News Karnataka Kannada
Saturday, May 11 2024
ಮಂಗಳೂರು

60 ರ ಮೇಲೆ ಅರುಳು ಮರುಳು ಅಲ್ಲ, ಅದು ಸಂಘಟನೆಯ ಪಾಲಿಗೆ ಮರಳಿ ಅರಳುವುದು

The 60's is not a fool, it's about blossoming back for the organization
Photo Credit : News Kannada

ಪುತ್ತೂರು: 60 ರ ಮೇಲೆ ಅರುಳು ಮರುಳು ಅಲ್ಲ. ಅದು ಸಂಘಟನೆಯ ಪಾಲಿಗೆ ಮರಳಿ ಅರಳುವುದು ಎಂದಗುತ್ತದೆ. ಅರೆಸ್ಸೆಸ್, ವಿಹಿಂಪ ಅರಳುತ್ತಲೇ ಇದೆ. ವಿಶ್ವಾಸ, ನಂಬಿಕೆಗೆ ಮುಪ್ಪು ಬರುವುದಿಲ್ಲ. ರಾಷ್ಟೀಯತೆಯ ಧ್ಯೇಯವೇ ಇದಕ್ಕೆ ಕಾರಣ ಎಂದು ರಾಷ್ಟೀಯ ಸ್ವಯಂ ಸೇವಕ ಸಂಘದ ಜೇಷ್ಠ ಪ್ರಚಾರಕ ಸು. ರಾಮಣ್ಣ ಹೇಳಿದರು.

ವಿಶ್ವ ಹಿಂದೂ ಪರಿಷದ್ ಸ್ಥಾಪನೆಯಾಗಿ ೬೦ನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ದೇಶದಾದ್ಯಂತ ನಡೆಯುತ್ತಿರುವ ಶೌರ್ಯ ಜಾಗರಣಾ ರಥಯಾತ್ರೆಯು ಪುತ್ತೂರಿಗೆ ಆಗಮಿಸಿ ಕಿಲ್ಲೆ ಮೈದಾನದಲ್ಲಿ ನಡೆದ ಬೃಹತ್ ಹಿಂದೂ ಶೌರ್ಯ ಸಂಗಮ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಬಜರಂಗದಳ ಯಾಕಾಗಿ: ಎದ್ದರೆ ಹನುಮಂತ, ಬಿದ್ದರೆ ಕುಂಭಕರ್ಣ. ನಮ್ಮ ವ್ಯಕ್ತಿತ್ವದಲ್ಲಿ ಆಂಜನೇಯನ ಶೌರ್ಯ, ಶೀಲ ಇರಬೇಕು. ಶೀಲವಿಲ್ಲದ ಕಾರ್ಯ ವಿನಾಶಕಾರಿ. ಶೀಲ ಇರುವ ಕಾರ್ಯ ಕಲ್ಯಾಣಕಾರಿ. ಇದಕ್ಕೆ ಉದಾಹರಣೆ ಹನುಮಂತ. ದೇಶದ ತರುಣರು ಶೀಲರು, ಶೌರ್ಯರು ಆಗಬೇಕು. ಅದಕ್ಕಾಗಿ ಭಜರಂಗದ ಆರಂಭಗೊಂಡಿದೆ ಎಂದರು.

ಹನುಮಂತ ಅಧಿಕಾರಕ್ಕಾಗಿ ಹಪಹಪಿಸಿಲ್ಲ. ಹನುಮಂತ ಪವರ್ ಪಾಲಿಟಿಕ್ಸ್ ಗೆ ಬಲಿಯಾಗಿಲ್ಲ. ಶ್ರೀರಾಮ ಕಾರ್ಯ ಎಂದರೆ ರಾಷ್ಟ್ರದ ಕಾರ್ಯ. ಅದು ವ್ಯಕ್ತಿ ಪೂಜೆ ಆಗಿರಲಿಲ್ಲ, ತತ್ವ ಪೂಜೆ ಆಗಿತ್ತು. ಶ್ರೀರಾಮ ರಾಷ್ಟೀಯ ರಾಜಕಾರಣದ ಮೂರ್ತ ರೂಪ. ಶ್ರೀ ರಾಮ ರಾಷ್ಟ್ರ ಪುರುಷ. ಅಯೋದ್ಯೆ ರಾಮ ಮಂದಿರ ರಾಷ್ಟ್ರ ಮಂದಿರ ಎಂದರು.

