News Karnataka Kannada
Friday, May 17 2024
ಮಂಗಳೂರು

ಮೂಡಬಿದಿರೆ: ಏಳದೆ ಮಂದಾರ ರಾಮಾಯಣೊ -2022

Ezhade Mandara Ramayanano-2022
Photo Credit : By Author

ಮೂಡಬಿದಿರೆ: ತುಳುವರ್ಲ್ಡ್(ರಿ) ಮಂಗಳೂರು, ಧವಲತ್ರಯ ಜೈನ ಕಾಶಿ ಟ್ರಸ್ಟ್ ಮೂಡಬಿದಿರೆ, ತುಳುಕೂಟ ಬೆದ್ರ ಮತ್ತು ಮಂದಾರ ಪ್ರತಿಷ್ಠಾನ ಆಯೋಜಿಸುತ್ತಿರುವ ಪರಮ ಪೂಜ್ಯ ಸ್ವಸ್ತಿ ಶ್ರೀ ಭಾರತ ಭೂಷಣ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯ ಆರ್ಶಿವಾದದಿಂದ ತುಳು ರಾಮಾಯಣ – ಪಾರಾಯಣ ಸಪ್ತಾಹ ಕಾರ್ಯಕ್ರಮ ಏಳದೆ ಮಂದಾರ ರಾಮಾಯಣೊ -2022, ತುಳು ವಾಲ್ಮೀಕಿ ಮಂದಾರ ಕೇಶವ ಭಟ್ಟರ ತುಳು ಮಹಾಕಾವ್ಯ ‘ಸುಗಿಪು-ದುನಿಪು’ ಕಾರ್ಯಕ್ರಮ ಜು.31 ರಿಂದ ಆಗಸ್ಟ್ 6(ಆಟಿ 15-21)ರವರೆಗೆ ಪ್ರತೀ ದಿನ ಸಂಜೆ ಗಂಟೆ 4 ರಿಂದ 7 ಗಂಟೆವರೆಗೆ ಸ್ವಸ್ತಿ ಶ್ರೀ ಭಟ್ಟಾರಕ ಸಭಾಭವನ, ಜೈನ ಮಠ ಮೂಡಬಿದಿರೆಯಲ್ಲಿ ನಡೆಯಲಿದೆ.

ನ್ಯೂಸ್ ಕನ್ನಡದ ಜೊತೆ ಮಾತನಾಡಿದ ಸುಗಿಪು-ದುನಿಪು ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿರುವ ಭಾಸ್ಕರ್ ರೈ ಕುಕ್ಕುವಳ್ಳಿ,  ಈ ಕಾರ್ಯಕ್ರಮ ಸುಮಾರು 5 ವರ್ಷದಿಂದ ಒಳ್ಳೆ ರೀತಿಯಲ್ಲಿ ನಡೆದುಕೊಂಡು ಬರುತ್ತಾ ಇದೆ. ಮಂದಾರ ರಾಮಾಯಣ ವಾಚನ ಪ್ರವಚನ ಕಾರ್ಯಕ್ರಮ ಸುಮಾರು ಹತ್ತಿಪ್ಪತ್ತು ವರ್ಷದಿಂದ ಮಾಡಿಕೊಂಡು ಬಂದಿದ್ದೇವೆ ಎಂದರು.

ನ್ಯೂಸ್ ಕನ್ನಡದ ಜೊತೆ ಮಾತನಾಡಿದ ಮಂದಾರ ರಾಜೇಶ್ ಭಟ್ ತುಳು ಕೂಟ ಬೆದ್ರ ಹಾಗೂ ಮಂದಾರ ಪ್ರತಿಷ್ಠಾನ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದು , ಬೇರೆ ಸಂಘಟನೆಗಳ ಜೊತೆಗೆ ತುಳು ಮನಸುಗಳು ಸೇರಿ ಕೆಲಸ ಮಾಡುತ್ತಿವೆ. ತುಳುವ ಸಂಸ್ಕೃತಿಯ ಎಲ್ಲಾ ತಿರುಳನ್ನು ಒಳಗೊಂಡಿರುವ ತುಳುಭಾಷೆಯ ಆಕರ ಗ್ರಂಥವಾಗಿರುವ ತುಳುವ ವಾಲ್ಮೀಕಿ ಮಂದಾರ ಕೇಶವ ಭಟ್ಟರು ಬರೆದ ರಾಮಾಯಣದ ಪಾರಾಯಣದಿಂದ ಆಗುವ ಮಹತ್ವವನ್ನು ಪ್ರಚಾರಪಡಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ ಎಂದರು.

ಜು. 31ರಂದು ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಜೈನ ಮಠದ ಪರಮ ಪೂಜ್ಯ ಸ್ವಸ್ತಿ ಶ್ರೀ ಭಾರತ ಭೂಷಣ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯ ಭಾಗವಹಿಸಲಿದ್ದಾರೆ.  ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸರ್ಕಾರದ ಇಂಧನ ಇಲಾಖೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ ಸುನಿಲ್ ಕುಮಾರ್ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮುಖ್ಯಸ್ಥ ದಯಾನಂದ ಕತ್ತಲ್ ಸರ್, ಪುರಸಭೆ ಮೂಡಬಿದ್ರೆಯ ಗುತ್ತಿಗಾರ್ ಪ್ರಸಾದ್ ಕುಮಾರ್ ಕೊಲ್ಲಾಪುರ ಶ್ರೀ ಮಹಾಲಕ್ಷ್ಮಿ ಕ್ಷೇತ್ರದ ಅನುವಂಶಿಕ ಪುರೋಹಿತ ಬಾಲಚಂದ್ರ ಹರಿಲಾತ್ಕರ್, ಪಟ್ಲ ಶೆಟ್ಟಿ ಸುದೇಶ್ ಕುಮಾರ್, ಕಲ್ಲಬೆಟ್ಟು ಎಕ್ಸಲೆಂಟ್ ಕಾಲೇಜಿನ ಅಧ್ಯಕ್ಷರು ಯುವರಾಜ್ ಜೈನ್ ಭಾಗಿಯಾಗಲಿದ್ದಾರೆ. ಯುಗಪುರುಷ ಕಿನ್ನಿಗೋಳಿ ಭುವನಾಭಿರಾಮ ಉಡುಪ ,ಸಾಹಿತಿ ಕಾಂತಾವರ ಡಾ. ನಾ ಮೊಗಸಾಲೆ ಅವರಿಗೆ ಮಂದಾರ ಸನ್ಮಾನ ನಡೆಯಲಿದೆ.

ಸುಗಿಪು-ದುನಿಪು’ ಮೊದಲ ಅಧ್ಯಾಯದ ಬಾಲಕಾಂಡ 

ಸುಗಿಪು: ಸತೀಶ್ ಶೆಟ್ಟಿ ಪಟ್ಲ, ಅಮೃತ ಅಡಿಗ

ದುನಿಪು: ಭಾಸ್ಕರ ರೈ ಕುಕ್ಕುವಳ್ಳಿ,

ಆಗಸ್ಟ್ 1 ರಂದು ನಡೆಯುವ ಕಾರ್ಯಕ್ರಮದಲ್ಲಿ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್  ಮುಖ್ಯಸ್ಥ ಡಾಕ್ಟರ್ ಶ್ರೀನಾಥ್ ಎಂ ಪಿ ಮಾಡಲಿದ್ದಾರೆ. ಅತಿಥಿಯಾಗಿ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಕೆ ಸುಚರಿತ ಶೆಟ್ಟಿ ಇತಿಹಾಸ ಸಂಶೋಧಕ ಡಾ. ಪುಂಡಿಕೈ ಗಣಪಯ್ಯ ಭಟ್, ಅಧಿಕಾರಿ ಕೆಪಿ ಜಗದೀಶ್, ಮೂಡಬಿದ್ರೆಯ ಹೆರಾಲ್ಡ್ ತೌವ್ರೋ, ಪತ್ರಿಕಾ ಸಂಪಾದಕ ಕೆ ವಿಠ್ಠಲ ಬಂಡಾರಿ ಹರೇಕಳ ಅವರಿಗೆ ಮಂದಾರ ಸನ್ಮಾನ ನಡೆಯಲಿದೆ.

ಸುಗಿಪು ದುನಿಪು ಎರಡನೆಯ ಅಧ್ಯಾಯದಲ್ಲಿ ಅಯೋಧ್ಯ ಕಾಂಡ

ಸುಗಿಪು : ಕಾವ್ಯಶ್ರೀ ಅಜೇರು, ಭರತ್ ರಾಜ್ ಶೆಟ್ಟಿ ಸಿದ್ದಕಟ್ಟೆ

ದುನಿಪು: ಮುನಿರಾಜ ರಂಜಾಳ

ಆಗಸ್ಟ್ 2 ರಂದು ನಡೆಯುವ ಕಾರ್ಯಕ್ರಮದಲ್ಲಿ ಉದ್ಘಾಟನೆಯನ್ನು ಕನ್ನಡ ಜಿಲ್ಲಾ ಪಂಚಾಯತ್ ನ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಉಪನಿರ್ದೇಶಕರು ಹಾಗೂ ಪ್ರಸಿದ್ಧ ಸಾಹಿತಿ ಡಾ. ಟಿ ಸಿ ಪೂರ್ಣಿಮಾ ಐಐಎಸ್. ಮೈಸೂರು, ಭುವನೇಂದ್ರ ಕಾಲೇಜು ಕಾರ್ಕಳ ದ ಪ್ರಾಧ್ಯಾಪಕ ಅರುಣ್ ಕುಮಾರ್ ಎಸ್ ಆರ್, ಸಂಘಟಕರಾದ ಗೋಪಾಲ ಕೃಷ್ಣ ಕುಲಾಲ್ ವಾಂತಿಚಾಲ್, ಪತ್ರಕರ್ತ ಜಯ ಮಣಿಯಂಪಾರ್ ಹಾಗೂ ಸಾಹಿತಿ ಹರಿಕೃಷ್ಣ ರೈ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಸುಗಿಪು ದುನಿ ಪು ನಾಲ್ಕನೇ ಅಧ್ಯಾಯದಲ್ಲಿ ಅಯೋಧ್ಯ ಕಾಂಡ

ಸುಗಿಪು : ದೇವಿಪ್ರಸಾದ್ ಆಳ್ವ ತಲಪಾಡಿ, ಮಲ್ಲಿಕಾ ಶೆಟ್ಟಿ ಸಿದ್ಧಕಟ್ಟೆ.

ದುನಿಪು: ಸದಾಶಿವ ಆಳ್ವಾ ತಲಪಾಡಿ.

ಆಗಸ್ಟ್ 3 ರ ಬುಧವಾರದ ಒಡಿಯೂರು ಸಂಸ್ಥಾನದ ಪರಮಾಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಥಿತಿಗಳಾಗಿ ಮೂಡಬಿದಿರೆಯ ಉದ್ಯಮಿ ಕೆ ಶ್ರೀಪತಿ ಭಟ್, ನಿಟ್ಟೆ ವಿಶ್ವ ವಿದ್ಯಾನಿಲಯದ ವಿಭಾಗ ಮುಖ್ಯಸ್ಥರಾದ ಡಾ. ಸಾಯಿ ಗೀತಾ, ದಕ್ಷಿಣ ಕನ್ನಡ ಜಿಲ್ಲಾ ಯೋಜನಾಧಿಕಾರಿ ಗಾಯತ್ರಿ ನಾಯಕ್, ಉದ್ಯಮಿ ಪಿಕೆ ಥಾಮಸ್ ಆಲಂಗಾರು, ಹಾಗೂ ವೈದ್ಯ ರತ್ನ ಡಾಕ್ಟರ್ ಭಾಸ್ಕರಾನಂದ ಕುಮಾರ್ ಇವರಿಗೆ ಸನ್ಮಾನ ನಡೆಯಲಿದೆ.

ಸುಗಿಪು ದುನಿಪು ಐದನೆಯ ಅಧ್ಯಾಯದಲ್ಲಿ ಅಯೋಧ್ಯಾಕಾಂಡ

ಸುಗಿಪು: ಶಿವಪ್ರಸಾದ್ ಎಡಪದವು, ಶಾಲಿನಿ ಹೆಬ್ಬಾರ್

ದುನಿಪು : ಡಾ. ದಿನಕರ ಎಸ್ ಪಚ್ಚನಾಡಿ

ಆಗಸ್ಟ್ 4ರಂದು ನಡೆಯುವ ಕಾರ್ಯಕ್ರಮದಲ್ಲಿ ಉದ್ಘಾಟನೆಯನ್ನು ಮಾಜಿ ಸಚಿವ ಕೆ ಅಭಯಚಂದ್ರ ಜೈನ್ ಮಾಡಲಿದ್ದಾರೆ. ಅತಿಥಿಗಳಾಗಿ ಶಿಮುಂಜೆ ಗುತ್ತು ಎಸ್ ಡಿ ಸಂಪತ್ ಸಾಮ್ರಾಜ್ಯ, ಉದ್ಯಮಿ ಅಬುಲ್ ಅಲಾ ಪುತ್ತಿಗೆ, ಜೈನ ಬಸದಿಯ ಮುಖ್ಯಸ್ಥರಾದ ದಿನೇಶ್ ಆನಡ್ಕ, ಮಂಗಳೂರು ತುಳುಕೂಟದ ಅಧ್ಯಕ್ಷರಾದ ದಾಮೋದರ ನಿಸರ್ಗ ಹಾಗೂ ಯಕ್ಷಗಾನ ಕಲಾವಿದರಾದ ಅಶೋಕ್ ಶೆಟ್ಟಿ ಸರಪಾಡಿ ಇವರಿಗೆ ಸನ್ಮಾನ ನಡೆಯಲಿದೆ.

ಸುಗಿಪು ದುನಿ ಪು ಆರನೇ ಅಧ್ಯಾಯದಲ್ಲಿ ಅಯೋಧ್ಯಾಕಾಂಡ

ಸುಗಿಪು : ಬಲಿಪ ಶಿವಶಂಕರ ಭಟ್, ಕುಮಾರಿ ಶುಭಾಂಜನ ಡಿ ಭಟ್

ದುನಿಪು : ಡಾ. ಪ್ರಭಾತ್ ಬಲ್ನಾಡು

ಆಗಸ್ಟ್ 5ರಂದು ನಡೆಯುವ ಈ ಕಾರ್ಯಕ್ರಮವನ್ನು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉದ್ಘಾಟನೆ ಮಾಡಲಿದ್ದಾರೆ. ಅತಿಥಿಗಳಾಗಿ ಉದ್ಯಮಿ ಸಿ ಎಚ್ ಅಬ್ದುಲ್ ಗಫೂರ್, ಮೂಡಬಿದಿರೆ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಮೇಘನಾಥ ಶೆಟ್ಟಿ, ಐ ಲೇಸಾ ದ ಅಂತರಾಷ್ಟ್ರೀಯ ಸಂಘಟಕರಾದ ಶಾಂತರಾಮ್ ಶೆಟ್ಟಿ ಬೆಂಗಳೂರು, ಸಾಹಿತಿ ವಿಜಯಲಕ್ಷ್ಮಿ ಕಟೀಲು, ಹಿರಿಯ ನ್ಯಾಯವಾದಿ ಕೆ ಆರ್ ಪಂಡಿತ್, ಶಾಮ ಆಳ್ವಾ ಕಡಾರು, ರವಿಕಾಂತ ಕೇಸರಿ ಕಡಾರು, ಗಮಕಿ ವಿದ್ವಾನ್ ಚಂದ್ರಯ್ಯ, ಕೂಡ್ಲು ಮಹಾಬಲ ಶೆಟ್ಟಿ ಇವರಿಗೆ ಸನ್ಮಾನ ನಡೆಯಲಿದೆ.

ಸುಗಿಪು ದುನಿಪು ಏಳನೇ ಅಧ್ಯಯನದಲ್ಲಿ ಅಯೋಧ್ಯಾಕಾಂಡ

ಸುಗಿಪು : ತೋನ್ಸೆ ಪುಷ್ಕಳ ಕುಮಾರ್, ಪ್ರಶಾಂತ್ ಪುತ್ತೂರು

ದುನಿಪು : ಭಾಸ್ಕರ ರೈ ಕುಕ್ಕುವಳ್ಳಿ

ಆಗಸ್ಟ್ 6 ರಂದು ನಡೆಯುವ ಕಾರ್ಯಕ್ರಮದಲ್ಲಿ ಉದ್ಘಾಟನೆಯನ್ನು ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆ ಮತ್ತು ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷರಾದ ಡಾ ಎಂ ಮೋಹನ್ ಆಳ್ವ ಉದ್ಘಾಟಿಸಲಿದ್ದಾರೆ. ಮಂದಾರ ಪ್ರತಿಷ್ಠಾನದ ಯೋಜನೆಯಲ್ಲಿ ಇಲ್ಲ್ ಇಲ್ಲ್ ಗ್ ಮಂದಾರ ರಾಮಾಯಣವನ್ನು ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಲಿದ್ದಾರೆ. ಅತಿಥಿಗಳಾಗಿ ಡಾ. ಹರಿಕೃಷ್ಣ ಪುನರೂರು, ಮಂಗಳೂರು ಎಂ ಆರ್ ಪಿ ಎಲ್ ನ ಮಹಾ ಪ್ರಬಂಧಕರಾದ ವೀಣಾ ಪಿ ಶೆಟ್ಟಿ, ಮಂದಾರ ಕೇಶವ ಭಟ್ಟರ ಮಗಳು ಕುಮಾರಿ ಶಾರದಾಮಣಿ, ಯಕ್ಷಗಾನ ಭಾಗವತರಾದ ಲೀಲಾವತಿ ಬೈಪಡಿತ್ತಾಯ, ಮೂಡಬಿದ್ರೆ ತುಳು ಕೂಟದ ಸ್ಥಾಪಕ ಅಧ್ಯಕ್ಷರಾದ ಚಂದ್ರಹಾಸ ದೇವಾಡಿಗ ಇವರಿಗೆ ಸನ್ಮಾನ ನಡೆಯಲಿದೆ. ಮಂದಾರ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ ಪ್ರಭಾಕರ ಜೋಶಿ ವಂದನಾರ್ಪಣೆ ಮಾಡಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು