News Karnataka Kannada
Friday, May 03 2024
ಮಂಗಳೂರು

ಮಂಗಳೂರು: 1.06 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್‌ ಅವರಿಂದ ಶಿಲಾನ್ಯಾಸ

MLA Vedavyas Kamath lays foundation stone for rs 1.06 crore project
Photo Credit : News Kannada

ಮಂಗಳೂರು: ಮಹಾನಗರಪಾಲಿಕೆಯ 5ನೇ ಅತ್ತಾವರ ವಾರ್ಡ್‌ನ ಪ್ರಮುಖ 3ನೇ ಅಡ್ಡರಸ್ತೆಯಲ್ಲಿರುವ ಶ್ರೀ ಕೋಡ್ದಬ್ಬು ದೈವಸ್ಥಾನದ ಪರಿಸರದಲ್ಲಿ ಒಟ್ಟು 1 ಕೋಟಿ 06 ಲಕ್ಷ ರೂ ಮೊತ್ತದ ಮೂರು ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಇಂದು (ಫೆ.10, ಶುಕ್ರವಾರ) ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಾಮಗಾರಿಗಳ ವಿವರ ಮಾಹಿತಿ ನೀಡಿದರು. ಸ್ಥಳೀಯ ಕಾರ್ಪೊರೇಟರ್‌ ಶೈಲೇಶ್ ಶೆಟ್ಟಿ ಅವರ ಸಹಕಾರದೊಂದಿಗೆ ಈ ವಿಶೇಷ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ರಾಜ್ಯ ಸರಕಾರದ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ ಅಡಿ ಅನುದಾನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳೂರು ನಗರದ ಅಭಿವೃದ್ಧಿಗಾಗಿ 125 ಕೋಟಿ ರೂ ಅನುದಾನ ಒದಗಿಸಿದ್ದಾರೆ. ಅದರಲ್ಲಿ 1 ಕೋಟಿ 6 ಲಕ್ಷ ರೂ.ಗಳನ್ನು ಕೋಡ್ದಬ್ಬು ದೈವಸ್ಥಾನ ಪರಿಸರದ ಅಭಿವೃದ್ಧಿಗೆ ನೀಡಲಾಗಿದೆ. ಈ ಮೊತ್ತದಲ್ಲಿ 44 ಲಕ್ಷ ರೂ ವೆಚ್ಚದಲ್ಲಿ ದೈವಸ್ಥಾನದ ಹಿಂದೆ ತಡೆಗೋಡೆ ನಿರ್ಮಾಣ, 38 ಲಕ್ಷ ರೂ ವೆಚ್ಚದಲ್ಲಿ ಅಂಬೇಡ್ಕರ್ ಸಮುದಾಯ ಭವನ ಮತ್ತು ಚರಂಡಿ ಕಾಮಗಾರಿ, 25 ಲಕ್ಷ, ರೂ ವೆಚ್ಚದಲ್ಲಿ ಇಂಟರ್‌ಲಾಕ್ ಅಳವಡಿಕೆ- ನಡೆಸಲಾಗುತ್ತದೆ ಎಂದು ಶಾಸಕರು ವಿವರಿಸಿದರು.

ದಲಿತರು, ಪರಿಶಿಷ್ಟ ಜಾತಿ, ಪಂಗಡಗಳ ಜನರ ಅಭಿವೃದ್ಧಿಗಾಗಿ ಸರಕಾರ ಗರಿಷ್ಠ ಆದ್ಯತೆ ನೀಡಿದ್ದು, ಈ ಸಮಾಜದ ಅಭಿವೃದ್ಧಿಗೆ ಅನುದಾನದ ಬಳಕೆ ಮಾಡಲಾಗುತ್ತದೆ. ಆ ಮೂಲಕ ಪರಿಶಿಷ್ಟ ಜಾತಿ, ಪಂಗಡಕ್ಕೆ ನ್ಯಾಯ ಕೊಡುವ ಕೆಲಸ ಮಾಡಲಾಗುತ್ತಿದೆ ಎಂದು ಶಾಸಕ ಕಾಮತ್‌ ಹೇಳಿದರು.

ಈ ಸಂದರ್ಭದಲ್ಲಿ ಮ. ನ. ಪಾ ಸದಸ್ಯರಾದ ಶೈಲೇಶ್. ಬಿ. ಶೆಟ್ಟಿ,ಮಹಾನಗರ ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ ಚಂದ್ರ ಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ, ಎಸ್. ಸಿ ಮೋರ್ಚಾ ದ ಅಧ್ಯಕ್ಷರಾದ ರಘುವೀರ್ ಬಾಬುಗುಡ್ಡ,ಶಕ್ತಿ ಕೇಂದ್ರದ ಪ್ರಮುಖರಾದ ದರ್ಮೆಂದ್ರ ಅಮೀನ್, ಪುಷ್ಪರಾಜ್ ಶೆಟ್ಟಿ, ಮಹಿಳಾ ಮೋರ್ಚಾ ದ ಉಪಾಧ್ಯಕ್ಷರಾದ ರೂಪ ಕೆ. ಎಸ್, ಲಲಿತಾ, ಬಿಜೆಪಿ ಮುಖಂಡರಾದ ವಸಂತ ಪೂಜಾರಿ, ಬೂತ್ ಅಧ್ಯಕ್ಷರಾದ ಪ್ರಮೋದ್ ಕೊಟ್ಟಾರಿ, ಅರ್ಚನಾ ರೈ, ವಾರ್ಡಿನ ಕಾರ್ಯಕರ್ತರಾದ ನಾರಾಯಣಶೆಟ್ಟಿ, ವಿಕ್ರಮ್ , ಮಧುಸೂದನ್ ಕುಲಾಲ್ ಪ್ರಾಣೇಶ್, ಪ್ರಕಾಶ್, ತರುಣ್, ನವೀನ್, ನಾರಾಯಣ, ಸ್ಥಳೀಯ ಮುಖಂಡರಾದ .ಶ್ರೀಯುತರಾದ ಟಿ.ಹೊನ್ನಯ್ಯ ಗುರಿಕಾರರು,ಬಿ.ಸುಂದರ ಅರ್ಚಕರು,ಜಯಂತ ಪೂಜಾರಿ,ಗಿರೀಶ್ಚಂದ್ರ ಗುರಿಕಾರರು, ತುಕಾರಾಮ, ರಮಾನಂದ, ಶಾಂತಪ್ಪ ಶೇಖರ್, ನೀತಾ,ಉಮೇಶ್, ಶ್ಯಾಮ ಕರ್ಕೇರ, ಶಶಿಕಾಂತ್ ಬಾಬು ಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು