News Karnataka Kannada
Thursday, May 02 2024
ಮಂಗಳೂರು

ಮಂಗಳೂರು: ಬಾಳಿಗಾ ಸಾವಿಗೆ ನ್ಯಾಯ ನೀಡಲಾಗದ ಪರಿಣಾಮವನ್ನು ಎದುರಿಸಲಿದ್ದಾರೆ- ಸಂತೋಷ್ ಬಜಾಲ್

Mangaluru: Vedavyas Kamath will face the consequences of not providing justice to Baliga's death: Santhosh Bajal
Photo Credit : By Author

ಮಂಗಳೂರು:  ವೆಂಕಟರಮಣ ದೇವರ ಭಕ್ತ, ಜಿಎಸ್ ಬಿ ಸಮುದಾಯದ ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಸಾವಿಗೆ ನ್ಯಾಯ ಒದಗಿಸಲಾಗದ ಪರಿಣಾಮವನ್ನು ಈ ಬಾರಿಯ ಚುನಾವಣೆಯಲ್ಲಿ ಮಂಗಳೂರು‌ ನಗರ ದಕ್ಷಿಣ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತರು ಎದುರಿಸಲಿದ್ದಾರೆ ಎಂದು ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ರವರು ಹೇಳಿದರು.

ಬೆಂಗರೆಯಲ್ಲಿ ಡಿವೈಎಫ್ಐ ನೇತೃತ್ವದಲ್ಲಿ ನಡೆದ ಯುವಜನ ಸಮಾವೇಶವನ್ನು ಉದ್ಘಾಟಿಸಿ ಮತಾನಾಡುತ್ತ  ಗ್ರಾಮ ಪಂಚಾಯಿತಿಯಿಂದ ಕೇಂದ್ರ ಸರಕಾರದವರೆಗೂ ನಮ್ಮನ್ನಾಳುವ ಬಿಜೆಪಿ ಸರಕಾರ ಯುವಜನರ ಯಾವೊಂದು ಆಶೋತ್ತರಗಳನ್ನು ಈಡೇರಿಸಲಿಲ್ಲ. ವರುಷಕ್ಕೆರಡು ಕೋಟಿ ಉದ್ಯೋಗವನ್ನು ಸೃಷ್ಟಿಸುವ ಬದಲು ಇರುವ ಉದ್ಯೋಗಗಳನ್ನು ಕಳೆದುಕೊಳ್ಳುವಂತಾಗಿದೆ. ಉದ್ಯೋಗ ಇಲ್ಲದೆ ಕಂಗಾಲಾಗಿರುವ ಯುವಜನತೆ ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಅಕ್ರಮ ದಂಧೆಗಳನ್ನು ನಡೆಸುವ ಕ್ರಿಮಿನಲ್ ಗಳಾಗಿ ಪರಿವರ್ತನೆಗೊಂಡಿದ್ದಾರೆ.

ನಗರ ದಕ್ಷಿ ಣದ ಶಾಸಕ ವೇದವ್ಯಾಸ ಕಾಮತರ ಹಿಂಬಾಲಕರೆಲ್ಲರು ಜೂಜು ಕೇಂದ್ರಗಳನ್ನು, ಜುಗಾರಿ ಅಡ್ಡೆಗಳನ್ನು, ಅಕ್ರಮ ಮರಳುಗಾರಿಕೆಗಳನ್ನು , ಬೆಟ್ಟಿಂಗ್ ದಂಧೆ ನಡೆಸುವಂತಹ ತಲೆಹಿಡುಕರೆಂದು ಗಮನಿಸಬಹುದು. ದುಡಿದು ತಿನ್ನುವ ಬಡವರ ಗಳಿಕೆಯನ್ನು ನುಂಗುವ ಗ್ಯಾಂಬ್ಲರ್ ಗಳನ್ನು , ಉದ್ಯೋಗವಿಲ್ಲದೆ ಬೆಳೆದು ನಿಂತಿರುವ ಮನೆಯ ಯುವಕರನ್ನು ಹಾಳು ಮಾಡುವ ಇಂತಹ ಕ್ರಿಮಿನಲ್ ಗಳನ್ನು ಮಟ್ಟಹಾಕಬೇಕಾದರೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕೆಂದು ಕರೆ ನೀಡಿದರು.

ವೇದಿಕೆಯಲ್ಲಿ ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ ಕೆ ಇಮ್ತಿಯಾಜ್, ಮಾಜಿ ರಾಜ್ಯಾಧ್ಯಕ್ಷರಾದ ಸುನಿಲ್ ಕುಮಾರ್ ಬಜಾಲ್, ಡಿವೈಎಫ್ಐ ನಾಯಕರಾದ ನವೀನ್ ಕೊಂಚಾಡಿ, ತಾಯ್ಯುಬ್ ಬೆಂಗ್ರೆ, ಹನೀಫ್,ನೌಶಾದ್ ರವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
15229
Jaya Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು