Categories: ಬಿಹಾರ

ಮದುವೆ ಮನೆಯಲ್ಲಿ ಪತ್ನಿ ಡಾನ್ಸ್‌ ಮಾಡಿದಳೆಂದು ಪತಿ ಆತ್ಮಹತ್ಯೆ

ಬಿಹಾರ: ಬಾವನ ಮದುವೆಯಲ್ಲಿ ಪತ್ನಿ ಡಾನ್ಸ್‌ ಮಾಡಿದಳೆಂದು ಬೇಸರಗೊಂಡ ಪತಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಗೆ ಶರಣಾಗಿರುವ ಘಟನೆ ಬಿಹಾರದ ಬದಾರಿಯಾದಲ್ಲಿ ನಡೆದಿದೆ.

ಬಹುಲಾ ಗ್ರಾಮದ ನಿವಾಸಿ 35 ವರ್ಷದ ಗೋಪಾಲ್‌ ಸಿಂಗ್‌. ಈತ ರಸೂಲ್‌ಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬರುವ ಮಹೇಂದ್ರ ನಾಥ್‌ ಹಾಲ್ಟರ್‌ ರೈಲು ನಿಲ್ದಾಣದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಗೋಪಾಲ್‌ ಸಿಂಗ್‌ ಬೇನತ್‌ ಗ್ರಾಮದಲ್ಲಿ ತನ್ನ ಪತ್ನಿಯ ಸಹೋದರನ ಮದುವೆ ಸಮಾರಂಭಕ್ಕೆ ಹೋಗಿದ್ದರು. ಈ ವೇಳೆ ಸಂಭ್ರಮದಲ್ಲಿ ಡಾನ್ಸ್‌ ಮಾಡುತ್ತಿದ್ದ ಪತ್ನಿಯನ್ನು ನೋಡಿ ಅಸಮಾಧಾನಗೊಂಡು ಗೋಪಾಲ್‌ ಆಕೆಯನ್ನು ತಡೆದಿದ್ದಾನೆ.

ಕುಟುಂಬಸ್ಥರ ಮಾಹಿತಿ ಪ್ರಕಾರ ಗೋಪಾಲ್‌ ಡಾನ್ಸ್‌ ಮಾಡುತ್ತಿದ್ದ ತನ್ನ ಪತ್ನಿಯನ್ನು ಸುಮ್ಮನಿರುವಂತೆ ಸೂಚಿಸಿದ್ದನು. ಆದರೆ ಆಕೆ ಮಾತ್ರ ಆತನ ಮಾತಿಗೆ ಒಪ್ಪಲಿಲ್ಲ. ಈ ವೇಳೆ ಇಬ್ಬರ ನಡುವೆ ಸಣ್ಣ ಜಗಳ ನಡೆದಿದೆ.

ಆಗ ಬಾವ-ಬಾಮೈದರ ನಡುವೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿತ್ತು. ಇದರಿಂದ ತೀರ ಬೇಸರಗೊಂಡಿದ್ದ ಗೋಪಾಲ್‌, ರೈಲು ಬರುತ್ತಿದ್ದ ಸಮಯ ನೋಡಿಕೊಂಡು ಹಳಿಗೆ ಹಾರಿಗೆ ಪ್ರಾಣ ಬಿಟ್ಟಿದ್ದಾನೆ. ಪ್ರಕರಣ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

Chaitra Kulal

Recent Posts

ಹುಟ್ಟೂರಿಗೆ ಆಗಮಿಸಿದ ಮಾಜಿ ಶಾಸಕ ಕೆ.ವಸಂತ ಬಂಗೇರ ಪಾರ್ಥಿವ ಶರೀರ

ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ, ಬೆಳ್ತಂಗಡಿಯ ಐದು ಬಾರಿಯ ಶಾಸಕ ಕೆ.ವಸಂತ ಬಂಗೇರ (79)…

20 mins ago

ಮಲಯಾಳಂ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಖ್ಯಾತಿ ಪಡೆದ ನಿರ್ದೇಶಕ ಸಂಗೀತ್ ಶಿವನ್ ಮೇ 8 ರಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ…

1 hour ago

ಮುಸ್ಲಿಂ ಯುವತಿಯೊಂದಿಗೆ ಮದುವೆ : ಖಾಕಿ ವಿರುದ್ಧ ಹಿಂದೂ ಸಂಘಟನೆ ಪ್ರತಿಭಟನೆ

ಬಾದಾಮಿ ಮೂಲದ ರುಬಿನಾ ಮತ್ತು ಮಾಂತೇಶ್ ಪ್ರೀತಿಸಿ ದೇವಸ್ಥಾನದಲ್ಲಿ‌ ಮದುವೆಯಾಗಿ ರಕ್ಷಣೆ ಕೋರಿ ಲ ಬಾಗಲಕೋಟೆ ಎಸ್​ಪಿ ಕಚೇರಿಗೆ ಬಂದಿದ್ದು,…

2 hours ago

ಹಾಸ್ಟೆಲ್‌ ಯುವತಿಯರ ಬೆತ್ತಲೆ ವಿಡಿಯೊಗಳನ್ನು ಬಾಯ್‌ಫ್ರೆಂಡ್‌ಗೆ ಕಳುಹಿಸಿದ ಯುವತಿ!

ಮಹಾರಾಷ್ಟ್ರದ ಪುಣೆಯಲ್ಲಿರುವ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಪುಣೆಯ (COEP) ಹಾಸ್ಟೆಲ್‌ನಲ್ಲಿ ಯುವತಿಯೊಬ್ಬಳು ಮಾಡಿದ ಭಾನಗಡಿ ಈಗ ಹಾಸ್ಟೆಲ್‌ನ ಎಲ್ಲ ವಿದ್ಯಾರ್ಥಿನಿಯರು…

2 hours ago

ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ನಿಧನ

ಬೆಳ್ತಂಗಡಿಯ ಬಡವರ ಬಂಧು, ಮಾಜಿ ಶಾಸಕ ವಸಂತ ಬಂಗೇರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿರುತ್ತಾರೆ. ಗುರುವಾರ ಮುಂಜಾನೆ…

2 hours ago

ಇಂದು ಎಸ್​ಎಸ್​ಎಲ್​​ಸಿ ಫಲಿತಾಂಶ : ಎಷ್ಟು ಗಂಟೆಗೆ? ಎಲ್ಲಿ ನೋಡಬಹುದು?

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶಬೆಳಗ್ಗೆ 10.30ಕ್ಕೆ ಪ್ರಕಟವಾಗಲಿದೆ. ರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುದ್ದಿಗೋಷ್ಠಿ…

3 hours ago