Categories: ವಿಜಯಪುರ

ಮೋದಿ ಪ್ರಧಾನಮಂತ್ರಿಯಾಗಲು ಅವಕಾಶ ಕಲ್ಪಿಸಿದ್ದೆ ಕಾಂಗ್ರೆಸ್ : ರಾಜೇಶ ಕುಂದೂರ

ವಿಜಯಪುರ : ಇವತ್ತು ಕಾಂಗ್ರೆಸ್ ಪಕ್ಷದ ವಿಜಯಪುರ ಲೋಕಸಭಾ ಕ್ಷೇತ್ರದ  ಅಭ್ಯರ್ಥಿ ನನ್ನ ಆತ್ಮೀಯ ಸಹೋದರ ನಾದ ಶ್ರೀ ರಾಜು ಅಲಗೂರ ಅವರ ಪರವಾಗಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಗಂಗಾಮತಸ್ಥ ಸಮುದಾಯ, ಬೆಸ್ತ ಜನಾಂಗ ಸಾಂಪ್ರದಾಯಿಕ ಮೀನುಗಾರರು ಹಾಗೂ ಸಮುದಾಯದ ಮತಯಾಚನೆಗೆ ಆಗಮಿಸಿದ್ದು ಇವತ್ತು ಒಬ್ಬ ಉತ್ತಮ ಅಭ್ಯರ್ಥಿ ಯನ್ನು ಕಾಂಗ್ರೆಸ್ ಪಕ್ಷ ಈ ಜಿಲ್ಲೆಯಲ್ಲಿ ಚುನಾವಣೆಗೆ ಅವಕಾಶ ಕಲ್ಪಿಸಿಕೊಟ್ಟಿದೆ.

ಇವತ್ತು ದೇಶದಲ್ಲಿ ಕಾಂಗ್ರೆಸ್ ಪಕ್ಷ ಸ್ವಾತಂತ್ರ‍್ಯ ಪರ‍್ವದಲ್ಲಿ ಹಾಗೂ ಸ್ವಾತಂತ್ರ‍್ಯ ನಂತರದಲ್ಲಿ ಸಹ ತನ್ನದೇ ಆದ ಚಾಪನ್ನು ಮೂಡಿಸುತ್ತಾ ಬಂದಿದೆ. ದೇಶದಲ್ಲಿ ಇವತ್ತು ಅಭಿವೃದ್ಧಿ ಕರ‍್ಯಗಳು, ರಸ್ತೆ, ಶಾಲೆ, ಕಾಲೇಜು, ಆಸ್ಪತ್ರೆ, ಕೈಗಾರಿಕೆಗಳು, ಬ್ಯಾಂಕ್, ಸರ್ಕಾರಿ ಕಚೇರಿಗಳು, ಸರ್ಕಾರದ ಸಂಸ್ಥೆಗಳು, ಇವೆಲ್ಲವೂ ಇದೆ ಅಂದರೆ ಅದು ಕಾಂಗ್ರೆಸ್ ಸಾಧನೆ ಕಾಂಗ್ರೆಸ್ ಮಾಡಿರುವ ಕೆಲಸ, ಇವತ್ತು ದೇಶದ ಪ್ರಧಾನಿ ನರೇಂದ್ರ ಮೋದಿ ಯವರು ಚಹಾ ಮಾರಿ ಪ್ರಧಾನಿ ಯಾಗಿದ್ದೆನೆ ಅಂತಾ ಹೇಳಿತ್ತಾರೆ ಇವತ್ತು ದೇಶದ ಪ್ರಧಾನಿ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣದಲ್ಲಿ ಚಹಾ ಮಾರಲು ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣ ನಿರ‍್ಮಾಣ ಮಾಡಿ ಅವರು ಪ್ರಧಾನಮಂತ್ರಿ ಯಾಗಲು ಅವಕಾಶ ಕಲ್ಪಿಸಿದ್ದೆ ಕಾಂಗ್ರೆಸ್ ಪಕ್ಷ ಅಂತಾ ಹೇಳಲಿಕೆ ಬಯಸುತ್ತೇನೆ.

ಕಾಂಗ್ರೆಸ್ ಪಕ್ಷ ಏನ್ ಮಾಡಿದೆ ಅನ್ನೋದಕ್ಕೆ ಅಥವಾ ಪ್ರಶ್ನೆ ಮಾಡೋಯಾದಕ್ಕೆ ಅವಕಾಶ ಮಾಡಿದ್ದೆ ಕಾಂಗ್ರೆಸ್ ಅಂತ ನಾನು ಹೆಳಲಿಕ್ಕೆ ಬಯಸುತ್ತೇನೆ. ಇವತ್ತು ಜಗತ್ತಿನಲ್ಲಿ ಸುಳ್ಳಿಗೆ ಆಸ್ಕರ್ ಪ್ರಶಸ್ತಿ ಏನಾದರೂ ಸಿಗುತ್ತದೆ ಅಂದರೆ ಅದು ನಮ್ಮ ನರೇಂದ್ರ ಮೋದಿ ಅವರಿಗೆ ಸಿಗುತ್ತದೆ. ಯಾಕೆಂದರೆ ಇವತ್ತು ಜನರಿಗೆ ಅತಿ ಹೆಚ್ಚು ಸುಳ್ಳು ಹೇಳಿದ ಪ್ರಧಾನಿ ಯಾರಾದರೂ ಇದ್ದರೆ ಅದು ನರೇಂದ್ರ ಮೋದಿಯವರು, ಇವತ್ತು ಪ್ರತಿಯೊಬ್ಬ ನಾಗರಿಕನ ಖಾತೆಗೆ 15 ಲಕ್ಷ ಹಣ ಹಾಕುವ ಬರವಸೆ ನೀಡಿ  ಹತ್ತು  ವರ್ಷದ  ಕಳೆದರು ಸಹ ದೇಶದ ಯಾವೋಬ್ಬ ನಾಗರೀಕನಿಗೂ ಹತ್ತು ರೂಪಾಯಿ ಸಹ ಖಾತೆಗೆ ಬಂದಿಲ್ಲ, ರ‍್ಷಕ್ಕೆ 2 ಲಕ್ಷ ಉದ್ಯೋಗ ನೀಡುವ ಬರವಸೆ ನೀಡಿ ದೇಶದಲ್ಲಿ ಇರುವ ಅನೇಕ ಸರ್ಕಾರದ ಸ್ವಾಮ್ಯದ ಸಂಸ್ಥೆಗಳ ಸಮಸ್ಯೆ ಬಗೆಹರಿಸೋ ಬದಲಾಗಿ ಅಲ್ಲಿ ಇರುವ ಉದ್ಯೋಗಿಗಳನ್ನು ಹೊರಹಾಕಿ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ ನಿರುದ್ಯೋಗಿಗಳನ್ನಾಗಿ ಮಾಡುವುದರ ಜೊತೆಗೆ ಅವರ ಇಡೀ ಕುಟುಂಬ ಬೀದಿಗೆ ಬರುವ ಕಸವನ್ನ ಇವತ್ತು ಮೋದಿಯವರು ಮಾಡಿದ್ದಾರೆ.

ದೇಶದ    ವ್ಯವಸ್ಥೆ ಹಾಳುಮಾಡಿ, ಬಡಜನರ ಖಾತೆಗಳನ್ನು ಬರಿದಾಗಿಸಿ ಖಾಸಗಿ ಬ್ಯಾಂಕುಗಳು ಹಾಗೂ ಬಮಡವಾಳ ಶಾಹಿ ರ‍್ಗದವರಿಗೆ ದೇಶವನ್ನು ದೀವಾಳಿ ಮಾಡಲು ಗುತ್ತಿಗೆ ನೀಡತಾಯಿದ್ದಾರೆ. ಇವತ್ತು ದೇಶದಲ್ಲಿ ಸಂವಿಧಾನವನ್ನು ತಿದ್ದುಪಡಿ ಮಾಡತೀವಿ ಸಂವಿಧಾನವನ್ನೇ ಬದಲಾಯಿಸತ್ತೀವಿ ಅಂತಾ ಹೊರಟಿರುವ ಮೋದಿಯವರಿಗೆ ದೇಶದ ಜನ ಸರಿಯಾಗಿ ಪಾಠ ಕಲಿಸುವ ಕೆಲಸವನ್ನು ಮಾಡಿ ತೋರಿಸುತ್ತದೆ.

ಇವತ್ತು ವಿಶೇಷವಾಗಿ ಮೀನುಗಾರರು ಹಾಗೂ ಮೀನುಗಾರ ಸಮುದಾಯ ಇವತ್ತು ಕಾಂಗ್ರೆಸ್ ಪಕ್ಷದ ಕೊಡುಗೆಯನ್ನು ಎಂದು ಮರೆಯೋದಿಲ್ಲ ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಸಂಪರ‍್ಣವಾಗಿ ಬೆಂಬಲ ನೀಡುವ ಮೂಲಕ ರಾಜು ಅಲಗೂರ ಅವರನ್ನು ಗೆಲ್ಲಿಸುವ ಕೆಲಸ ಮಾಡುತ್ತದೆ.

ಇವತ್ತು ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಏನು ಘೋಷಣೆ ಮಾಡಿದೆ ಖಂಡಿತವಾಗಿ ಆ ಅಷ್ಟು ಬರವಸೆ ಘೋಷಣೆಯನ್ನು ಅನುಷ್ಠಾನಕ್ಕೆ ತಂದು ನಿಮ್ಮೆಲ್ಲರ ಸೇವೆಯನ್ನು ಮಾಡಿ ದೇಶವನ್ನು ಅಭಿವೃದ್ಧಿ ಮಾಡುವ ಕೆಲಸ ಮಾಡುತ್ತಿದೆ. ಜನತೆಯ ಅಭಿವೃದ್ಧಿ ದೇಶದ ಅಭಿವೃದ್ಧಿ ಅಂತಾ ನಂಬಿರುವ ಪಕ್ಷ ಕಾಂಗ್ರೆಸ್ ಪಕ್ಷ ಹಾಗಾಗಿ ಎಲ್ಲರೂ ಕಾಂಗ್ರೆಸ್ ಪಕ್ಷದ ಅಭ್ರ‍್ಥಿಯನ್ನು ಗೆಲ್ಲಿಸಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಮತಹಾಕುವ ಮೂಲಕ ಶ್ರಮಿಸಬೇಕು ಅಂತಾ ಮನವಿ ಮಾಡುತ್ತೇನೆ

ಈ ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಮೀನುಗಾರ ವಿಭಾಗದ ಅಧ್ಯಕ್ಷರಾದ ಮಂಜುನಾಥ ಸುಣಗಾರ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜೇಶ ಕುಂದೂರ ಮಾತನಾಡಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ನಜುನ ಲೋಣಿ, ಜಿಲ್ಲಾ ಮೀನುಗಾರ ವಿಭಾಗದ ಅಧ್ಯಕ್ಷರಾದ ಕೃಷ್ಣಾ ಕಾಮಟೆ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಚಾಂದಸಾಬ ಗಡಗಲಾವ, ಜಿಲ್ಲಾ ವೈದ್ಯಕೀಯ ವಿಭಾಗದ ಉಪಾಧ್ಯಕ್ಷ ಪ್ರವೀಣ ಚೌರ ಹಾಗೂ ಮಹಾದೇವಿ ಗೋಕಾಕ, ವಸಂತ ಹೊನಮೊಡೆ ಮುಂತಾದವರು ಉಪಸ್ಥಿತರಿದ್ದರು.

Nisarga K

Recent Posts

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

20 mins ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

37 mins ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

51 mins ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

1 hour ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

2 hours ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

3 hours ago