News Karnataka Kannada
Friday, May 03 2024
ಮಂಗಳೂರು

ಮಂಗಳೂರು: ಕಡಲಬ್ಬರ ಸಾಧ್ಯತೆ – ಸಮುದ್ರ ತೀರದ ನಿವಾಸಿಗಳಿಗೆ, ಮೀನುಗಾರರಿಗೆ ಎಚ್ಚರಿಕೆ

Possibility of sea breezes - Warning to seafarers, fishermen
Photo Credit : News Kannada

ಮಂಗಳೂರು: ಫೆ. 15 ರಿಂದ ಫೆ.16ರ ರಾತ್ರಿ 8.30 ರವರೆಗೆ ಕಡಲಬ್ಬರ ಹೆಚ್ಚಾಗಲಿದೆ ಎಂದು ಕೇಂದ್ರ ಸಮುದ್ರ ಸ್ಥಿತಿ ಅಧ್ಯಯನ ಸಂಶೋಧನಾ ಕೇಂದ್ರ (ಐನ್ ಸಿಓಐಎಸ್) ಎಚ್ಚರಿಕೆ ನೀಡಿದೆ.

ಕರ್ನಾಟಕ, ಕೇರಳ, ಲಕ್ಷದೀಪ, ತಮಿಳುನಾಡು, ಗೋವಾ, ಮಹಾರಾಷ್ಟ್ರ, ಸಮುದ್ರದಲ್ಲಿ ಕಡಲು ಅಬ್ಬರದಿಂದ ಕೂಡಿರುವ ಸಾಧ್ಯತೆ ಇದೆ .

ಆದುದರಿಂದ ಮೀನುಗಾರರು ಮತ್ತು ಕಿನಾರೆಯ ಜನರು ಎಚ್ಚರಿಕೆ ವಹಿಸಬೇಕು ಎಂದು ಹೇಳಿದೆ.ಈ ಅವಧಿಯಲ್ಲಿ ಕಡಲಿನಲ್ಲಿ ಭಾರಿ ಗಾತ್ರದ ಅಲೆಗಳು ಉಂಟಾಗುವ ಸಾಧ್ಯತೆ ಇದೆ. ಕೇರಳ ಕಿನಾರೆಯಲ್ಲಿ ಎರಡು ಮೀಟರ್ ವರೆಗೆ ಮತ್ತು ಕರ್ನಾಟಕ ಕಿನಾರೆಯಲ್ಲಿ 1.8 ಮೀಟರ್ ಎತ್ತರದವರೆಗಿನ ಅಲೆಗಳು ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಈ ವೇಳೆ ಕಡಲ ಕೊರೆತ ಮತ್ತು ಸಮುದ್ರ ಅಬ್ಬರದಿಂದ ಅನಾಹುತವಾಗುವ ಸಾಧ್ಯತೆಯಿದ್ದು ಸಮುದ್ರ ಕಿನಾರೆಯಲ್ಲಿ ವಾಸಿಸುವ ಮನೆಯವರು ಕರಾವಳಿಯಿಂದ ತಾತ್ಕಾಲಿಕ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ವಿನಂತಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು