News Karnataka Kannada
Saturday, April 27 2024
ಮಂಗಳೂರು

ಮಂಗಳೂರಿನಲ್ಲಿ ಮೂರು ದಿನಗಳ ಬೈಬಲ್ ಪ್ರದರ್ಶನ

Three-day Bible exhibition in Mangaluru
Photo Credit : News Kannada

ಮಂಗಳೂರು: ಮಂಗಳೂರು ಧರ್ಮಕ್ಷೇತ್ರದ ಬೈಬಲ್, ಸುವಾರ್ತ ಪ್ರಸಾರ, ಸಾಮಾಜಿಕ ಸಂಪರ್ಕ ಮತ್ತು ಕಿರು ಕ್ರೈಸ್ತ ಸಮುದಾಯದ ಆಯೋಗಗಳ ಸಹ-ಭಾಗಿತ್ವದಲ್ಲಿ ಸಂತ ಅಂತೋನಿ ಆಶ್ರಮ, ಸಂತ ಜೋಸೆಫ್ ಸೆಮಿನರಿ, ಕಾಸ್ಸಿಯಾ, ಜೆಪ್ಪು ಮತ್ತು ವೆಲೆನ್ಸಿಯಾ ಚರ್ಚ್ಗಗಳು ಜಂಟಿಯಾಗಿ ನಗರದ ಜೆಪ್ಪು, ಸಂತ ಅಂತೋನಿ ಆಶ್ರಮದಲ್ಲಿ ಗುರುವಾರ, ಜನವರಿ 26, 2023 ರಿಂದ ಮೂರು ದಿನಗಳ ಬೈಬಲ್ ಪ್ರದರ್ಶನವನ್ನು ಆಯೋಜಿಸಿವೆ.

ಕಥೊಲಿಕ ಕ್ರೈಸ್ತರ ಪೂಜಾವಿಧಿಯ ಕ್ಯಾಲೆಂಡರ್‌ನ ಮೂರನೇ ಭಾನುವಾರದಂದು ‘ಬೈಬಲ್ ಭಾನುವಾರ”ವನ್ನು ಸಾರ್ವತ್ರಿಕವಾಗಿ ಆಚರಿಸಲಾಗುತ್ತಿದೆ. ಈ ವರ್ಷ ಜನವರಿ 22, 2023 ರಂದು ಇದನ್ನು ಆಚರಿಸಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಬೈಬಲ್ ಪ್ರದರ್ಶನವನ್ನು ವಿಶೇಷವಾಗಿ ನಡೆಸಲಾಗುತ್ತದೆ.

ಸಂತ ಆಂತೋನಿ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ಮತ್ತು ಪ್ರದರ್ಶನದ ಸಂಚಾಲಕ ವಂದನೀಯ ಜೆ. ಬಿ. ಕ್ರಾಸ್ತಾ ಮಾತನಾಡಿ, “ಬೈಬಲ್ ಸಾರ್ವಕಾಲಿಕ ಹೆಚ್ಚು ಮಾರಾಟವಾದ ಪುಸ್ತಕವಾಗಿದೆ, ಇಲ್ಲಿಯವರೆಗೆ ಸುಮಾರು 5 ಬಿಲಿಯನ್ ಪ್ರತಿಗಳು ಮಾರಾಟವಾಗಿವೆ. ಇದು ಮಾನವ ಇತಿಹಾಸದಲ್ಲಿ ಅತಿ ಹೆಚ್ಚು ಅನುವಾದಿತ ಪುಸ್ತಕವಾಗಿದೆ,” ಎಂದು ಹೇಳಿದರು.

“ಈ ಪ್ರದರ್ಶದಲ್ಲಿ ಕ್ರೈಸ್ತ ಪವಿತ್ರ ಗ್ರಂಥ- ಬೈಬಲ್‌ನ್ನು ಸಾರ್ವಜನಿಕ ಓದುವಿಕೆಯ ಮೂಲಕ ಹಾಗೂ ಬೈಬಲ್‌ನ ಕಲೆ, ಚಿತ್ರಕಲೆ, ವೀಡಿಯೊ ಪ್ರಸ್ತುತಿ, ರಸಪ್ರಶ್ನೆ, ಹಾಡುಗಳು, ನಾಟಕಗಳು ಮತ್ತು ನೃತ್ಯಗಳ ಮೂಲಕ ಹೆಚ್ಚಿನ ಜನರನ್ನು ಆಕರ್ಷಿಸಿ ಜನರಿಗೆ ವಿಶೇಷ ಆನುಭವ ಹಾಗೂ ವಿಶ್ವಾಸದ ಪ್ರಯಾಣವನ್ನು ನೀಡಲು ಉದ್ದೇಶಿಸಿದೆ” ಎಂದು ವಂದನೀಯ ಕ್ರಾಸ್ತಾರವರು ನುಡಿದರು.

