Categories: ಬೀದರ್

ಬೀದರ್: ಜಿಲ್ಲೆಯ ಅಭಿವೃದ್ಧಿಯಲ್ಲಿ ಖೂಬಾ ಕೊಡುಗೆ ಶೂನ್ಯ ಎಂದ ಸಾಗರ ಖಂಡ್ರೆ

ಕಮಲನಗರ : ಲೋಕಸಭೆಯ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ಜಿಲ್ಲೆಯಲ್ಲಿ ಹೇಳುವಂತಹ ಯಾವುದೇ ಅಭಿವೃದ್ಧಿ ಮಾಡಿಲ್ಲ. ಜನರಿಗೆ ಸುಳ್ಳು ಹೇಳುವುದೆ ಖೂಬಾ ಕಾಯಕವಾಗಿದೆ ಎಂದು ಕಾಂಗ್ರೆಸ್ ಲೋಕಸಭೆ ಅಭ್ಯರ್ಥಿ ಸಾಗರ ಖಂಡ್ರೆ ವಾಗ್ದಾಳಿ ನಡೆಸಿದರು.

ತಾಲೂಕಿನ ತಾಂಚೋದಿ, ಮುಧೋಳ, ಬೆಳಕೋಣಿ (ಭೌ), ದಾಬಕಾ, ಬೋಂತಿ ಗ್ರಾಮದಲ್ಲಿ ಮತಯಾಚನೆ ಮಾಡುವ ಮೂಲಕ ಮಾತನಾಡಿದರು. ಕರೊನಾ ಸಂಕಷ್ಟದಲ್ಲಿ ಖೂಬಾ ಮೌನಾಚರಣೆ ಮಾಡಿದ್ದಾರೆ. ಆದ್ದರಿಂದ ಚುನಾವಣೆಯಲ್ಲಿ ಸೋಲಿಸುವ ಮೂಲಕ ಭಗವಂತ ಖೂಬಾಗೆ ಶಾಶ್ವತವಾಗಿ ಮನೆಯಲ್ಲಿ ಮೌನ ಮಾಡುವಂತೆ ಮಾಡಬೇಕಿದೆ ಎಂದರು. ೨ ವರ್ಷದ ಅವಧಿಯಲ್ಲಿ ಮುಗಿಯಬೇಕಾಗಿದ್ದ, ರಾಷ್ಟ್ರೀಯ ಹೆದ್ದಾರಿ ರಸ್ತೆಗಳು ೬ ವರ್ಷಗಳ ಕಾಲ ಮುಗಿದಿಲ್ಲ. ಇನ್ನೂ ಕಾಮಗಾರಿಗಳು ಸಂಪೂರ್ಣ ಕಳಪೆ ಮಟ್ಟದಲ್ಲಿ ನಡೆದಿವೆ.

ಕೇಂದ್ರ ಸಚಿವರಾಗಿ ಜಿಲ್ಲೆಗೆ ಒಂದು ಕೈಗಾರಿಕೆ ತರಲು ಸಾಧ್ಯವಾಗಿಲ್ಲ ಎಂದು ಖೂಬಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಈ ಬಾರಿ ಮೋದಿ ಮುಖವೂ ನೋಡಲ್ಲ. ಖೂಬಾ ಮುಖವಂತೂ ಜನರಿಗೆ ಬೇಡವಾಗಿದೆ ಎಂದು ಖಾರವಾಗಿ ನುಡಿದರು. ಕೆಲವರು ಚುನಾವಣೆ ಬಳಿಕ ಗ್ಯಾರಂಟಿ ಯೋಜನೆ ಬರುವದಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಗ್ಯಾರಂಟಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಖಂಡರಾದ ಡಾ. ಭೀಮಸೇನರಾವ ಶಿಂಧೆ ಮಾತನಾಡಿ, ವಿದ್ಯಾವಂತ, ಬುದ್ದಿವಂತ ಯುವಕ. ಇವರನ್ನು ಆಯ್ಕೆ ಮಾಡಿದರೇ ಜಿಲ್ಲೆಯ ಅಭಿವೃದ್ಧಿ ಸಾಧ್ಯವಿದೆ ಎಂದರು. ಆನಂದ ಚವ್ಹಾಣ, ಕೆ. ಪುಂಡಲಿಕರಾವ, ಮಲ್ಲಿಕಾರ್ಜುನ ಪಾಟೀಲ್, ಶಿವರಾಜ ದೇಶಮುಖ, ಝರೇಪ್ಪ ಮಮದಾಪೂರ, ಅಮಿತ ಸೂರ್ಯವಂಶಿ ಸೇರಿದಂತೆ ಅನೇಕರಿದ್ದರು.

ಭವ್ಯ ಸ್ವಾಗತ ಕೋರಿದ ಜನ
ಕಾಂಗ್ರೆಸ್ ಅಭ್ಯರ್ಥಿ ಸಾಗರ ಖಂಡ್ರೆ ಗ್ರಾಮಗಳಿಗೆ ಆಗಮಿಸುತ್ತಿದಂತೆ ಬಾಜಾ ಭಜಂತ್ರಿಯೊಂದಿಗೆ ಸಾರ್ವಜನಿಕರು ಭವ್ಯ ಸ್ವಾಗತ ಕೋರಿದರು. ಇನ್ನೂ ಗ್ರಾಮದ ಯುವಪಡೆ ಸಾಗರ ಖಂಡ್ರೆ ಅವರಿಗೆ ಜೈಕಾರ ಹಾಕುತ್ತಿರುವುದು ಗಮನ ಸೆಳೆಯಿತು.

ಬದಲಾವಣೆ ಗಾಳಿ ಬೀಸಿದೆ
ಮತದಾರರಿಗೆ ಬದಲಾವಣೆ ಬೇಕಿದೆ. ಆದ್ದರಿಂದ ಮೋದಿ, ಖೂಬಾ ಮುಖ ನೋಡುತ್ತಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಸಾಗರ ಖಂಡ್ರೆ ಹೇಳಿದರು. ಖೂಬಾ ಅವರಿಗೆ ಸ್ವಪಕ್ಷದ ಕಾರ್ಯಕರ್ತರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಭಗವಂತ ಖೂಬಾ ಜನರಿಗೆ ಭೇಟಿಯಾಗಿಲ್ಲ. ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿಲ್ಲ. ಇದರಿಂದ ಖೂಬಾ ಜನರಿಗೆ ಬೇಡವಾಗಿದ್ದಾರೆ. ಬದಲಾವಣೆ ಗಾಳಿ ಎಲ್ಲೆಡೆ ಬೀಸಿದೆ ಎಂದರು.

Chaitra Kulal

Recent Posts

ಲೋಕಸಭೆ ಚುನಾವಣೆ: ಭಾಲ್ಕಿ ಕ್ಷೇತ್ರದಲ್ಲಿ ಅತ್ಯಧಿಕ ಮತದಾನ

ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಶೇ 65.45ರಷ್ಟು ಮತದಾನ ದಾಖಲಾಗಿದ್ದು, ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಭಾಲ್ಕಿಯಲ್ಲಿ ಅತಿ ಹೆಚ್ಚು…

15 mins ago

ಕುಡಿಯುವ ನೀರಿನ ಸಮಸ್ಯೆ ನಿವಾರಣೆ: ಮಲಪ್ರಭಾ ಕಾಲುವೆಗೆ ಮೇ 14 ರಿಂದ 23 ರವರೆಗೆ ನೀರು

ಮೇ 14 ರಿಂದ 23 ರವರೆಗೆ ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ಹಾಗೂ ನರಗುಂದ ಶಾಖಾ ಕಾಲುವೆ ಮೂಲಕ ನವಲಗುಂದ ಅಣ್ಣಿಗೇರಿ,…

34 mins ago

ಬಿಜೆಪಿ ಸಾಮಾಜಿಕ ಜಾಲತಾಣ ಸಂಚಾಲಕ ಪ್ರಶಾಂತ್‌ ಮಾಕನೂರು ಬಂಧನ

ಎಸ್‌ಸಿ, ಎಸ್‌ಟಿ ಅನುದಾನ ಮುಸ್ಲಿಂ ಪಾಲಾಗುತ್ತಿದೆ ಎಂದು ಬಿಜೆಪಿ ತನ್ನ ಎಕ್ಸ್‌ ಖಾತೆಯನ್ನು ವಿಡಿಯೋ ಜಾಹೀರಾತು ಪ್ರಕಟಿಸಿತ್ತು. ಈ ವಿಡಿಯೋ…

49 mins ago

ರೀಲ್ಸ್ ಸ್ಟಾರ್ ಗೀತಾಶ್ರೀ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಗೊರವಿಕಲ್ಲು ಬಡಾವಣೆಯ ಶಿಕ್ಷಕಿ, ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಸ್ಟಾರ್ ಎನಿಸಿದ್ದ ಗೀತಾಶ್ರೀ ಶವ ಅವರ ಮನೆಯಲ್ಲೇ…

1 hour ago

ಚುನಾವಣಾ ಪ್ರಚಾರದ ಹಕ್ಕು “ಮೂಲಭೂತವಲ್ಲ”: ಕೇಜ್ರಿವಾಲ್ ಜಾಮೀನಿಗೆ ಇಡಿ ಆಕ್ಷೇಪ

ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವುದಕ್ಕೆ ಜಾರಿ ನಿರ್ದೇಶನಾಲಯ ಗುರುವಾರ ವಿರೋಧಿಸಿದೆ.

1 hour ago

ನೇಣು ಬಿಗಿದುಕೊಂಡು ಅತಿಥಿ ಉಪನ್ಯಾಸಕಿ ಆತ್ಮಹತ್ಯೆ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಗಾಯತ್ರಿ ಬಡಾವಣೆಯ ಮನೆಯಲ್ಲಿ ಅತಿಥಿ ಉಪನ್ಯಾಸಕಿಯೂಬ್ಬರು ನೇಣುಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

2 hours ago