಂಐಟಿ ಕಾಲೇಜಿನ ಪ್ರಾದ್ಯಾಪಕರಾಗಿರುವ ಡಾ. ಪ್ರವೀಣ್ ಇವರ ಮಾರ್ಗದರ್ಶನದಲ್ಲಿ ‘ಸ್ಟಡಿ ಆಫ್ ಮೋನೋಪೋಲಿ ಫ್ರಾಕ್ಟಲ್ ಆಂಟೆನಾಸ್ ಫಾರ್ ವೈಡ್ ಬ್ಯಾಂಡ್ ಅಪ್ಲಿಕೇಶನ್ಸ್’ ಎಂಬ ವಿಷಯದ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿದ್ದರು. ಇವರಿಗೆ ಕಾಲೇಜಿನ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಶುಭಹಾರೈಸಿದ್ದಾರೆ.