ಪಾದುವಾದ ಸಂತ ಅಂತೋನಿಯವರು ‘ದೇವರ ವಾಕ್ಯ’ದ ಉತ್ಕಟ ಬೋಧಕರಾಗಿದ್ದರು ಮತ್ತು ಅದನ್ನು ಎಲ್ಲರಿಗೂ ಘೋಷಿಸಲು ಹೆಚ್ಚಿನ ಉತ್ಸಾಹವನ್ನು ತೋರಿಸಿದವರು. ಆದ್ದರಿಂದ, ಈ ಪ್ರದರ್ಶನವನ್ನು ಜೆಪ್ಪುವಿನ ಸಂತ ಅಂತೋನಿ ಆಶ್ರಮದಲ್ಲಿ ನಡೆಸಲಾಗುತ್ತದೆ ಎಂದು ವಂದನೀಯ ಕ್ರಾಸ್ತಾರವರು ನುಡಿದರು.

ಧರ್ಮಕ್ಷೆತ್ರದ ಸುವಾರ್ತ ಪ್ರಸಾರ ಆಯೋಗದ ಕಾರ್ಯದರ್ಶಿ ಮತ್ತು ಕಾರ್ಯಕ್ರಮದ ಸಂಯೋಜಕ ವಂದನೀಯ ರೂಪೇಶ್ ತಾವ್ರೊರವರು ಮಾತಾನಾಡಿ, “ಈ ಪ್ರದರ್ಶನದಲ್ಲಿ ಬೈಬಲ್ ಪ್ರತಿಗಳ ವಿವಿಧ ಭಾಷಾಂತರಗಳು, ಬೈಬಲ್ ಕಲೆ, ಬೈಬಲ್ ಚಿತ್ರಗಳು, ಪ್ರತಿಮಾಶಾಸ್ತ್ರ, ಭಾರತೀಯ ಬೈಬಲ್ ಕಲೆ ಮತ್ತುಬೈಬಲ್ ಪ್ರದರ್ಶನ ಬೈಬಲ್ ಘಟನೆಗಳ ಕಾಲಘಟ್ಟಗಳನ್ನು ಪ್ರದರ್ಶಿಸಲಾಗುವುದು. ಜೊತೆಗೆ ಬೈಬಲ್ ಗೀತೆಗಳು, ನಾಟಕಗಳು, ಬೈಬಲ್ ವರ್ಣಚಿತ್ರಗಳು, ಬೈಬಲ್ ಕ್ವಿಜ್ ಮತ್ತು ಪ್ರಮುಖ ಬೈಬಲ್ ಘಟನೆಗಳ ಪ್ರದರ್ಶನ ಇರುವುದು” ಎಂದು ಹೇಳಿದರು.

ಪ್ರದರ್ಶನದ ಉದ್ಘಾಟನಾ ಸಮಾರಂಭವು ಗುರುವಾರ, ಜನವರಿ 26, 2023 ರಂದು ಬೆಳಿಗ್ಗೆ 10 ಗಂಟೆಗೆ ಆಶ್ರಮದ ಆವರಣದಲ್ಲಿ ನಡೆಯಲಿದೆ. ಇಂಗ್ಲಿಷ್‌ನಿಂದ ಕೊಂಕಣಿಗೆ ಬೈಬಲ್ (ಹೊಸ ಓಡಂಬಡಿಕೆ) ಅನುವಾದಕ ವಂದನೀಯ ಡಾ. ವಿಲಿಯಮ್ ಬರ್ಬೋಜಾ ಅವರು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.

ಪ್ರದರ್ಶನವು ಜ. 26 ರಿಂದ ಜ. 28 ರವರೆಗೆ ಬೆಳಿಗ್ಗೆ 9 ರಿಂದ ಸಂಜೆ 7 ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ. ಪ್ರತಿದಿನ ಸಂಜೆ 4.30ರಿಂದ 7ರವರೆಗೆ ಬೈಬಲ್ ಆಧಾರಿತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಪ್ರದರ್ಶನದ ಸಮಾರೋಪ ಸಮಾರಂಭವನ್ನು ಜನವರಿ 28ರ ಶನಿವಾರ ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು