News Karnataka Kannada
Friday, May 10 2024
ಮಂಗಳೂರು

ಮಂಗಳೂರು: ಖ್ಯಾತ ಕೊಂಕಣಿ ಗಾಯಕ ಕ್ಲೌಡ್ ಡಿ’ ಸೋಜಾ ವಿಧಿವಶ

Claud D'Souza
Photo Credit : News Kannada

ಮಂಗಳೂರು: ಕೊಂಕಣಿ ಸಂಗೀತ ಲೋಕದ ಪ್ರಸಿದ್ಧ ಗಾಯಕ, ಗೀತರಚನೆಕಾರ ಮತ್ತು ಸಂಯೋಜಕ ಕ್ಲೌಡ್ ಡಿ’ಸೋಜಾ(67) ಅವರು ಜುಲೈ 24ರ ಇಂದು   ಅಲ್ಪಕಾಲದ ಅನಾರೋಗ್ಯದಿಂದಾಗಿ ಮಂಗಳೂರಿನಲ್ಲಿ ವಿಧಿವಶರಾಗಿದ್ದಾರೆ.

ಸುಮಾರು 61 ಸಂಗೀತ ‘ನೈಟ್ಸ್’ ಗಳನ್ನು ಪ್ರಸ್ತುತ ಪಡಿಸಿರುವ ಕ್ಲೌಡ್ ಡಿಸೋಜಾ ಅವರು ಗಾಯಕ ಮಾತ್ರವಲ್ಲದೆ ಡ್ರಮ್ಸ್ ಮತ್ತು ಗಿಟಾರ್‌‌ನಂತಹ ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದರು.

ಅಲ್ಲದೆ ಕ್ಲೌಡ್ ಅವರು ಬರಹಗಾರ, ನಿರ್ದೇಶಕ ಮತ್ತು ನಟರಾಗಿ ಸಾಧನೆ ಮಾಡಿದ್ದು, ಸಾಮಾಜಿಕ, ಐತಿಹಾಸಿಕ ಮತ್ತು ಧಾರ್ಮಿಕ ವಿಷಯಗಳ ಮೇಲೆ 40 ಕ್ಕೂ ಹೆಚ್ಚು ಕೊಂಕಣಿ ನಾಟಕಗಳನ್ನು ಪ್ರದರ್ಶಿಸಿದ್ದಾರೆ. ಕ್ಲೌಡ್ ಅವರು 15 ಸಂಗೀತ ಸಿಡಿಗಳನ್ನು ಬಿಡುಗಡೆಗೊಳಿಸಿದ್ದು, ಇತರ ಕಲಾವಿದರ ಆಲ್ಬಮ್‌ಗಳಿಗೆ ರಿದಮ್ ಸಂಯೋಜಕರಾಗಿ ಸೇವೆ ಸಲ್ಲಿಸಿದ್ದಾರೆ.

ಇನ್ನು ಕ್ಲೌಡ್ ಅವರ ಧ್ವನಿ ಮತ್ತು ಧಾರ್ಮಿಕ ನಾಟಕಗಳಿಗೆ ‘ಸಂದೇಶ ಪ್ರಶಸ್ತಿ’ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳು ಮತ್ತು ಪ್ರಶಸ್ತಿಗಳು ಲಭಿಸಿದೆ. ಇವರ ನಿಧನಕ್ಕೆ ಕೊಂಕಣಿ ಸಂಗೀತ ಲೋಕ ಸಂತಾಪ ವ್ಯಕ್ತಪಡಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು