News Karnataka Kannada
Sunday, May 05 2024
ಅಡುಗೆ ಮನೆ

ರುಚಿಕರವಾದ ಬಾಳೆಕಾಯಿ ಟಿಕ್ಕಾ ಮಾಡುವ ವಿಧಾನ

banana tikka
Photo Credit : Freepik

ಭಾರತದ ಅನೇಕ ಭಾಗಗಳಲ್ಲಿ ಬಾಳೆಕಾಯಿ ಅತ್ಯಂತ ಜನಪ್ರಿಯ ತರಕಾರಿಯಾಗಿದೆ. ಇದರ ರುಚಿ ಅಷ್ಟೇನೂ ಉತ್ತಮವಿಲ್ಲದಿದ್ದರೂ, ಇದರಿಂದ ಚಿಪ್ಸ್, ಕರಿಗಳಂತಹ ರುಚಿಕರ ತಿನಿಸುಗಳನ್ನು ತಯಾರಿಸಲಾಗುತ್ತದೆ. ಬಾಳೆಕಾಯಿ ಬಾಳೆಹಣ್ಣಿಗಿಂತ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದೆ. ಬಾಳೆಕಾಯಿ ಮಧುಮೇಹ ಮತ್ತು ರಕ್ತದೊತ್ತಡವಿರುವ ರೋಗಿಗಳಿಗೆ ಅತ್ಯುತ್ತಮ. ಈ ಬಾಳೆಕಾಯಿಯಿಂದ ನೀವಿಂದು ಟಿಕ್ಕಾ ಮಾಡುವ ವಿಧಾನ ತಿಳಿದುಕೊಳ್ಳಿ. . .

ಬೇಕಾಗುವ ಪದಾರ್ಥಗಳು…

  • ಬಾಳೆಕಾಯಿ- 3
  • ಹಸಿ ಮೆಣಸಿನಕಾಯಿ – 2
  • ಶುಂಠಿ- ಸ್ವಲ್ಪ
  • ಬೇಯಿಸಿದ ಬಟಾಣಿ – 1/4 ಬಟ್ಟಲು
  • ಹಿಂಗು – 1 ಚಿಟಿಕಿ
  • ಅಚ್ಚಖಾರದ ಪುಡಿ– ¼ ಚಮಚ
  • ಗರಂ ಮಸಾಲ ಪುಡಿ – 1/2 ಚಮಚ
  • ಆಮ್ಚೂರ್ ಪುಡಿ – 1/4 ಚಮಚ
  • ಉಪ್ಪು – ರುಚಿಗೆ ತಕ್ಕಂತೆ
  • ಎಣ್ಣೆ – ಸ್ವಲ್ಪ
  • ಶಾವಿಗೆ – ಸ್ವಲ್ಪ

ಮಾಡುವ ವಿಧಾನ…

  • ಮೊದಲು ಬಾಳೆಕಾಯಿ ಬೇಯಿಸಿ, ಸಿಪ್ಪೆ ತೆಗೆಯಿರಿ. ಒಂದು ಬಟ್ಟಲಿಗೆ ಹಾಕಿ ನುಣ್ಣಗೆ ಮಾಡಿಕೊಳ್ಳಿ. ಮತ್ತೊಂದೆಡೆ ಹಸಿ ಮೆಣಸಿನಕಾಯಿ, ಶುಂಠಿ ಮತ್ತು ಬಟಾಣಿಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಈಗ ಈ ಮಿಶ್ರಣವನ್ನು ಬೇಯಿಸಿದ ಬಾಳೆಕಾಯಿಗೆ ಹಾಕಿ ಮಿಶ್ರಣ ಮಾಡಿಕೊಳ್ಳಿ.
  • ಇದಕ್ಕೆ ಹಿಂಗು, ಕೆಂಪು ಮೆಣಸಿನ ಪುಡಿ, ಗರಂ ಮಸಾಲ ಪುಡಿ, ಆಮ್ಚೂರ್ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
  • ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಮಿಶ್ರಣವನ್ನು ಸಣ್ಣ ಉಂಡೆ ಮಾಡಿ, ಸ್ವಲ್ಪ ಪುಡಿ ಮಾಡಿದ ಶಾವಿಗೆಯಲ್ಲಿ ಅದ್ದಿ, ಎಣ್ಣೆಗೆ ಹಾಕಿ ಬಂಗಾರದ ಬಣ್ಣಕ್ಕೆ ಬರುವರೆಗೆ ಕರಿಯಿರಿ. ಇದೀಗ ರುಚಿಕರವಾದ ಬಾಳೆಕಾಯಿ ಟಿಕ್ಕಾ ಸವಿಯಲು ಸಿದ್ಧ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು