News Karnataka Kannada
Sunday, May 05 2024
ಮಂಗಳೂರು

ಮಂಗಳೂರು: ಬಹುನಿರೀಕ್ಷಿತ “ಶಕಲಕ ಬೂಮ್ ಬೂಮ್” ಚಿತ್ರ ಜನವರಿ 20 ರಂದು ತೆರೆಗೆ

Shaka
Photo Credit : News Kannada

ಮಂಗಳೂರು: “ಯುಎನ್ ಸಿನೆಮಾಸ್ ಬ್ಯಾನರ್ ನಡಿ ನಿರ್ಮಾಣಗೊಂಡಿರುವ ಶಕಲಕ ಬೂಮ್ ಬೂಮ್ ತುಳು ಚಿತ್ರ ಇದೇ ಬರುವ ಜ.20ರಂದು ತುಳುನಾಡಿನಾದ್ಯಂತ ಬಿಡುಗಡೆಯಾಗಲಿದೆ” ಎಂದು ಚಿತ್ರ ನಿರ್ದೇಶಕ ನಿತ್ಯಾನಂದ ನಾಯಕ್ ನರಸಿಂಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

“ಕಾಮಿಡಿ, ಹಾರರ್ ವಿಭಿನ್ನ ಕಥಾಹಂದರದ ಚಲನಚಿತ್ರವನ್ನು ಶ್ರೀಶ ಎಳ್ಳಾರೆ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ನಿತ್ಯಾನಂದ ನಾಯಕ್ ನರಸಿಂಗೆ, ಉಮೇಶ್ ಪ್ರಭು ಮಾಣಿಬೆಟ್ಟು ನಿರ್ಮಾಪಕರಾಗಿದ್ದಾರೆ. ಡಾಲ್ವಿನ್ ಕೊಳಲಗಿರಿ ಚಿತ್ರದ ಸಂಗೀತ ನಿರ್ದೇಶಕರಾಗಿದ್ದರೆ.

ತುಳುನಾಡಿನ ಖ್ಯಾತ ಛಾಯಾಗ್ರಾಹಕರಾದ ಪ್ರಜ್ವಲ್ ಸುವರ್ಣ ಹಾಗೂ ಅರುಣ್ ರೈ ಪುತ್ತೂರು ಕ್ಯಾಮರಾ ಕೈಚಳಕವಿದೆ” ಎಂದರು.

ಚಿತ್ರದ ಪ್ರಮುಖ ಭೂಮಿಕೆಯಲ್ಲಿ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್, ಉಮೇಶ್ ಮಿಜಾರ್, ಪ್ರವೀಣ್ ಮಾರ್ಕಮೆ, ಮಿಮಿಕ್ರಿ ಶರಣ್, ಕಥಾನಾಯಕನಾಗಿ ಗಾಡ್ರಿನ್ ಸ್ಪಾರ್ಕಲ್ ಹಾಗೂ ಕಥಾನಾಯಕಿಯಾಗಿ ಲಕ್ಷಾ ಶೆಟ್ಟಿ, ರೂಪಶ್ರೀ ವರ್ಕಾಡಿ, ಮನೋಹರ್‌ ಶೆಟ್ಟಿ ನಂದಳಿಕೆ, ವಸಂತ್ ಮುನಿಯಾಲ್, ಹರೀಶ್ ಗಾಳಿಪಟ, ಸುನಿಲ್ ಕಡ್ತಲ, ಯತೀಶ್ ಪೂಜಾರಿ,
ಯಶವಂತ್, ಪ್ರವೀಣ್ ಆಚಾರ್ಯ, ಕಾಮಿಡಿ ಕಿಲಾಡಿ ಖ್ಯಾತಿಯ ರಾಧೇಶ್, ಕಾಮಿಡಿ ಗ್ಯಾಂಗ್ ಖ್ಯಾತಿಯ ರಾಜೇಶ್ ದಾನಶಾಲೆ, ಲಂಚುಲಾಲ್, ರಾಜೇಶ್ವರಿ ಕುಲಾಲ್, ಧೀರಜ್, ಶಿವಾನಂದ, ಯಜ್ಞೆಶ್ ಶೆಟ್ಟಿ ಅಭಿನಯಿಸಿದ್ದಾರೆ.

ತುಳು ಸಿನೆಮಾದಲ್ಲಿ ವೈವಿಧ್ಯತೆ ಇರಬೇಕು ಎಂಬ ನೆಲೆಯಲ್ಲಿ ಕಾಮಿಡಿ, ಹಾರರ್, ಥ್ರಿಲ್ಲರ್, ಸಸ್ಪೆನ್ಸ್ ನ್ನು ಹೊಂದಿರುವ ಹೊಸತನದ ಚಿತ್ರ ಶಕಲಕ ಬೂಮ್ ಬೂಮ್ ಆಗಿದೆ.

ಜನರನ್ನು ಮೋಸ ಮಾಡುತ್ತ ಬದುಕುವವರು, ಸಂಪತ್ತಿನ ಆಸೆಯಿಂದ ಬಂದು ಪಾಳು ಬಿದ್ದ ಮನೆಯಲ್ಲಿ ಬಂಧಿಯಾಗುತ್ತಾರೆ. ಆ ಮನೆಯ ರಹಸ್ಯ ಏನು? ಈ ಹಿಂದೆ ಆ ಮನೆಯಲ್ಲಿ ಏನಾಗಿತ್ತು? ನ್ಯಾಯ ಗೆಲ್ಲುತ್ತದಾ? ಸತ್ಯಕ್ಕೆ ಜಯವಿದೆಯಾ? ಎನ್ನುವ ವಿಶಿಷ್ಟವಾದ ಕಥಾಹಂದರ ಹೊಂದಿರುವ ವಿಭಿನ್ನವಾದ ಚಿತ್ರ ಇದಾಗಿದೆ ಎಂದು ಚಿತ್ರ ನಿರ್ಮಾಪಕ ನಿತ್ಯಾನಂದ ನಾಯಕ್ ನರಸಿಂಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಗಾಡ್ರಿನ್ ಸ್ಪಾರ್ಕಲ್, ಸುನೀಲ್ ಕಡ್ತಲ, ಲಂಚು ಲಾಲ್, ಸಂಗೀತ ನಿರ್ದೇಶಕ ಡಾಲ್ವಿನ್ ಕೊಳಲಗಿರಿ ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು