News Karnataka Kannada
Saturday, May 18 2024
ಮಂಗಳೂರು

ಪುತ್ತೂರು: ಸರ್ಕಾರಿ ದಾಖಲೆಗಳ ನಕಲಿ ಜಾಲ ಪತ್ತೆ, ಆರೋಪಿ ಬಂಧನ

Puttur: Accused arrested for unearthing fake network of government documents
Photo Credit : News Kannada

ಪುತ್ತೂರು: ಪುತ್ತೂರು ಪಡೀಲಿನಲ್ಲಿ ಸರ್ಕಾರಿ ದಾಖಲೆಗಳ ನಕಲಿ ಜಾಲ ಪತ್ತೆಯಾಗಿದ್ದು, ಈ ಸಂಬಂಧ ದಾಖಲೆ ಸಿದ್ಧಪಡಿಸುತ್ತಿದ್ದ ವ್ಯಕ್ತಿಯ ಬಂಧನವಾಗಿದೆ.

ಕಬಕ ಗ್ರಾಮದ ಕೊಡಿಪ್ಪಾಡಿ ನಿವಾಸಿ ವಿಶ್ವನಾಥ (35) ಬಂಧಿತ ಆರೋಪಿ. ಪೊಲೀಸರು ಸಾರ್ವಜನಿಕರ ದೂರಿನಂತೆ ಈತನ ಇಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್ ಹೆಸರಿನ ಶಾಪ್ ಗೆ ದಾಳಿ ನಡೆಸಿದಾಗ ಕಂಪ್ಯೂಟರ್, ಪ್ರಿಂಟರ್ ಮೂಲಕ ನಕಲಿ ದಾಖಲೆ ತಯಾರಿಸುವ ಜಾಲ ಪತ್ತೆಯಾಗಿತ್ತು. ಅಲ್ಲದೆ ಪುತ್ತೂರು ನಗರಸಭೆ, ಸುಳ್ಯ, ಬಂಟ್ವಾಳ, ಕಡಬ ತಾಲೂಕಿನ ವಿವಿಧ ಗ್ರಾಪಂ ದಾಖಲೆಗಳು ಪತ್ತೆಯಾಗಿದ್ದವು. ನಕಲಿ ಸೀಲು, ಪಂಚಾಯತ್ ಪಿಡಿಒಗಳ ಸಹಿಯನ್ನು ನಕಲಿ ಮಾಡಿ ದಾಖಲೆಗಳನ್ನು ಆರೋಪಿ ಸಿದ್ದಪಡಿಸುತ್ತಿರುವುದು ಬೆಳಕಿಗೆ ಬಂದಿದೆ.

ನಿರಾಕ್ಷೇಪಣಾ ಪತ್ರ, ನಕಲಿ ತೆರಿಗೆ ರಶೀದಿ ಸೇರಿ 50ಕ್ಕೂ ಹೆಚ್ಚು ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪುತ್ತೂರು ತಾಲೂಕು ಪಂಚಾಯತ್ ಸಿಇಒ ದೂರಿನಂತೆ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ಪ್ರಕರಣದಲ್ಲಿ ಪ್ರಕರಣದಲ್ಲಿ ಪ್ರಭಾವಿಗಳು, ಅಧಿಕಾರಿಗಳ ಶಾಮೀಲಾತಿ ಶಂಕೆ ವ್ಯಕ್ತವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು