ಮಂಗಳೂರು: ಪಾರ್ಟ್ ಟೈಂ ಉದ್ಯೋಗದ ಆಮಿಷವೊಡ್ಡಿ ಒಟ್ಟು 10.88 ಲಕ್ಷ ರೂ. ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ಯುಯೇಟ್ ಮೀಡಿಯಾ ಕಂಪನಿಯ ಪ್ರತಿನಿಧಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ದೂರುದಾರರಿಗೆ ಆ.26ರಂದು ವಾಟ್ಸಪ್ ಸಂದೇಶ ಕಳುಹಿಸಿದ್ದ. ಆನ್ ಲೈನ್ ಟಾಸ್ಕ್ ಮೂಲಕ ಪ್ರತಿದಿನ 2ರಿಂದ ಮೂರು ಸಾವಿರ ರೂ. ಸಂಪಾದನೆ ಮಾಡಬಹುದು ಎಂದು ಮೆಸೇಜ್ ಮಾಡಿದ್ದಾನೆ. ಇದನ್ನು ನಂಬಿದ ದೂರುದಾರ ಹಂತ ಹಂತವಾಗಿ ಹಣ ಹೂಡಿಕೆ ಮಾಡಿದ್ದರು.
ಆರಂಭದಲ್ಲಿ 1000 ರೂ. ತೊಡಗಿಸಿದಾಗ ಅವರ ಖಾತೆಗೆ ಅಷ್ಟೇ ಹಣ ಜಮೆಯಾಗಿತ್ತು. ಆನಂತರವೂ ಹಣ ಹೂಡಿಕೆಗೆ ವಂಚಕ ಒತ್ತಾಯ ಮಾಡಿದ್ದ. ಅದರಂತೆ ದೂರುದಾರರಿಂದ ಹಂತ ಹಂತವಾಗಿ ಆ.28ರವರೆಗೆ ಒಟ್ಟು 10.88 ಲಕ್ಷ ರೂ. ವರ್ಗಾಯಿಸಿಕೊಂಡು ಯಾವುದೇ ಮೊತ್ತ ಪಾವತಿಸದೇ ವಂಚಿಸಲಾಗಿದೆ ಎಂದು ಸೆನ್ ಅಪರಾಧ ಠಾಣೆಗೆ ದೂರು ನೀಡಲಾಗಿದೆ.