ದೇಶದ ಅರ್ಥ ಶಾಸ್ತ್ರಜ್ಞ ವೇನಿಸಿದ ಮನಮೋಹನ್ ಸಿಂಗ್ ರಾಷ್ಟ್ರದ ಮೊದಲ ಪ್ರಶಸ್ತ್ಯ ಮುಸಲ್ಮಾನರಿಗೆ ಎನ್ನುತ್ತಾರೆ. ಸಿಕ್ಕರನ್ನು ನಾಶ ಮಾಡಿದವರು ಮುಸಲ್ಮಾನರು. ಬಹು ಸಂಖ್ಯಾತ, ಅಲ್ಪಸಂಖ್ಯಾತ ಎಂದು ದೇಶವನ್ನು ಹಾಳು ಮಾಡಿದವರು ಕಾಂಗ್ರೆಸ್ ನವರು. ರಾಷ್ಟೀಯತೆಗಾಗಿ ಅಧಿಕಾರ ನಡೆಸಿದವರು ವಲ್ಲಭಾಯ್ ಪಟೇಲ್, ಭಾರತ ಒಕ್ಕೂಟ ಅಲ್ಲ. ಅಖಂಡ ಭಾರತ ಎಂದು ಪ್ರತಿಫದಿಸಿದವರು ಎಂದರು.

ರಾಷ್ಟೀಯತೆಯ ಆರಾಧನೆ ರಾಷ್ಟ್ರ ರಾಜಕಾರಣದ ಮೂಲ ರೂಪ ರಾಷ್ಟೀಯತೆಯೇ ಆಗಬೇಕು ಎಂದು ಅಭಿಪ್ರಾಯಿಸಿದ ಸು. ರಾಮಣ್ಣ, ರಾಷ್ಟೀಯತೆಯ ರಾಜಕಾರಣದ ಪೂಜೆ ಆಗಬೇಕು. ರಾಮ, ಕೃಷ್ಣರು ಅದನ್ನೇ ಕಲಿ ಸಿಕೊಟ್ಟಿದ್ದಾರೆ. ಕಲಿಯುಗದಲ್ಲಿ ಅದು ನಮ್ಮ ಸಂಕಲ್ಪ. ಅರೆಸ್ಸೆಸ್ ಆರಂಭವಾಗಿರುವುದು ರಾಷ್ಟೀಯತೆಯ ಆರಾಧನೆಗಾಗಿಯೇ ಎಂದರು.

ನಮ್ಮ ರಾಷ್ಟೀಯತೆಯ ಕಲ್ಪನೆಯಿಂದ ಜಗತ್ತಿಗೆ ಕಲ್ಯಾಣವಾಗುತ್ತಿದೆ. ವಸೂದೈವ ಕುಟುಂಬಕಂ ಎನ್ನುವ ನಮ್ಮ ದೇಶ ಅರಿವಿನ ಗಂಗೋತ್ರಿ. ಬೆಂಕಿ ಆರಿಸಿ, ದೀಪ ಉರಿಸುವುದೇ ಭಾರತ. ಅಮೃತ ಕಾಲವನ್ನು ನಾವು ನಿರ್ಮಾಣ ಮಾಡುತ್ತಿದ್ದೇವೆ ಎಂದ ಅವರು, ಇಂಡಿಯಾ ಮಲಗುತ್ತಿದೆ, ಭಾರತ ಏಳುತ್ತಿದೆ ಎಂದು ಅಭಿಪ್ರಾಯಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿಹಿಂಪ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಯು. ಪೂವಪ್ಪ,ಶೌರ್ಯ ಜಾಗರಣ ರಥಯಾತ್ರೆಯ ಸ್ವಾಗತ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಬೊಟ್ಯಾಡಿ, ಬಜರಂಗದಳ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತಡ್ಕ, ಶೌರ್ಯ ಜಾಗರಣ ರಥಯಾತ್ರೆ ಕಾರ್ಯದರ್ಶಿ ವಿರೂಪಾಕ್ಷ ಭಟ್ ಮಚ್ಚಿಮಲೆ, ಹಸಂತ್ತಡ್ಕ,ಗ್ರಾಮಾಂತರ ಪ್ರಖಂಡ ಸಂಯೋಜಕ ವಿಶಾಖ್ ಸಸಿಹಿತ್ಲು,ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲೆಯ ಅಧ್ಯಕ್ಷ ಕೃಷ್ಣಪ್ರಸನ್ನ, ಕಾರ್ಯದರ್ಶಿ ನವೀನ್ ನೆರಿಯ,ಜಿಲ್ಲಾ ಸಹ ಸಂಯೋಜಕ ಲತೇಶ್ ಗುಂಡ್ಯ, ಪುತ್ತೂರು ನಗರ ಪ್ರಖಂಡ ಸಂಯೋಜಕ ಜಯಂತ್ ಕುಂಜೂರುಪಂಜ, ಉಪ್ಪಿನಂಗಡಿ ಪ್ರಖಂಡ ಸಂಯೋಜಕ ಸಂತೋಷ್, ಬೆಳ್ತಂಗಡಿ ಪ್ರಖಂಡ ಸಂಯೋಜಕ ಸಂತೋಷ್ ಅತ್ತಾಜೆ, ಸಂಚಾಲಕ ಕೃಷ್ಣ ಪ್ರಸಾದ್ ಬೆಟ್ಟ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 3 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು