News Karnataka Kannada
Sunday, May 12 2024
ಮಂಗಳೂರು

ಶಾಲೆಗೆ ರಜೆ ಸಿಕ್ಕ ಬೆನ್ನಲ್ಲೇ ಟೂರ್ ಬಂದಿದ್ದ ಕುಟುಂಬ, ದಂಪತಿ ಮಕ್ಕಳಿಗಾಯ್ತು ಅದೇ ಕೊನೆ ಯಾತ್ರೆ

The family, couple and children, who had come on a tour to Mangalore after the school holidays, made the last trip.
Photo Credit : News Kannada

ಮಂಗಳೂರು: ಶಾಲೆಗೆ ರಜೆ ಸಿಗುತ್ತಲೇ ತಮ್ಮ ಪ್ರೀತಿಯ ಮಕ್ಕಳೊಂದಿಗೆ ಆ ದಂಪತಿ ಮಂಗಳೂರಿಗೆ ಪ್ರವಾಸ ಬಂದಿದ್ದರು. ಮುಗ್ಧ ಮಕ್ಕಳು ಮತ್ತು ಆ ಮಕ್ಕಳ ತಾಯಿ ಇದೇ ತಮ್ಮ ಕೊನೆಯ ಯಾತ್ರೆ ಅಂತ ಕನಸಿನಲ್ಲೂ ಅಂಡ್ಕೊಂಡಿರಲಿಕ್ಕಿಲ್ಲ. ಆದರೆ ಟೂರ್ ಮೂಡಿನಲ್ಲಿದ್ದಾಗಲೇ ಆ ಮಕ್ಕಳು ಮತ್ತು ಹೆತ್ತವರು ಇಹಲೋಕ ಯಾತ್ರೆ ಮುಗಿಸಿದ್ದಾರೆ.

ಶಾಲೆಗೆ ರಜೆ ಸಿಗುತ್ತಲೇ ತಮ್ಮ ಪ್ರೀತಿಯ ಮಕ್ಕಳೊಂದಿಗೆ ಆ ದಂಪತಿ ಮಂಗಳೂರಿಗೆ ಪ್ರವಾಸ ಬಂದಿದ್ದರು. ಮುಗ್ಧ ಅವಳಿ ಮಕ್ಕಳು ಮತ್ತು ಆ ಮಕ್ಕಳ ತಾಯಿ ಇದೇ ತಮ್ಮ ಕೊನೆಯ ಯಾತ್ರೆ ಅಂತ ಕನಸಿನಲ್ಲೂ ಅಂಡ್ಕೊಂಡಿರಲಿಕ್ಕಿಲ್ಲ. ಆದರೆ ಟೂರ್ ಮೂಡಿನಲ್ಲಿದ್ದಾಗಲೇ ಆ ಮಕ್ಕಳು ಮತ್ತು ಹೆತ್ತವರು ಇಹಲೋಕ ಯಾತ್ರೆ ಮುಗಿಸಿದ್ದಾರೆ.

ಮೈಸೂರಿನಿಂದ ಮಂಗಳೂರಿಗೆ ಬಂದು ಸಾವಿಗೆ ಶರಣಾಗಿರುವ ಒಂದೇ ಕುಟುಂಬದ ನಾಲ್ವರ ಸಾವು ಒಂದೆಡೆ ಸುದ್ದಿ ಕೇಳಿದವರ ಮನಸ್ಸು ಕದಡಿದ್ದರೆ, ಮತ್ತೊಂದೆಡೆ ಹಲವಾರು ಅನುಮಾನ, ಶಂಕೆಗಳಿಗೆ ಎಡೆಮಾಡಿಕೊಟ್ಟಿದೆ. ದೇವೇಂದ್ರ(47), ಅವರ ಪತ್ನಿ ನಿರ್ಮಲಾ(45) ಮತ್ತವರ ಅವಳಿ ಮಕ್ಕಳಾದ ಚೈತ್ರಾ ಮತ್ತು ಚೈತನ್ಯ(9) ಸಾವು ಪೊಲೀಸರನ್ನೂ ಎದೆ ನಡುಗುವಂತೆ ಮಾಡಿದೆ. ಹಾಲುಗಲ್ಲದ ಕಂದಮ್ಮಗಳ ಮುಖವನ್ನು ನೋಡಿ ಪೊಲೀಸರೂ ಮರುಗುತ್ತಿದ್ದರು. ಎರಡು ದಿನಗಳ ಹಿಂದೆ ಅಂದರೆ, ಮಾರ್ಚ್ 27ಕ್ಕೆ ಈ ಕುಟುಂಬ ನಗರದ ಕೆಎಸ್ ರಾವ್ ರಸ್ತೆಯ ಲಾಡ್ಜ್ ನಲ್ಲಿ ಕೊಠಡಿ ಪಡೆದಿತ್ತು. ನಡುವೆ ಒಂದು ದಿನ ಹೆಚ್ಚುವರಿಯಾಗಿ ಉಳಿದುಕೊಂಡು ಹೋಗುತ್ತೇವೆ ಎಂದು ದೇವೇಂದ್ರ ಹೇಳಿದ್ದ ಪ್ರಕಾರ ನಿನ್ನೆ ಸಂಜೆ ಅವರು ಹೊಟೇಲ್ ಬಿಟ್ಟು ಹೋಗಬೇಕಿತ್ತು.

ಸಂಜೆ ಹೊಟೇಲ್‌ ಬಿಟ್ಟಿರದ ಕಾರಣ ಇಂದು ಬೆಳಗ್ಗೆ ಸಿಬಂದಿ ಬಾಗಿಲು ಬಡಿದಿದ್ದರು. ಓಪನ್ ಆಗದ ಕಾರಣ ಶಂಕೆಯಿಂದ ಬಾಗಿಲು ತೆಗೆದು ನೋಡಿದಾಗ, ನಾಲ್ವರು ಕೂಡ ಸಾವನ್ನಪ್ಪಿದ್ದು ಕಂಡುಬಂದಿದೆ. ಪೊಲೀಸರು ಪರಿಶೀಲನೆ ನಡೆಸಿದಾಗ, ತಾಯಿ ಮತ್ತು ಮಕ್ಕಳು ಬೆಡ್ ನಲ್ಲಿ ಮಲಗಿದಲ್ಲೇ ಸಾವು ಕಂಡಿದ್ದರೆ, ದೇವೇಂದ್ರ ನೇಣಿಗೆ ಶರಣಾಗಿದ್ದ ತಾಯಿ ಮಕ್ಕಳ ಶವ ಕೊಳೆತು ವಾಸನೆ ಬರುತ್ತಿದ್ದರಿಂದ ಮೊನ್ನೆ ರಾತ್ರಿಯೇ ಸಾವನ್ನಪ್ಪಿದ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ನಡುವೆ, ಫಾರೆನ್ಸಿಕ್ ತಜ್ಞರು ಬಂದು ಪರಿಶೀಲನೆ ನಡೆಸಿದ್ದು ವಿಷ ತೆಗೆದುಕೊಂಡಿರುವ ಅಂಶವನ್ನು ದೃಢಪಡಿಸಿಲ್ಲ. ಹೀಗಾಗಿ ತಾಯಿ, ಮಕ್ಕಳಿಗೆ ನಿದ್ದೆ ಮಾತ್ರೆ ಕೊಟ್ಟು ದೇವೇಂದ್ರನೇ ತಲೆದಿಂಬು ಮುಖಕ್ಕೆ ಇಟ್ಟು ಉಸಿರುಕಟ್ಟಿಸಿ ಸಾಯಿಸಿದ್ದಾನೆಯೇ ಎಂಬ ಶಂಕೆಯಿದೆ. ದೇವೇಂದ್ರ ಒಂದು ದಿನದ ನಂತರ ಸಾವಿಗೆ ಶರಣಾಗಿದ್ದಾನೆ ಎನ್ನುವ ಶಂಕೆ ಪೊಲೀಸರದ್ದು.

ದೇವೇಂದ್ರ ದಾವಣಗೆರೆಯ ಮೂಲದವರಾಗಿದ್ದು ಇನ್ನಿಬ್ಬರು ಸೋದರರ ಜೊತೆ ಸೇರಿ ಮೈಸೂರಿನಲ್ಲಿ ಲೇತ್ ಫ್ಯಾಕ್ಟರಿ ಮಾಡಿಕೊಂಡಿದ್ದರು. ಸೋದರರು ಸೇರಿ ಆರು ಮಂದಿ ಅಲ್ಲಿ ಕೆಲಸ ಮಾಡುತ್ತಿದ್ದರು. ಒಟ್ಟು ವಹಿವಾಟನ್ನು ದೇವೇಂದ್ರ ಅವರೇ ನೋಡಿಕೊಂಡಿದ್ದರು. ಸುಸೈಡ್ ಮಾಹಿತಿ ತಿಳಿದು ತಮ್ಮ ಸೋದರ ರವಿಕುಮಾರ್‌ ಮಂಗಳೂರಿಗೆ ಆಗಮಿಸಿದ್ದು, ಉದ್ಯಮದ ಬಗ್ಗೆ ಹೇಳಿಕೊಂಡಿದ್ದಾರೆ. ಸಾಲದ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಆದರೆ ಇತ್ತೀಚಿನ ಆರು ತಿಂಗಳಲ್ಲಿ ಒಂದಷ್ಟು ಸಾಲ ಮಾಡಿಕೊಂಡಿದ್ದ. ಆದರೆ ಸಾಲದ ಮಾತ್ರಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯಿರಲಿಲ್ಲ. ಪತ್ನಿಯ ಕುಟುಂಬಸ್ಥರು ಸ್ಥಿತಿವಂತರಾಗಿದ್ದರು. ಏನೇ ತೊಂದರೆ ಆದರೂ ಕೈಹಿಡಿಯುತ್ತಿದ್ದರು. ಯಾಕಾಗಿ ಈ ರೀತಿ ಮಾಡಿಕೊಂಡನೋ ಅಂತ ತಿಳಿಯುತ್ತಿಲ್ಲ ಎಂದಿದ್ದಾರೆ.

ನಾವು ಇಪ್ಪತ್ತು ವರ್ಷಗಳಿಂದ ಮೈಸೂರಿನಲ್ಲಿ ಉದ್ಯಮ ಮಾಡುತ್ತಿದ್ದೇವೆ. ಯಾವುದೇ ತೊಂದರೆ ಇರಲಿಲ್ಲ. ಲೇತ್, ಟರ್ನಿಂಗ್ ಎಲ್ಲ ಮಾಡಿಕೊಂಡಿದ್ದೆವು ಎಂದು ರವಿಕುಮಾರ್ ಹೇಳಿದರು. ಇನ್ನೊಬ್ಬ ಸಂಬಂಧಿಕರ ಪ್ರಕಾರ, ದೇವೇಂದ್ರ ಅವರಿಗೆ ಮದುವೆಯಾಗಿ ಹತ್ತು ವರ್ಷವಾದರೂ ಮಕ್ಕಳಾಗಿರಲಿಲ್ಲ. ಹಾಗಾಗಿ ಬಹಳಷ್ಟು ಖರ್ಚು ಮಾಡಿ, ವೈದ್ಯರ ಪ್ರಯತ್ನದಿಂದ ಒಂಬತ್ತು ವರ್ಷಗಳ ಹಿಂದೆ ಅವಳಿ ಮಕ್ಕಳಾಗಿದ್ದರು. ಮಕ್ಕಳ ಬಗ್ಗೆ ತುಂಬ ಪ್ರೀತಿ ಇಟ್ಟುಕೊಂಡಿದ್ದು ತಿಂಗಳ ಹಿಂದಷ್ಟೇ ಅದ್ದೂರಿಯಾಗಿ ಬರ್ತ್ ಡೇಯನ್ನೂ ಆಚರಿಸಿಕೊಂಡಿದ್ದರು. ಆರು ತಿಂಗಳ ಹಿಂದಷ್ಟೇ ದೇವೇಂದ್ರ ಹೊಸ ಕಾರನ್ನೂ ಖರೀದಿಸಿದ್ದರಂತೆ. ಮಂಗಳೂರಿನ ಬಂದರು ಪೊಲೀಸರು ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಬೆಳಗ್ಗೆ ವಿಷಯ ತಿಳಿಯುತ್ತಲೇ ಪೊಲೀಸರು ಕೊಠಡಿಗೆ ಬಂದಿದ್ದರು. ಆ ವೇಳೆಗೆ, ದೇವೇಂದ್ರ ಅವರ ಮೊಬೈಲ್ ರಿಂಗಣಿಸುತ್ತಿತ್ತು. ಪೊಲೀಸರು ರಿಸೀವ್ ಮಾಡುತ್ತಲೇ ಆ ಕಡೆಯಿಂದ ಸಾಲಗಾರರ ಬೈಗುಳ ಕೇಳಿಸಿತ್ತು. ಕೈಸಾಲ ಕೊಟ್ಟವರು ಫೋನ್ ಮಾಡಿದ್ದರು. ಹಣಕ್ಕಾಗಿ ಪೀಡಿಸುತ್ತಿದ್ದರು ಅನ್ನೋದು ಅಲ್ಲಿಯೇ ದೃಢಪಟ್ಟಿತ್ತು. ಏನೇ ಆಗಲೀ, ಕೈಸಾಲವೋ, ಫೈನಾನ್ಸ್ ಸಾಲವೋ ಕಿರುಕುಳದ ಕಾರಣಕ್ಕೆ ದೇವೇಂದ್ರ ಅತಿರೇಕದ ನಿರ್ಧಾರಕ್ಕೆ ಬಂದಿದ್ದು ಖಾತ್ರಿಯಾಗುತ್ತಿದೆ. ಆದರೆ ತನ್ನ ಪ್ರೀತಿಯ ಹೆಂಡ್ತಿ ಮಕ್ಕಳನ್ನು ಸಾಲಗಾರರಿಂದ ಕೇಡಾಗದಿರಲಿ ಎಂದು ತನ್ನೊಂದಿಗೇ ಮುಗಿಸಿಬಿಟ್ಟಿದ್ದು ಮಾತ್ರ ಕರುಳು ಹಿಂಡುವಂತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು