Categories: ಮಂಗಳೂರು

ಮೂಡುಬಿದಿರೆ: ಪ್ರಧಾನಿಯ ಗಮನಸೆಳೆದ ಮೂಡುಬಿದಿರೆ ಕಲಾವಿದನ ಕಲಾಕೃತಿ

ಮೂಡುಬಿದಿರೆ: ಜಾಗತಿಕ ಮಟ್ಟದಲ್ಲಿ ಗಮನ ಸೆಳೆದ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಬಾನುಲಿ ಸರಣಿ ಶತಕದ ಸಂಭ್ರಮದ ಹಿನ್ನೆಲೆಯಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯವು ರಾಷ್ಟçದ ಆಯ್ದ ಕಲಾವಿದರನ್ನು ಆಹ್ವಾನಿಸಿ ಮನ್‌ಕೀ ಬಾತ್ ನೂರು ಆವೃತ್ತಿಯ ಸಾರಾಂಶವನ್ನು ಕಲಾಕೃತಿಗಳಲ್ಲಿ ವೇದಿಕೆಯನ್ನು ಕಲ್ಪಿಸಿತು. ಇದರಲ್ಲಿ ರಾಷ್ಟçದ 13 ಕಲಾವಿದರ ಪಾಲ್ಗೊಂಡಿದ್ದು, ಮೂಡುಬಿದಿರೆಯ ಚಿತ್ರಕಲಾವಿದ ಬಿ. ಮಂಜುನಾಥ ಕಾಮತ್ ಅವರ ಕಲಾಕೃತಿಯು ಪ್ರಧಾನಿ ನರೇಂದ್ರ ಮೋದಿಯವರ ಗಮನಸೆಳೆದಿದೆ.

ಕಳೆದ ಮೂರು ತಿಂಗಳಿಂದ ಈ ಕಾರ್ಯ ಯೋಜನೆ ನಡೆದಿದ್ದು ಕಲಾಕಾರರಿಗೆ ಮನ್ ಕೀ ಬಾತ್ ಸರಣಿಯ ಚಿಂತನೆಗಳ ಸಾರಾಂಶವನ್ನು ಹದಿಮೂರು ಚಿಂತನೆಗಳಾಗಿ ನೀಡಲಾಗಿತ್ತು. ಇದೀಗ ಕಳೆದ ಕೆಲವು ದಿನಗಳ ಹಿಂದೆ ಕಲಾವಿದರ ಕಲಾಕೃತಿಗಳನ್ನೆಲ್ಲ ದೆಹಲಿಯ ನ್ಯಾಶನಲ್ ಗ್ಯಾಲರಿ ಆಫ್ ಮೋಡರ್ನ್ ಆರ್ಟ್ನಲ್ಲಿ `ಜನಶಕ್ತಿ ಒಂದು ಸಾಂಘಿಕ ಸಾಮರ್ಥ್ಯ ‘ ಹೆಸರಲ್ಲಿ ಪ್ರದರ್ಶನಕ್ಕೆ ಇರಿಸಿದ್ದು ಸ್ವಚ್ಚತೆ, ಜಲ ಸಂರಕ್ಷಣೆ, ಕೃಷಿ, ಬಾಹ್ಯಾಕಾಶ, ಈಶಾನ್ಯ ಭಾರತ, ನಾರೀಶಕ್ತಿ, ಯೋಗ, ಆಯುರ್ವೇದ ಹೀಗೆ ವಿವಿಧ ಪರಿಕಲ್ಪನೆಯ ಕಲಾಕೃತಿಗಳು ಈ ಪ್ರದರ್ಶನಗೊಂಡಿದೆ.

ಭೂಮಿ ಗುಂಡಗಿದೆ ಎನ್ನುವುದನ್ನು ವರಾಹಾವತಾರದಲ್ಲಿ ಗೋಲಾಕಾರದ ಭೂಮಿಯನ್ನೆತ್ತಿದ ನಮ್ಮ ಪೌರಾಣಿಕ ಚರಿತ್ರೆಯ ಚಿತ್ರಗಳೇ ಸಾರಿವೆ. ಗ್ರಹಣಗಳ ಕಲ್ಪನೆಯನ್ನು ರಾಹು ಕೇತುಗಳು ನುಂಗುವ ಚಂದ್ರ, ಸೂರ್ಯ, ವಿಶ್ವರೂಪಿ ಪರಮಾತ್ಮನ ಚಿತ್ರಣದ ಮೂಲಕ ಭಗವಂತನೆAಬ ಅಗೋಚರ ಮಹತ್ವದ ಶಕ್ತಿ ಹೀಗೆ ಚಿತ್ರಿಸಿ ಜಗತ್ತಿಗೇ ಮೊದಲ ತಿಳುವಳಿಕೆ ನೀಡಿದ ಭಾರತ ಜಗದ್ವಂದ್ಯ ಎನ್ನುವುದಕ್ಕೆ ನಮ್ಮಲ್ಲಿ ಸಾಕಷ್ಟು ನಿದರ್ಶನಗಳಿವೆ. ವಿಶ್ವಕ್ಕೆ ಭಾರತ ಹೇಗೆ ಮಹತ್ವದ್ದು ಎನ್ನುವ ಮೋದಿಜಿಯವರ ಚಿಂತನೆ, ನಮ್ಮ ಐತಿಹಾಸಿಕ ಹಿನ್ನೆಲೆಯ ಥೀಮ್ ಆಯ್ದುಕೊಂಡು ಕಲಾಕೃತಿ ರಚಿಸಿದ್ದೆ. ಕಲೆಯಲ್ಲಿ ವಿಶೇಷ ಆಸಕ್ತಿಯಿರುವ ಮೋದಿಜಿಯವರು ಸಾಕಷ್ಟು ಕುತೂಹಲದಿಂದಲೇ ನನ್ನ ಕಲಾಕೃತಿಯಲ್ಲಿ ಅಡಗಿರುವ ಸೂಕ್ಷö್ಮಗಳನ್ನು ವಿಚಾರಿಸಿ ತಿಳಿದುಕೊಂಡು ಸಂತಸಪಟ್ಟರು ಎಂದು ಮಂಜುನಾಥ್ ವಿವರಿಸಿದರು.

ಮೂಲತಃ ಬಂಟ್ವಾಳದವರಾದ ಪುಂಡಲೀಕ ಕಾಮತ್- ಪ್ರಫುಲ್ಲಾ ದಂಪತಿಯ ಮಗನಾದ ಮಂಜುನಾಥ್ ಮಾರ್ಡನ್ ಆರ್ಟ್ನಲ್ಲಿಂದು ಹೆಸರಾಂತ ಕಲಾವಿದ. ದೆಹಲಿಯ ಎಸ್‌ಸ್ಪೇಸ್, ಮುಂಬೈನ ಸಾಕ್ಷಿ ಗ್ಯಾಲರಿಗಳ ಮೂಲಕ ಅವರ ಕಲಾಕೃತಿಗಳು ಜಗದಗಲ ಹರಿದಾಡುತ್ತಿವೆ. ಚಿತ್ರಕಾರ, ಕಲಾವಿದರು ಬದುಕು ಕಟ್ಟಿಕೊಳ್ಳುವುದು ಕನಸಿನ ಮಾತು ಎಂಬ ಆ ಪರಿಸ್ಥಿತಿಯಲ್ಲೂ ಬಾಳ ಸಂಗಾತಿಯಾದ ಸೂರ್ಯಪ್ರದ, ಹೆಣ್ಣು ಕೊಟ್ಟ ಮಾವ ಮೂಡುಬಿದಿರೆಯ ಹಿರಿಯ ಪತ್ರಿಕಾ ವಿತರಕ ಸಹಕಾರಿ ಧುರೀಣ ದಯಾನಂದ ಪೈ ಅವರ ಪ್ರೋತ್ಸಾಹವನ್ನೂ ಮರೆಯಲಾಗದು ಅಂತಾರೆ ಮಂಜುನಾಥ್. ಇಬ್ಬರು ಮಕ್ಕಳ ಪೈಕಿ ಹಿರಿಯಾಕೆ ಮಾನ್ಯಳಿಗೆ ಕಲಾಶಿಕ್ಷಣದ ಈ ಮೊದಲ ವರ್ಷವೇ ಜಾಬ್ ಆಫರ್ ಗಿಟ್ಟಿಸುವ ಮಟ್ಟಕ್ಕೆ ಈಗ ಅವಕಾಶಗಳಿವೆ. ಕಿರಿಯಾಕೆ ಆದ್ಯ. ಕರ್ನಾಟಕ ಮೂಲದ ಕಲಾಕಾರರೆಲ್ಲ ನೆಂಟಸ್ತಿಕೆಯೇ ಬಾರದೇ ಉತ್ತರ ಭಾರತದ ಹುಡುಗಿಯರನ್ನು ವರಿಸಿದ ವಾಸ್ತವವನ್ನೂ ಅವರು ವಿಷಾದಪೂರ್ವಕ ವಿವರಿಸುತ್ತಾರೆ.

Sneha Gowda

Recent Posts

ಪ್ರಜ್ವಲ್ ಅಶ್ಲೀಲ ವಿಡಿಯೋ ಕೇಸ್: ಭವಾನಿ ರೇವಣ್ಣ ಸಂಬಂಧಿಗೆ ನ್ಯಾಯಾಂಗ ಬಂಧನ

ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಈಗಾಗಲೇ ದೊಡ್ಡಮಟ್ಟದಲ್ಲಿ ಸಂಚಲನ ಮೂಡಿಸಿದೆ. ಅದರಂತೆ ಇದೀಗ ರೇವಣ್ಣ ಪತ್ನಿ ಭವಾನಿ…

1 min ago

ಕರಾವಳಿ ಜಿಲ್ಲೆಯಾದ್ಯಂತ ತೆರೆಗಪ್ಪಳಿಸಲಿದೆ “ಗಬ್ಬರ್ ಸಿಂಗ್”

ಮುತ್ತು ಗೋಪಾಲ್ ಫಿಲ್ಮ್ಸ್ ಬಾರ್ಕೂರು ಲಾಂಛನದಲ್ಲಿ ಚಂದ್ರಶೇಖರ ನಾನಿಲ್, ನಾಗೇಶ್ ಪೂಜಾರಿ ಅರ್ಪಿಸುವ ಸತೀಶ್ ಪೂಜಾರಿ ಬಾರ್ಕೂರು ನಿರ್ಮಾಣದ "ಗಬ್ಬರ್…

19 mins ago

ರಾಯಚೂರಿನಲ್ಲಿ ಬಿಸಿ ಹೆಚ್ಚಲು ಕೈ ಅಭ್ಯರ್ಥಿ ಜಿ.ಕುಮಾರ್ ನಾಯಕ್ ಪಾತ್ರವಿದೆ-ರಾಜಾ ಅಮರೇಶ್ವರ್ ನಾಯಕ್

ರಾಯಚೂರಿನಲ್ಲಿ ತಾಪಮಾನ ಹೆಚ್ಚಳವಾಗಿರುವುದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ್ ನಾಯಕ್ ಪಾತ್ರವಿದೆ ಅಂತ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ್ ನಾಯಕ್ ಆರೋಪ…

37 mins ago

ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಅಮೇಥಿಯಿಂದ ಕಣಕ್ಕೆ

ಅಮೇಥಿ ಲೋಕಸಭಾ ಕ್ಷೇತ್ರದಿಂದ ಕಿಶೋರಿ ಲಾಲ್ ಶರ್ಮಾ ಅವರನ್ನು ಕಾಂಗ್ರೆಸ್  ಹೈಕಮಾಂಡ್ ಕಣಕ್ಕಿಳಿಸಿದೆ.

43 mins ago

ಬಸ್ಸೊಂದು ನದಿ ಕಣಿವೆಗೆ ಉರುಳಿ 20 ಪ್ರಯಾಣಿಕರು ಮೃತ್ಯು

ಪ್ರಯಾಣಿಕರ ಬಸ್ಸೊಂದು ಬೆಟ್ಟ ಪ್ರದೇಶದಲ್ಲಿ ಚಲಿಸುವಾಗ ನದಿ ಕಣಿವೆಗೆ ಉರುಳಿ ಕನಿಷ್ಠ 20 ಜನ ಮೃತಪಟ್ಟಿರುವ ಘಟನೆ ವಾಯವ್ಯ ಪಾಕಿಸ್ತಾನದಲ್ಲಿ…

1 hour ago

ಅಂಚೆಮತಪತ್ರ ವಿತರಣೆ: ಮೇ.1 ರಂದು1262 ಜನ ಸಿಬ್ಬಂದಿಯಿಂದ ಮತದಾನ

ಧಾರವಾಡ ಲೋಕಸಭೆ ಮತಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯ ನಿಯೋಜಿತರಾದ ಸಿಬ್ಬಂದಿ, ಅಧಿಕಾರಿಗಳು ಧಾರವಾಡ ಲೋಕಸಭಾ ಮತಕ್ಷೇತ್ರದ ಮತದಾರರಾಗಿದ್ದು ಮತ್ತು ಚುನಾವಣಾ ಆಯೋಗ…

2 hours ago