Categories: ಮಂಗಳೂರು

ಪುತ್ತೂರು: ಬಿಜೆಪಿ ನಾಯಕರಿಂದ ಕಾರ್ಯಕರ್ತರನ್ನು ದಮನ ಸಹಿಸಲ್ಲ- ಶ್ರೀಕಾಂತ ಶೆಟ್ಟಿ

ಪುತ್ತೂರು: ಪುತ್ತೂರು ಅನೇಕ ಕಾರ್ಯಕರ್ತರಿಗೆ ಪ್ರೇರಣೆ ನೀಡುವ ಸ್ಥಳ. ಅದರೆ ಅದೇ ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರ ದೌರ್ಜನ್ಯ ಆರಂಭವಾಗಿದೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದದ್ದೆ ತಡ ಪೊಲೀಸರ ಕಾರ್ಯ ವೈಖರಿ ಕೂಡ ಕಾಂಗ್ರೆಸ್‌ ರೀತಿಯಲ್ಲೇ ಇದೆ ಎನ್ನುವುದಕ್ಕೆ ಪುತ್ತೂರಿನ ಘಟನೆ ಸಾಕ್ಷಿ ಎಂದು ಹಿಂದು ಕಾರ್ಯಕರ್ತ ಶ್ರೀಕಾಂತ ಶೆಟ್ಟಿ ಆರೋಪಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ತನ್ನ ಆಕ್ರೋಶ ಹೊರಹಾಕಿದ್ದಾರೆ. ಕರಾವಳಿ ಮುಂದಿನ ದಿನಗಳಲ್ಲಿ ಏನಾಗಬಹುದು ಎಂಬ ಆತಂಕ ಎದುರಾಗಿದೆ. ಈಗಾಗಲೇ ಸರ್ಕಾರ ಬದಲಾದ ಹಾಗೆಯೇ ಪೊಲಿಸರ ವರ್ತನೆ ಕೂಡ ಬದಲಾಗಿದೆ. ಮಾಜಿ ಮುಖ್ಯಮಂತ್ರಿಯಾಗಿದ್ದ ಡಿ.ವಿ. ಸದಾನಂದ ಗೌಡರ ಊರಲ್ಲೇ ಬ್ಯಾನರ್‌ ಕಟ್ಟಿದ ವಿಚಾರಕ್ಕೆ ಹಿಂದು ಯುವಕರ ಮೇಲೆ ಹಲ್ಲೆ ನಡೆದಿರುವುದು ನಾಚಿಕೆಗೇಡಿನ ಸಂಗತಿ. ದೌರ್ಜನ್ಯ ವೆಸಗಿದ ಅಧಿಕಾರಿಗಳನ್ನು ಕೇವಲ ಅಮಾನತು ಮಾಡಿದರೆ ಸಾಲದು, ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಿ ಕಠಿಣ ಶಿಕ್ಷೆಯಾಗಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಹೋರಾಟ ನಡೆಸಲಾಗುವುದು ಎಂದಿದ್ದಾರೆ.

ಇಲ್ಲಿ ಇರುವಂಥ ಅನೇಕ ಬಿಜೆಪಿ ನಾಯಕರು ಹಿಂದುತ್ವ, ಸಂಘ ಪರಿವಾರದ ಹೆಸರಿನಲ್ಲಿ ಬಿಜೆಪಿಯಲ್ಲಿ ಬೇರೆ ಬೇರೆ ಸ್ಥಾನಮಾನ ಪಡೆದಿದ್ದಾರೆ. ಆದರೆ ಈಗ ನಾವು ನಡೆದುಕೊಂಡು ಬಂದ ದಾರಿಯಲ್ಲಿ ಬೇರೆಯವರು ಅವಕಾಶ ಪಡೆಯುವ ಸಾಧ್ಯತೆಯಿದೆ ಎಂದು ಅಂಥ ಕಾರ್ಯಕರ್ತರನ್ನು ತುಳಿಯುವ, ಧಮನ ಮಾಡುವ ಕಾರ್ಯವನ್ನು ಬಿಜೆಪಿಯ ಕೆಲವು ನಾಯಕರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Gayathri SG

Recent Posts

ಮದುವೆ ಮನೆಯಲ್ಲಿ ಪತ್ನಿ ಡಾನ್ಸ್‌ ಮಾಡಿದಳೆಂದು ಪತಿ ಆತ್ಮಹತ್ಯೆ

ಬಾವನ ಮದುವೆಯಲ್ಲಿ ಪತ್ನಿ ಡಾನ್ಸ್‌ ಮಾಡಿದಳೆಂದು ಬೇಸರಗೊಂಡ ಪತಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಗೆ ಶರಣಾಗಿರುವ ಘಟನೆ ಬಿಹಾರದ…

10 mins ago

ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ : ಎಚ್‌ಸಿಎಲ್‌ ಟೆಕ್‌ನಿಂದ ಫ್ರೆಶರ್‌ಗಳಿಗರ ಅವಕಾಶ

ಐಟಿ ಸೇವೆಗಳ ದೈತ್ಯ ಎಚ್‌ಸಿಎಲ್‌ ಟೆಕ್‌ ಶುಕ್ರವಾರ ತನ್ನ ನಾಲ್ಕನೇ ತ್ರೈ ಮಾಸಿಕ ವರದಿಯನ್ನು ಪ್ರಕಟಿಸಿದೆ. ಈ ವೇಳೆ ವಿದ್ಯಾರ್ಥಿಗಳಿಗೆ…

25 mins ago

ಅಮೆರಿಕಾದಲ್ಲಿ ಭೀಕರ ಕಾರು ಅಪಘಾತ-ಭಾರತದ ಮೂವರು ಮಹಿಳೆಯರು ಮೃತ್ಯು

ಅಮೆರಿಕಾದಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಗುಜರಾತ್‌ನ ಮೂವರು ಮಹಿಳೆಯರು ಸಾವನ್ನಪ್ಪಿದ ಘಟನೆ ನಡೆದಿದೆ.

33 mins ago

ಮೋದಿ ಪ್ರಧಾನಮಂತ್ರಿಯಾಗಲು ಅವಕಾಶ ಕಲ್ಪಿಸಿದ್ದೆ ಕಾಂಗ್ರೆಸ್ : ರಾಜೇಶ ಕುಂದೂರ

ಇವತ್ತು ಕಾಂಗ್ರೆಸ್ ಪಕ್ಷದ ವಿಜಯಪುರ ಲೋಕಸಭಾ ಕ್ಷೇತ್ರದ ಅಭ್ರ‍್ಥಿ ನನ್ನ ಆತ್ಮೀಯ ಸಹೋದರ ನಾದ ಶ್ರೀ ರಾಜು ಅಲಗೂರ ಅವರ…

45 mins ago

ಕೇಂದ್ರದಿಂದ 3,454 ಕೋಟಿ ರೂ. ಬರ ಪರಿಹಾರ ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ

ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊನೆಗೂ 3,454 ಕೋಟಿ ರೂ. ಬರ ಪರಿಹಾರ ಘೋಷಿಸಿದೆ. ಇದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್…

55 mins ago

ಬೀದರ್: ಜಿಲ್ಲೆಯ ಅಭಿವೃದ್ಧಿಯಲ್ಲಿ ಖೂಬಾ ಕೊಡುಗೆ ಶೂನ್ಯ ಎಂದ ಸಾಗರ ಖಂಡ್ರೆ

ಲೋಕಸಭೆಯ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ಜಿಲ್ಲೆಯಲ್ಲಿ ಹೇಳುವಂತಹ ಯಾವುದೇ ಅಭಿವೃದ್ಧಿ ಮಾಡಿಲ್ಲ. ಜನರಿಗೆ ಸುಳ್ಳು ಹೇಳುವುದೆ…

1 hour ago